ತೆರಿಗೆ ವಂಚಿಸಲು ಸುಳ್ಳು ಲೆಕ್ಕ ನೀಡಿದ ಸೋನಂ ಕಪೂರ್​ ಪತಿ ಆನಂದ್​ ಅಹುಜಾ; ಬಹಿರಂಗವಾಗಿ ಮಾನ ಹರಾಜು

ಇತ್ತೀಚೆಗೆ ಸೋನಂ ಕಪೂರ್​ ಅವರು ಹಿಜಾಬ್​ ಕುರಿತಾಗಿ ವಿವಾದ ಮಾಡಿಕೊಂಡಿದ್ದರು. ಈಗ ಅವರ ಪತಿ ಆನಂದ್​ ಅಹುಜಾ ತೆರಿಗೆ ವಂಚನೆ ಆರೋಪ ಎದುರಿಸುವಂತಾಗಿದೆ.

ತೆರಿಗೆ ವಂಚಿಸಲು ಸುಳ್ಳು ಲೆಕ್ಕ ನೀಡಿದ ಸೋನಂ ಕಪೂರ್​ ಪತಿ ಆನಂದ್​ ಅಹುಜಾ; ಬಹಿರಂಗವಾಗಿ ಮಾನ ಹರಾಜು
ಸೋನಮ್​ ಕಪೂರ್​, ಆನಂದ್​ ಅಹುಜಾ
Follow us
TV9 Web
| Updated By: ಮದನ್​ ಕುಮಾರ್​

Updated on: Feb 13, 2022 | 3:34 PM

ಸೆಲೆಬ್ರಿಟಿಗಳು ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತಲೇ ಇರುತ್ತಾರೆ. ನಟಿ ಸೋನಂ ಕಪೂರ್ (Sonam Kapoor) ಅವರು ಇತ್ತೀಚೆಗೆ ಹಿಜಾಬ್​ ವಿಚಾರದಲ್ಲಿ ತಲೆ ಹಾಕುವ ಮೂಲಕ ಅನೇಕರ ಆಕ್ರೋಶಕ್ಕೆ ಕಾರಣ ಆಗಿದ್ದರು. ಈಗ ಅವರ ಪತಿ ಆನಂದ್​ ಅಹುಜಾ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಉದ್ಯಮಿ ಆಗಿರುವ ಆನಂದ್​ ಅಹುಜಾ (Anand Ahuja) ಅವರು ಖಾಸಗಿ ಕಂಪನಿಯೊಂದನ್ನು ಎದುರುಹಾಕಿಕೊಂಡಿದ್ದಾರೆ. ಆ ಕಂಪನಿಯ ಸೇವೆಯಲ್ಲಿ ಕೊಂಚ ವ್ಯತ್ಯಯ ಆಗಿತ್ತು. ಅದನ್ನೇ ನೆಪವಾಗಿ ಇಟ್ಟುಕೊಂಡು ಅವರು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಎಗರಾಡಿದ್ದರು. ಈ ವಿಚಾರದಲ್ಲಿ ಸೋನಂ ಕಪೂರ್​ ಕೂಡ ಎಂಟ್ರಿ ನೀಡಿ, ಆ ಕಂಪನಿಯನ್ನು ಮನಬಂದಂತೆ ಟೀಕಿಸಿದ್ದರು. ಆದರೆ ಈ ಘಟನೆಯ ಕ್ಲೈಮ್ಯಾಕ್ಸ್​ನಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿಬಿಟ್ಟಿದೆ. ಆನಂದ್​ ಅಹುಜಾ ಅವರ ತಪ್ಪನ್ನು ಕಂಡು ಹಿಡಿಯುವ ಮೂಲಕ ಸಾರ್ವಜನಿಕವಾಗಿ ಅವರ ಮಾನವನ್ನು ಹರಾಜು ಹಾಕಲಾಗಿದೆ. ತೆರಿಗೆ ವಂಚಿಸಲು (Tax Evasion) ಆನಂದ್​ ಅಹುಜಾ ಮಾಡಿದ ಹುನ್ನಾರ ಏನು ಎಂಬುದನ್ನು ಆ ಕಂಪನಿ ಬಹಿರಂಗಪಡಿಸಿದೆ. ಇದು ಸೋನಂ ಕಪೂರ್​ಗೆ ಮುಜುಗರ ತರುವಂತಹ ಸಂಗತಿ ಆಗಿದೆ. ಈ ಕುರಿತಂತೆ ಅಭಿಮಾನಿಗಳ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಆನಂದ್​ ಅವರು ವಿದೇಶದಿಂದ ಕೆಲವು ವಸ್ತುಗಳನ್ನು ತರಿಸಬೇಕಿತ್ತು. ಅದು ಸೂಕ್ತ ಸಮಯದಲ್ಲಿ ತಲುಪಿಲ್ಲ. ಆ ಕಾರಣಕ್ಕಾಗಿ ಅವರು ಖಾಸಗಿ ಶಿಪ್ಪಿಂಗ್​ ಕಂಪನಿಯನ್ನು ತರಾಟೆಗೆ ತೆಗೆದುಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಆ ಕಂಪನಿ ಕುರಿತು ಖಾರದ ಮಾತುಗಳಲ್ಲಿ ಪೋಸ್ಟ್​ ಮಾಡಿದ್ದರು. ದಯವಿಟ್ಟು ಇಮೇಲ್​ ಅಥವಾ ಕಸ್ಟಮರ್​ ಕೇರ್​ ನಂಬರ್​ ಮೂಲಕ ಸಂಪರ್ಕಿಸಿ ಎಂದು ಕಂಪನಿಯವರು ಮನವಿ ಮಾಡಿಕೊಂಡರು. ಹಾಗಿದ್ದರೂ ಕೂಡ ಸೋನಂ ಮತ್ತು ಆನಂದ್​ ಅಹುಜಾ ಉದ್ಧಟತನ ಮುಂದುವರಿಸಿದರು. ಆ ಕುರಿತಂತೆ ಕೆಲವು ಪತ್ರಿಕೆಗಳಲ್ಲಿ ವರದಿ ಕೂಡ ಪ್ರಕಟ ಆಯಿತು.

ಪರಿಸ್ಥಿತಿ ಇಷ್ಟೆಲ್ಲ ಕೈ ಮೀರಿದ ಮೇಲೆ ಆ ಶಿಪ್ಪಿಂಗ್ ಕಂಪನಿಯವರು ಸೂಕ್ತವಾಗಿ ಪರಿಶೀಲನೆ ನಡೆಸಿದ್ದಾರೆ. ಅಂತಿಮವಾಗಿ ಆನಂದ್​ ಅಹುಜಾ ಅವರ ಸರಕುಗಳನ್ನು ಸರಿಯಾದ ಸಮಯಕ್ಕೆ ಯಾಕೆ ತಲುಪಿಸಲಾಗಿಲ್ಲ ಎಂಬುದು ತಿಳಿದುಬಂದಿದೆ. ತೆರಿಗೆ ವಂಚಿಸುವ ಸಲುವಾಗಿ ಆನಂದ್​ ಅಹುಜಾ ಅವರು ತಪ್ಪು ಲೆಕ್ಕ ನೀಡಿದ್ದಾರೆ. ಅದೇ ಕಾರಣದಿಂದ ಇಷ್ಟೆಲ್ಲ ವಿಳಂಬ ಆಗಿದೆ ಎಂಬುದನ್ನು ಆ ಕಂಪನಿಯವರು ಜಗಜ್ಜಾಹೀರು ಮಾಡಿದ್ದಾರೆ. ಒಟ್ಟಾರೆ ಈ ಪ್ರಕರಣದಿಂದ ಸೋನಂ ಕಪೂರ್​ ಮತ್ತು ಆನಂದ್​ ಅಹುಜಾ ಅವರಿಗೆ ಮುಖಭಂಗ ಆದಂತಾಗಿದೆ.

ಇತ್ತೀಚೆಗೆ ಸೋನಂ ಕಪೂರ್​ ಅವರು ಹಿಜಾಬ್​ ಕುರಿತಾಗಿ ವಿವಾದ ಮಾಡಿಕೊಂಡಿದ್ದರು. ಸಿಖ್​ ಧರ್ಮದವರು ಪೇಟ ಧರಿಸುವುದು ಸಂಪ್ರದಾಯ. ‘ಇದಕ್ಕೆ ಅವಕಾಶ ಇದೆ ಎಂದಾದರೆ, ಹಿಜಾಬ್​ ಧರಿಸಲು ಯಾಕೆ ಅವಕಾಶ ಇಲ್ಲ’ ಎಂಬ ಅರ್ಥದಲ್ಲಿ ಸೋನಮ್​ ಕಪೂರ್​ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಿಖ್​ ಧರ್ಮದವರಿಂದ ಕಟು ಟೀಕೆ ಕೇಳಿಬಂದಿದೆ. ಈ ಎರಡರ ನಡುವೆ ಹೋಲಿಕೆ ಸರಿಯಲ್ಲ ಎಂದು ಅನೇಕರು ಗುಡುಗಿದ್ದಾರೆ.

ಇದನ್ನೂ ಓದಿ:

‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್

ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್​; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ