AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonam Kapoor: ತಾಯಿ ಆಗುತ್ತಿದ್ದಾರೆ ಸೋನಂ​ ಕಪೂರ್; ಪ್ರೆಗ್ನನ್ಸಿ ಫೋಟೋ ಹಂಚಿಕೊಂಡ ನಟಿ

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಅವರನ್ನು ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಗುತ್ತಿದೆ.

Sonam Kapoor: ತಾಯಿ ಆಗುತ್ತಿದ್ದಾರೆ ಸೋನಂ​ ಕಪೂರ್; ಪ್ರೆಗ್ನನ್ಸಿ ಫೋಟೋ ಹಂಚಿಕೊಂಡ ನಟಿ
ಸೋನಂ ಕಪೂರ್
TV9 Web
| Edited By: |

Updated on: Mar 21, 2022 | 3:46 PM

Share

ನಟಿ ಸೋನಂ ಕಪೂರ್​ (Sonam Kapoor) ಅವರು ಉದ್ಯಮಿ ಆನಂದ್​ ಅಹೂಜಾ (Anand Ahuja) ಅವರನ್ನು 2018ರಲ್ಲಿ ಮದುವೆ ಆದರು.  ಮದುವೆ ಆದ ನಂತರದಲ್ಲಿ ಸೋನಂ​ ನಟನೆಯಲ್ಲಿ ಅಷ್ಟು ಆ್ಯಕ್ಟೀವ್​ ಆಗಿಲ್ಲ.  ಈಗ ಅವರ ಕಡೆಯಿಂದ ​ ಗುಡ್​ ನ್ಯೂಸ್ ಸಿಕ್ಕಿದೆ. ಸೋನಂ ಕಪೂರ್​ ಪ್ರೆಗ್ನೆಂಟ್ (Sonam Kapoort Pregnancy) ಆಗಿದ್ದಾರೆ. ಹೊಸ ಫೋಟೋಶೂಟ್​ ಮೂಲಕ ಈ ವಿಚಾರವನ್ನು ಅವರು ಅಧಿಕೃತ ಮಾಡಿದ್ದಾರೆ. ನಟಿ ಜಾನ್ವಿ ಕಪೂರ್​ ಸೇರಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸೋನಂ​ಗೆ ಶುಭಾಶಯ ಕೋರುತ್ತಿದ್ದಾರೆ. ಬಾಲಿವುಡ್​ನ ಖ್ಯಾತ ನಟ ಅನಿಲ್​ ಕಪೂರ್ ಮಗಳು ಸೋನಂ​ ಕಪೂರ್. ಈ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಎಂಟ್ರಿ ಸಿಕ್ಕಿತ್ತು. 2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ಅವರಿಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಪ್ರೇಕ್ಷಕರು ಅವರ ನಟನೆಯನ್ನು ಅಷ್ಟು ಇಷ್ಟಪಡಲಿಲ್ಲ.

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಗುತ್ತಿದೆ. ಪ್ರೆಗ್ನೆನ್ಸಿ​ ಫೋಟೋ ಹಂಚಿಕೊಂಡು ಸೋನಂ​ ಸಂಭ್ರಮಿಸಿದ್ದಾರೆ.

‘ನಾಲ್ಕು ಕೈಗಳು, ನಿನ್ನನ್ನು ಉತ್ತಮವಾಗಿ ಬೆಳೆಸಲು. ಎರಡು ಹೃದಯ, ಒಂದು ಕುಟುಂಬ, ನಿನಗೆ ಪ್ರೀತಿ ತೋರಲು. ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ’ ಎಂದು ಸೋನಂ ಬರೆದುಕೊಂಡಿದ್ದಾರೆ. ಕಪ್ಪು-ಬಿಳುಪಿನ ಫೋಟೋ ಹಾಕಿದ್ದಾರೆ ಸೋನಂ., ಅವರ ಜತೆ ಪತಿ ಆನಂದ್​ ಅಹೂಜ ಕೂಡ ಇದ್ದಾರೆ. ಅವರ ಬೇಬಿ ಬಂಪ್​ ಫೋಟೋ ಗಮನ ಸೆಳೆದಿದೆ.

ಈ ಫೋಟೋಗೆ ಕಮೆಂಟ್​ ಮಾಡಿರುವ ಜಾನ್ವಿ ಅಚ್ಚರಿ ಹೊರ ಹಾಕಿದ್ದಾರೆ. ‘ಓಹ್​ ಮೈ ಗಾಡ್​, ಏನು?’ ಎಂದು ಆಶ್ಚರ್ಯಕರವಾಗಿ ಕಮೆಂಟ್​ ಮಾಡಿದ್ದಾರೆ ಜಾನ್ವಿ. ಇನ್ನೂ ಹಲವು ಸೆಲೆಬ್ರಿಟಿಗಳು ಸೋನಂ-ಆನಂದ್ ದಂಪತಿ​ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಸೋನಂ​ ‘ಬ್ಲೈಂಡ್​’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಶೋಮೆ ಮಖೀಜಾ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೂರಬ್ ಕೊಹ್ಲಿ, ವಿನಯ್​ ಪಾಠಕ್​ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಮುಗಿದಿದೆ. ಶೀಘ್ರವೇ ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ತೆರಿಗೆ ವಂಚಿಸಲು ಸುಳ್ಳು ಲೆಕ್ಕ ನೀಡಿದ ಸೋನಂ ಕಪೂರ್​ ಪತಿ ಆನಂದ್​ ಅಹುಜಾ; ಬಹಿರಂಗವಾಗಿ ಮಾನ ಹರಾಜು

ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?