‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್

ಸೆಲೆಬ್ರಿಟಿಗಳು ತಮ್ಮ ಮನೆ ಡಿಸೈನ್​ಗೆ ಹೆಚ್ಚು ಒತ್ತು ನೀಡುತ್ತಾರೆ. ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್​ ನೀಡುತ್ತಾರೆ. ಆದರೆ, ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ.

‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್
‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 13, 2021 | 5:56 PM

ನಟಿ ಸೋನಮ್ ಕಪೂರ್​ ಅವರು ಉದ್ಯಮಿ ಆನಂದ್​ ಅಹೂಜಾ ಅವರನ್ನು ಮದುವೆ ಆದ ನಂತರದಲ್ಲಿ ನಟನೆಯಲ್ಲಿ ಅಷ್ಟು ಆ್ಯಕ್ಟಿವ್​ ಆಗಿಲ್ಲ. ಸದ್ಯ ಅವರ ಕೈಯಲ್ಲಿ ಒಂದು ಸಿನಿಮಾ ಮಾತ್ರವಿದೆ. ಅದರ ಕೆಲಸಗಳು ಕೂಡ ಪೂರ್ಣಗೊಂಡಿದೆ. ಆದರೆ, ಇದನ್ನು ಬಿಟ್ಟು ಅವರು ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಈಗ ಸೋನಮ್​ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಐಷಾರಾಮಿ ಮನೆ.

ಸೆಲೆಬ್ರಿಟಿಗಳು ತಮ್ಮ ಮನೆ ಡಿಸೈನ್​ಗೆ ಹೆಚ್ಚು ಒತ್ತು ನೀಡುತ್ತಾರೆ. ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್​ ನೀಡುತ್ತಾರೆ. ಆದರೆ, ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಮನೆಯ ವಿಡಿಯೋ ಮಾಡಿ ಪೋಸ್ಟ್​ ಮಾಡಿದ್ದು ಇದೆ. ಅದನ್ನು ಹೊರತುಪಡಿಸಿ ಮತ್ಯಾರೂ ಈ ರೀತಿ ಮನೆಯ ಪರಿಚಯ ಮಾಡಿಲ್ಲ. ಆದರೆ, ಸೋನಮ್​ ಕಪೂರ್​ ಅಭಿಮಾನಿಗಳಿಗೆ ತಮ್ಮ ಮನೆ ತೋರಿಸಿದ್ದಾರೆ.

ಸೋನಮ್​ ಹಾಗೂ ಅವರ ಪತಿ ಆನಂದ್​ ಲಂಡನ್​ನಲ್ಲಿ ಮನೆ ಹೊಂದಿದ್ದಾರೆ.  ಈ ಮನೆಯನ್ನು ಅಭಿಮಾನಿಗಳಿಗೆ ಅವರು ಪರಿಚಯಿಸಿದ್ದಾರೆ. ಈ ಮನೆ ತುಂಬಾನೇ ಐಷಾರಾಮಿ ಆಗಿದೆ. ಲಿವಿಂಗ್ ಏರಿಯಾ, ಕಿಚನ್​, ಪೌಡರ್​ ರೂಮ್​, ವಾಶ್​ರೂಮ್​ ಎಲ್ಲವನ್ನೂ ಸೋನಮ್​ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಅವರು ಹೈಲೈಟ್​ ಆಗಿದ್ದು ಟಾಯ್ಲೆಟ್​ ವಿಚಾರದಲ್ಲಿ.

‘ನನ್ನ ಬಾತ್​ರೂಮ್​ನಲ್ಲಿ ಸ್ಪೆಷಲ್​ ಏನು ಗೊತ್ತಾ? ಇದೇ ಟೊಟೊ ಪಾಟ್ಸ್​. ಈ ಟಾಯ್ಲೆಟ್​ ಮೇಲೆ ನನಗೆ ಗೀಳು ಹತ್ತಿದೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ನೋಡಿದ ಅನೇಕರು ಸೋನಮ್​ ಅವರನ್ನು ಟೀಕೆ ಮಾಡಿದ್ದಾರೆ. ಟಾಯ್ಲೆಟ್​ನಲ್ಲಿ ಗೀಳು ಹತ್ತುವ ವಿಚಾರ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಅವರ ಸಂಪೂರ್ಣ ಮನೆಯನ್ನು ಇಷ್ಟಪಟ್ಟಿದ್ದಾರೆ. ಇನ್ನು, ಮನೆಯಲ್ಲಿ ಕೆಲಸ ಮಾಡೋಕೂ ಜಾಗವಿದೆ. ಸೋನಮ್​ ಹಾಗೂ ಆನಂದ್​ ಒಂದೇ ಕಡೆ ಕೂತು ಕೆಲಸ ಮಾಡುತ್ತಾರೆ. ಈ ಬಗ್ಗೆಯೂ ಸೋನಮ್​ ಹೇಳಿಕೊಂಡಿದ್ದಾರೆ.

ಸೋನಮ್​ ಹಾಗೂ ಆನಂದ್​ 2018ರ ಮೇ ತಿಂಗಳಲ್ಲಿ ಮದುವೆ ಆಗಿದ್ದರು. ಮದುವೆ ಆದ ನಂತರದಲ್ಲಿ ಅವರ ನಟನೆಯ ಮೂರು ಸಿನಿಮಾಗಳು ಮಾತ್ರ ತೆರೆಗೆ ಬಂದಿವೆ. ‘ಬ್ಲೈಂಡ್​’ ಸಿನಿಮಾದಲ್ಲಿ ಸೋನಮ್​ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: Bhoot Police: ಗೆಳೆಯ ಅರ್ಜುನ್ ಕಪೂರ್ ನಟನೆಯ ‘ಭೂತ್ ಪೊಲೀಸ್’ ಚಿತ್ರಕ್ಕೆ ಮಲೈಕಾ ರಿಯಾಕ್ಷನ್ ಏನು?

ಅನಿಲ್​ ಕಪೂರ್​ ಮಗಳ ಮದುವೆಗೆ ಕೇವಲ 30 ಅತಿಥಿಗಳು; ಸ್ಟಾರ್​ಗಳಿಗಾಗಿ ನಡೆಯಲಿದೆ ವಿಶೇಷ ಆರತಕ್ಷತೆ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್