ಹೊಸ ರೀತಿಯಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದ ಸೋನಂ ಕಪೂರ್
2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಿದೆ.
Updated on: Apr 04, 2022 | 3:28 PM

ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಸೋನಂ ಕಪೂರ್ ಇತ್ತೀಚೆಗೆ ಹೇಳಿಕೊಂಡಿದ್ದರು. ನಟಿ ಜಾನ್ವಿ ಕಪೂರ್ ಸೇರಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸೋನಂಗೆ ಶುಭಾಶಯ ಕೋರಿದ್ದರು. ಈಗ ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ.

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಿದೆ.

ಬಿಳಿ ಬಣ್ಣದ ಸೀರೆ ಉಟ್ಟು, ರಿಚ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ ಸೋನಂ. ಈ ಫೋಟೋಗಳು ಅವರ ಅಭಿಮಾನಿ ವಲಯದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್ ಮಗಳು ಸೋನಂ ಕಪೂರ್. ಈ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಎಂಟ್ರಿ ಸಿಕ್ಕಿತ್ತು. 2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಸೋನಂ ‘ಬ್ಲೈಂಡ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಶೋಮೆ ಮಖೀಜಾ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೂರಬ್ ಕೊಹ್ಲಿ, ವಿನಯ್ ಪಾಠಕ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಮುಗಿದಿದೆ. ಶೀಘ್ರವೇ ಸಿನಿಮಾ ತೆರೆಗೆ ಬರಲಿದೆ.



















