ವಿರಾಟ್ ಬಳಿ ಕ್ಯಾಪ್ಟನ್ ಆಗ್ತೀರಾ ಎಂದು ಕೇಳಿದ ದಾನಿಶ್; ಕೊಹ್ಲಿ ಉತ್ತರ ಏನಿತ್ತು?
ಆರ್ಸಿಬಿ ಮೂರು ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ಮೊಹ್ಮದ್ ಸಿರಾಜ್ ಆರ್ಸಿಬಿಯಲ್ಲಿ ಉಳಿದುಕೊಂಡಿದ್ದಾರೆ. ಆರ್ಸಿಬಿ ಉಳಿಸಿಕೊಂಡ ನಾಲ್ಕನೇ ವ್ಯಕ್ತಿ ದಾನಿಶ್ ಅಂತೆ! ಈ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದ್ದಾರೆ. ಈ ಬಾರಿ ನಡೆಯಲಿರುವ ಐಪಿಎಲ್ನಲ್ಲಿ (IPL 2022) ಆರ್ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಐಪಿಎಲ್ ಹರಾಜಿನಲ್ಲಿ ನಾಯಕತ್ವ ವಹಿಸಿಕೊಳ್ಳುವ ಆಟಗಾರ ಸಿಗದಿದ್ದರೆ ವಿರಾಟ್ ಬಳಿ ನಾಯಕತ್ವ ಮುಂದುವರಿಸುವಂತೆ ಕೋರುವುದಾಗಿ ಆರ್ಸಿಬಿ ತಂಡ ಹೇಳಿಕೊಂಡಿತ್ತು. ಆರ್ಸಿಬಿಯನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈ ಮಧ್ಯೆ ಆರ್ಸಿಬಿ ಇನ್ಸೈಡರ್ ದಾನಿಶ್ ಸೇಠ್ (Danish Sait) ಅವರ ಫನ್ನಿ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿಗೆ ದಾನಿಶ್ ಸೇಠ್ ಕರೆ ಮಾಡುತ್ತಾರೆ. ‘ಫಾಸ್ಟ್ ಬೌಲರ್ ಆಯ್ಕೆ ಬಗ್ಗೆ ಏನು ಯೋಚನೆ ಮಾಡಿದ್ದೀರಾ? ನನ್ನ ಪ್ರಕಾರ ಕಪಿಲ್ ದೇವ್ ಉತ್ತಮ ಆಯ್ಕೆ ಅನಿಸುತ್ತದೆ. ಇತ್ತೀಚೆಗೆ ಅವರ ಕುರಿತ ಬಯೋಪಿಕ್ ಕೂಡ ತೆರೆಗೆ ಬಂದಿದೆ’ ಎಂದಿದ್ದಾರೆ ದಾನಿಶ್. ಆ ಬಳಿಕ, ‘ವಿರಾಟ್ ನೀವು ಕ್ಯಾಪ್ಟನ್ ಆಗಲು ಬಯಸುತ್ತೀರಾ?’ ಎಂದು ದಾನಿಶ್ ಕೇಳುತ್ತಿದ್ದಂತೆ ಆ ಕಡೆಯಿಂದ ಕರೆ ಕಟ್ ಆಗಿದೆ.
ಆರ್ಸಿಬಿ ಮೂರು ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ಮೊಹ್ಮದ್ ಸಿರಾಜ್ ಆರ್ಸಿಬಿಯಲ್ಲಿ ಉಳಿದುಕೊಂಡಿದ್ದಾರೆ. ಆರ್ಸಿಬಿ ಉಳಿಸಿಕೊಂಡ ನಾಲ್ಕನೇ ವ್ಯಕ್ತಿ ದಾನಿಶ್ ಅಂತೆ! ಈ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.
ತಂಡವನ್ನು ಆಯ್ಕೆ ಮಾಡುವ ಸಮಿತಿ ಬಳಿ ಬಂದ ದಾನಿಶ್ ಅವರು ಒಂದು ಲೆಟರ್ ನೀಡಿದರು. ‘ಇದು ನಿಮ್ಮ ಟರ್ಮಿನೇಟರ್ ಲೆಟರ್. ಕಳೆದ 14 ವರ್ಷದಿಂದ ಕಪ್ ಬಂದಿಲ್ಲ. ಈ ಬಾರಿ ಒಳ್ಳೆಯ ಆಯ್ಕೆ ಮಾಡಿಲ್ಲ ಎಂದರೆ ನಿಮ್ಮನ್ನು ಟರ್ಮಿನೇಟ್ ಮಾಡುತ್ತೇವೆ, ನೆನಪಿರಲಿ’ ಎಂದು ಫನ್ನಿಯಾಗಿ ಎಚ್ಚರಿಕೆ ನೀಡಿದರು ದಾನಿಶ್.
Mr. Nags gatecrashes RCB’s IPL Auction Meeting
There’s no IPL Auction without Mr. Nags. He speaks to Virat first and then says some nasty things to say to the RCB coaches and the management ahead of the all important #IPLMegaAuction.#PlayBold #WeAreChallengers #IPL2022 pic.twitter.com/7SL0PRAzN5
— Royal Challengers Bangalore (@RCBTweets) February 12, 2022
ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬಂದಿವೆ. ಆರ್ಸಿಬಿ ಈ ಬಾರಿಯೂ ತಪ್ಪು ನಿರ್ಧಾರ ಮಾಡಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಶ್ರೀಲಂಕಾ ಆಟಗಾರ ವನಿಂದು ಹಸರಂಗ ಅವರನ್ನು 10.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇದು ತುಂಬಾನೇ ಕಾಸ್ಟ್ಲಿ ಆಯ್ತು ಎಂದು ಕೆಲವರು ಟೀಕಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ದಾನಿಶ್ ಸೇಠ್ ನಟನೆಯ ‘ಒನ್ ಕಟ್ ಟೂ ಕಟ್’ ಚಿತ್ರ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಗೆ ಬಂದಿದೆ. ಪಿಆರ್ಕೆ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಸಿನಿಮಾಗೆ ಎಲ್ಲ ಕಡೆಗಳಿಂದ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ.
ಇದನ್ನೂ ಓದಿ: ನಟ ದಾನಿಶ್ ಸೇಠ್ಗೆ ಅಭಿನಂದನೆ ತಿಳಿಸಿದ ಕ್ರಿಕೆಟರ್ ಕೆ.ಎಲ್. ರಾಹುಲ್; ಕಾರಣ ಏನು?
‘ಅವರ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್ ಟೂ ಕಟ್’ ಸಿನಿಮಾ ಬಗ್ಗೆ ನಟ ದಾನಿಶ್ ಸೇಠ್ ಮಾತು
Published On - 2:33 pm, Sun, 13 February 22