Lata Mangeshkar: ಲಗ್ ಜಾ ಗಲೇ ಹಾಡಿನ ಮೂಲಕ ಲತಾ ಮಂಗೇಶ್ಕರ್ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ನಟ ಸಲ್ಮಾನ್ ಖಾನ್
ಸಲ್ಮಾನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲತಾ ಅವರ ಅತ್ಯಂತ ಸ್ಮರಣೀಯ ಹಾಡುಗಳಲ್ಲಿ ಒಂದಾದ ಲಗ್ ಜಾ ಗಲೇ (Lag Jaa Gale) ಹಾಡನ್ನು ಹಾಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಫೆಬ್ರವರಿ 6 ರಂದು ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದು, ಭಾರತೀಯ ಮನರಂಜನಾ ಉದ್ಯಮವು ಅಮೂಲ್ಯವಾದ ರತ್ನವನ್ನು ಕಳೆದುಕೊಂಡಿತು. ಅವರಿಗೆ 92 ವರ್ಷವಾಗಿದ್ದು, ದೇಶವು ಇನ್ನೂ ಆ ನಷ್ಟದಿಂದ ಚೇತರಿಸಿಕೊಳ್ಳುತ್ತಿದೆ. ಅವರ ನಿಧನದಿಂದ ಇಡೀ ದೇಶವೇ ಶೋಕಿಸುತ್ತಿರುವಾಗ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಲತಾ ಮಂಗೇಶ್ಕರ್ ಅವರಿಗೆ ಭಾವಪೂರ್ಣ ಸಂಗೀತ ನಮನ ಸಲ್ಲಿಸಿದ್ದಾರೆ. ಸಲ್ಮಾನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲತಾ ಅವರ ಅತ್ಯಂತ ಸ್ಮರಣೀಯ ಹಾಡುಗಳಲ್ಲಿ ಒಂದಾದ ಲಗ್ ಜಾ ಗಲೇ (Lag Jaa Gale) ಹಾಡನ್ನು ಹಾಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಲತಾಜಿಯವರಂತೆ ಯಾರೂ ಇಲ್ಲ. ಅವರಂತೆ ಯಾರೂ ಆಗಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
View this post on Instagram
ಫೆಬ್ರವರಿ 6 ರಂದು, ಲತಾ ಮಂಗೇಶ್ಕರ್ ನಿಧನರಾದ ದಿನ, ಸಲ್ಮಾನ್ ಅವರೊಟ್ಟಿಗಿನ ಫೋಟೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಾವು ನಮ್ಮ ನೈಟಿಂಗೇಲ್ನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿರುತ್ತೆ ಎಂದು ಬರೆದುಕೊಂಡಿದ್ದರು.
U will be missed our nightingale. But ur voice shall live with us forever … #RIPLataji pic.twitter.com/cCrNfj29dG
— Salman Khan (@BeingSalmanKhan) February 6, 2022
ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರದಂದು ಮುಂಬೈನಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಶಿವಾಜಿ ಪಾರ್ಕ್‌ನಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು. ಶ್ರದ್ಧಾ ಕಪೂರ್ , ರಣಬೀರ್ ಕಪೂರ್ , ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ನ ಸೆಲೆಬ್ರಿಟಿಗಳು ಭಾನುವಾರ ಶಿವಾಜಿ ಪಾರ್ಕ್‌ನಲ್ಲಿ ಅಪ್ರತಿಮ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಕೋವಿಡ್-19 ಮತ್ತು ನ್ಯುಮೋನಿಯಾ ರೋಗನಿರ್ಣಯದ ನಂತರ ಲತಾ ಮಂಗೇಶ್ಕರ್ ಅವರನ್ನು ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಲ್ಮಾನ್ ನಟಿ ಕತ್ರಿನಾ ಕೈಫ್ ಅವರೊಂದಿಗೆ ಥ್ರಿಲ್ಲರ್ ಚಿತ್ರವಾದ ‘ಟೈಗರ್ 3’ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ . ಇದಾದ ನಂತರ ಕಭಿ ಈದ್ ಕಭಿ ದೀಪಾವಳಿ ಚಿತ್ರವನ್ನು 2023 ಈದ್ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಭಿ ಈದ್ ಕಭಿ ದೀಪಾವಳಿಯಲ್ಲಿ ಸಲ್ಮಾನ್ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಸದ್ಯದಲ್ಲೇ ಲುಕ್ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ:
‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್ ವಿಮರ್ಶೆ