ಮನೆ ಒಳಗೇ ಇದ್ದ ಕಳ್ಳರು; ಸೋನಂ ಕಪೂರ್​ ನಿವಾಸದಿಂದ ಕೋಟಿಕೋಟಿ ಕದ್ದವರು ಅರೆಸ್ಟ್​

ಹರೀಶ್ ಅಹುಜಾ ಅವರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಅವರು ವಂಚನೆಗೆ ಒಳಗಾಗಿದ್ದರು. ಆನಂದ್ ಅವರಿಗೆ 27 ಕೋಟಿ ರೂಪಾಯಿ ವಂಚನೆ ನಡೆದಿತ್ತು.

ಮನೆ ಒಳಗೇ ಇದ್ದ ಕಳ್ಳರು; ಸೋನಂ ಕಪೂರ್​ ನಿವಾಸದಿಂದ ಕೋಟಿಕೋಟಿ ಕದ್ದವರು ಅರೆಸ್ಟ್​
ಸೋನಮ್​ ಕಪೂರ್​, ಆನಂದ್​ ಅಹುಜಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 13, 2022 | 5:38 PM

ಸೋನಂ ಕಪೂರ್ (Sonam Kapoor) ಹಾಗೂ ಆನಂದ್ ಅಹುಜಾ (Anand Ahuja) ದೆಹಲಿ ನಿವಾಸದಲ್ಲಿ ಕಳ್ಳತನವಾಗಿತ್ತು. ಅತ್ಯಮೂಲ್ಯ ವಸ್ತುಗಳು ಹಾಗೂ ನಗದನ್ನು ಕದ್ದೊಯ್ಯಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿತ್ತು. ಈ ದಂಪತಿ ಕುಟುಂಬದವರು ಕೋಟ್ಯಂತರ ರೂಪಾಯಿ ನಗದು ಹಾಗೂ ಜ್ಯುವೆಲರಿಗಳನ್ನು ಕಳೆದುಕೊಂಡಿದ್ದರು. ಈಗ ತನಿಖೆ ವೇಳೆ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಇವರ ಮನೆಯಲ್ಲಿ ನರ್ಸ್​ ಆಗಿದ್ದ ಅಪರ್ಣಾ ವಿಲ್ಸನ್ ಹಾಗೂ ಅವಳ ಗಂಡ ನರೇಶ್ ಕುಮಾರ್ ಈ ಕಳ್ಳತನ ಮಾಡಿದ್ದರು. ಅವರು ಈಗ ಜೈಲು ಪಾಲಾಗಿದ್ದಾರೆ.

ದೆಹಲಿ ಮನೆಯಲ್ಲಿ ಸೋನಂ ವಾಸ ಮಾಡುತ್ತಿಲ್ಲ. ಆದರೆ, ಅವರ ಮಾವ ಹರೀಶ್ ಅಹುಜಾ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ವಾಸವಾಗಿದ್ದಾರೆ. ಇವರ ಜತೆಗೆ ಆನಂದ್​ ಅವರ ಅಜ್ಜಿ ಸರಳಾ ಅಹುಜಾ ಕೂಡ ಇವರ ಜತೆಗೇ ಇದ್ದಾರೆ. ಇತ್ತೀಚೆಗೆ ಪ್ರಿಯಾ ಅವರು ಕಬೋರ್ಡ್​ ತೆಗೆದು ನೋಡಿದ್ದರು. ಈ ವೇಳೆ ಜ್ಯುವೆಲರಿ ಹಾಗೂ ನಗದು ಕಾಣೆ ಆಗಿರುವುದು ಗಮನಕ್ಕೆ ಬಂದಿತ್ತು. ಕಳೆದ ಎರಡು ವರ್ಷಗಳಿಂದ ಕೊವಿಡ್ ಇದ್ದ ಕಾರಣ ಪ್ರಿಯಾ ಹೆಚ್ಚು ಸುತ್ತಾಟ ನಡೆಸಿಲ್ಲ. ಈ ಕಾರಣಕ್ಕೆ ಅವರು ಜ್ಯುವೆಲರಿ ಬಳಕೆ ಮಾಡಿರಲಿಲ್ಲ. ಜ್ಯುವೆಲರಿ ಇರುವ ಕಬೋರ್ಡ್​ ಕೊನೆಯ ಬಾರಿ ತಾವು ​ಪರಿಶೀಲಿಸಿದ್ದು ಎರಡು ವರ್ಷಗಳ ಹಿಂದೆ ಎಂದು ಅವರು ಹೇಳಿಕೊಂಡಿದ್ದರು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ದೆಹಲಿ ಮನೆಯಲ್ಲಿ 25 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆ. ಈ ಪೈಕಿ ಅಪರ್ಣಾ ಈ ಕಳ್ಳತನದ ಮುಖ್ಯ ರುವಾರಿ. ಈಕೆ ಪ್ರಿಯಾ ಅಹುಜಾ ಅವರ ಆರೈಕೆ ನೋಡಿಕೊಳ್ಳೋಕೆ ಇವರ ಮನೆಯಲ್ಲಿ ವಾಸವಾಗಿದ್ದಳು.  ಅವಳು ಈ ಹಣ ಹಾಗೂ ಚಿನ್ನವನ್ನು ಕದ್ದಿದ್ದಳು. ಈ ಕೃತ್ಯಕ್ಕೆ ಅವಳ ಪತಿ ಸುರೇಶ್ ಸಹಾಯ ಮಾಡಿದ್ದ.

ಹರೀಶ್ ಅಹುಜಾ ಅವರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಅವರು ವಂಚನೆಗೆ ಒಳಗಾಗಿದ್ದರು. ಆನಂದ್ ಅವರಿಗೆ 27 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿತ್ತು.

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಗುತ್ತಿದೆ. ಪ್ರೆಗ್ನೆನ್ಸಿ​ ಫೋಟೋ ಹಂಚಿಕೊಂಡು ಸೋನಂ​ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಹೊಸ ರೀತಿಯಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆದ ಸೋನಂ ಕಪೂರ್

ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ