- Kannada News Photo gallery Inverter Split Air Conditioners AC Budget Price in India Top 7 ACs With Best Deal Price on Amazon and Flipkart
AC: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ ಎಸಿ: ಈ ಬೇಸಿಗೆಗೆ ಇದುವೇ ಉತ್ತಮ ಆಯ್ಕೆ
Air Conditioners: ಬೇಸಿಗೆ ಬಂತೆಂದರೆ ಮನೆಯಲ್ಲಾಗಲಿ, ಹೊರಗಾಗಲಿ ಬಿಸಿಲಿನ ಝಳಕ್ಕೆ ನಾವು ಕಷ್ಟಪಡುತ್ತೇವೆ. ಈ ಬಿಸಿಲಿನ ಶಾಖವನ್ನು ಸಹಿಸಲು ಸಾಧ್ಯವಿಲ್ಲ ಎಂಬಂತಾಗುತ್ತದೆ. ಹೊರಗೆ ಸುಡು ಬಿಸಿಲು, ಮನೆಯಲ್ಲೂ ಬಿಸಿ ಬಿಸಿ. ಹೀಗಾಗಿ ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ, ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ, ಫ್ಲಿಪ್ ಕಾರ್ಟ್ ಕಡಿಮೆ ಬೆಲೆಗೆ ಹವಾನಿಯಂತ್ರಣ ಎಸಿ ಅನ್ನು ತಂದಿದೆ.
Updated on: Apr 11, 2022 | 1:50 PM

ಬೇಸಿಗೆ ಬಂತೆಂದರೆ ಮನೆಯಲ್ಲಾಗಲಿ, ಹೊರಗಾಗಲಿ ಬಿಸಿಲಿನ ಝಳಕ್ಕೆ ನಾವು ಕಷ್ಟಪಡುತ್ತೇವೆ. ಈ ಬಿಸಿಲಿನ ಶಾಖವನ್ನು ಸಹಿಸಲು ಸಾಧ್ಯವಿಲ್ಲ ಎಂಬಂತಾಗುತ್ತದೆ. ಹೊರಗೆ ಸುಡು ಬಿಸಿಲು, ಮನೆಯಲ್ಲೂ ಬಿಸಿ ಬಿಸಿ. ಹೀಗಾಗಿ ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ, ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ, ಫ್ಲಿಪ್ ಕಾರ್ಟ್ ಕಡಿಮೆ ಬೆಲೆಗೆ ಹವಾನಿಯಂತ್ರಣ ಎಸಿ ಅನ್ನು ತಂದಿದೆ. (ಸಾಂದರ್ಭಿಕ ಚಿತ್ರ)

ಗೋಡ್ರೆಜ್ ಕಂಪನಿಯ ಈ ಎಸಿ ಅತ್ಯಂತ ಅಗ್ಗದ ಬೆಲೆಗೆ ಮಾರಾಟ ಆಗುತ್ತಿದೆ. ಫ್ಲಿಪ್ ಕಾರ್ಟ್ ನಲ್ಲಿ ಇದರ ಬೆಲೆ ಕೇವಲ 22,990 ರೂ. ಎಂದರೆ ನಂಬಲೇ ಬೇಕು. ಈ ಎಸಿ ಮಧ್ಯಮ ಗಾತ್ರದ ಕೋಣೆಗೆ ಸೂಕ್ತವಾಗಿದೆ. ಕಂಪನಿಯು ಈ ಎಸಿ ಮೇಲೆ ಒಂದು ವರ್ಷದ ವಾರಂಟಿ ಮತ್ತು ಕಂಪ್ರೆಸರ್ ಮೇಲೆ ಐದು ವರ್ಷಗಳ ವಾರಂಟಿ ಕೂಡ ನೀಡುತ್ತದೆ. (ಸಾಂದರ್ಭಿಕ ಚಿತ್ರ)

iFFALCON 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯ ಪ್ರಾರಂಭಿಕ ಬೆಲೆ ಕೊಂಚ ದುಬಾರಿಯಾದರೂ ಅತ್ಯುತ್ತಮವಾಗಿದೆ. ಇದರ ಬೆಲೆ ರೂ. 44,990 ಆಗಿದೆ, ಆದರೆ ಇದು ಮಾರಾಟದಲ್ಲಿ ರೂ. 26,999 ಕ್ಕೆ ಲಭ್ಯವಿದೆ. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಕೂಡ ಲಭ್ಯವಿದ್ದು ಮತ್ತಷ್ಟು ಕಡಿಮೆ ಬೆಲೆಗೆ ನಿಮ್ಮದಾಗಿಸಬಹುದು. (ಸಾಂದರ್ಭಿಕ ಚಿತ್ರ)

ಬ್ಲೂಸ್ಟಾರ್ನ ಒಂದು ಟನ್ 3 ಸ್ಟಾರ್ ಎಸಿ 100 ರಿಂದ 120 ಚದರ ಅಡಿಯ ಕೋಣೆಗೆ ಸೂಕ್ತವಾಗಿದೆ. ಇದು R22 ಗ್ಯಾಸ್ನೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್ ಕಾರ್ಟ್ ನಲ್ಲಿ ನೀವು ಕೇವಲ 23,490 ರೂ.ಗೆ ಖರೀದಿಸಬಹುದು. (ಸಾಂದರ್ಭಿಕ ಚಿತ್ರ)

ಇನ್ನು ಪ್ರಸಿದ್ಧ MarQ ಬೈ ಫ್ಲಿಪ್ಕಾರ್ಟ್ 1.5 ಟನ್ 5 ಸ್ಟಾರ್ ವಿಂಡೋ AC ಯ ಪ್ರಾರಂಭಿಕ ಬೆಲೆ 31,999 ರೂ. ಆಗಿದೆ, ಆದರೆ ಇದು ಆಫರ್ ನಲ್ಲಿ 26,499 ರೂ.ಗಳಲ್ಲಿ ಲಭ್ಯವಿದೆ. ಇದಕ್ಕೆ ಇತರೆ ಆಫರ್ ನೀಡಲಾಗಿದ್ದು HDFC ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 1500 ರೂಪಾಯಿಗಳ ರಿಯಾಯಿತಿ ಇರುತ್ತದೆ. (ಸಾಂದರ್ಭಿಕ ಚಿತ್ರ)

ನಿಮ್ಮ ಚಿಕ್ಕ ಕೋಣೆಗೆ ನೀವು AC ಅನ್ನು ಹುಡುಕುತ್ತಿದ್ದರೆ, 0.8 ಟನ್ ಸ್ಪ್ಲಿಟ್ AC ಅತ್ಯುತ್ತಮ ಆಯ್ಕೆಯಾಗಿದೆ. ಮಾರ್ಕ್ಯೂ 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯನ್ನು 21,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. (ಸಾಂದರ್ಭಿಕ ಚಿತ್ರ)

ಇದೇ ಕಂಪನಿಯ ಮತ್ತೊಂದು MarQ ಬೈ 0.8 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಫ್ಲಿಪ್ ಕಾರ್ಟ್ ಮಾರಾಟದಲ್ಲಿ ರೂ, 21,990 ಕ್ಕೆ ಲಭ್ಯವಿದೆ. ಇದರಲ್ಲಿ ಕೂಡ ನೀವು HDFC ಯ ಕ್ರೆಡಿಟ್ ಕಾರ್ಡ್ ನೊಂದಿಗೆ ಪಾವತಿಸಿದರೆ 1500 ರೂ. ವರೆಗಿನ ರಿಯಾಯಿತಿ ಪಡೆಯಬಹುದು. (ಸಾಂದರ್ಭಿಕ ಚಿತ್ರ)



















