ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?
ಒಲಿವಿಯಾ ಕುಲ್ಪೋ ಅವರು ‘ಮಿಸ್ ಅಮೆರಿಕ’ ಹಾಗೂ ‘ಮಿಸ್ ಯೂನಿವರ್ಸ್’ ಪಟ್ಟವನ್ನು ಗಳಿಸಿಕೊಂಡವರು. ಅಮೆರಿಕದಲ್ಲಿ ಅವರಿಗೆ ದೊಡ್ಡ ಮಟ್ಟದ ಹೆಸರಿದೆ. ಮಾಡೆಲ್ ಆಗಿರುವ ಅವರು ಸಾಕಷ್ಟು ವೇದಿಕೆಗಳ ಮೇಲೆ ಹೆಜ್ಜೆ ಹಾಕಿದ್ದಾರೆ.
ಬಟ್ಟೆ ವಿಚಾರದಲ್ಲಿ ಸೆಲೆಬ್ರಿಟಿಗಳು (Celebrity) ಟ್ರೋಲ್ ಆದಷ್ಟು ಮತ್ಯಾರೂ ಆಗುವುದಿಲ್ಲ. ಅವರು ಧರಿಸುವ ಬಟ್ಟೆ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿ ಇರುತ್ತದೆ. ಸೆಲೆಬ್ರಿಟಿಗಳು ಯಾವುದೇ ಉಡುಗೆ ತೊಟ್ಟರೂ ಅದನ್ನು ಗಮನಿಸುತ್ತಿರುತ್ತಾರೆ. ಕೆಲವು ಉಡುಗೆಗಳನ್ನು ಟ್ರೋಲ್ ಮಾಡಿದರೆ, ಇನ್ನೂ ಕೆಲವು ಉಡುಗೆಯನ್ನು ಮೆಚ್ಚಿಕೊಳ್ಳುತ್ತಾರೆ. ಈ ಮೊದಲು ದೊಡ್ಡದೊಡ್ಡ ಸೆಲೆಬ್ರಿಟಿಗಳು ಡ್ರೆಸ್ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ಉದಾಹರಣೆ ಸಾಕಷ್ಟಿದೆ. ಈಗ ಮಾಜಿ ಭುವನ ಸುಂದರಿಯೊಬ್ಬರು (Miss Universe) ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅವರು ಒಳಉಡುಪು ಹಾಕದೆ ರಸ್ತೆಗೆ ಇಳಿದಿದ್ದು! ಈ ವಿಚಾರದಲ್ಲಿ ಅವರು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.
ಒಲಿವಿಯಾ ಕುಲ್ಪೋ ಅವರು ‘ಮಿಸ್ ಅಮೆರಿಕ’ ಹಾಗೂ ‘ಮಿಸ್ ಯೂನಿವರ್ಸ್’ ಪಟ್ಟವನ್ನು ಗಳಿಸಿಕೊಂಡವರು. ಅಮೆರಿಕದಲ್ಲಿ ಅವರಿಗೆ ದೊಡ್ಡ ಮಟ್ಟದ ಹೆಸರಿದೆ. ಮಾಡೆಲ್ ಆಗಿರುವ ಅವರು ಸಾಕಷ್ಟು ವೇದಿಕೆಗಳ ಮೇಲೆ ಹೆಜ್ಜೆ ಹಾಕಿದ್ದಾರೆ. ಆದರೆ, ಇತ್ತೀಚೆಗೆ ಅವರು ತೊಟ್ಟ ಉಡುಗೆ ಮೇಲೆ ಕೆಲವರ ವಕ್ರ ದೃಷ್ಟಿ ಬಿದ್ದಿದೆ. ಹೀಗಾಗಿ, ನಿಮಗೆ ನಾಚಿಕೆ ಆಗಬೇಕು ಎಂದು ಟೀಕಿಸುತ್ತಿದ್ದಾರೆ. ಅಭಿಮಾನಿಗಳು ಒಲಿವಿಯಾ ಅವರ ಪರ ವಹಿಸಿಕೊಂಡು ಮಾತನಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಲಿವಿಯಾ ಅವರು ಟ್ರಿಪ್ ಒಂದಕ್ಕೆ ತೆರಳಿದ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಇದಾದ ಬೆನ್ನಲ್ಲೇ ಅವರು ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳುವಾಗ ತೊಟ್ಟ ಬಟ್ಟೆಯಿಂದ ಟೀಕೆ ಎದುರಿಸುವಂತಾಗಿದೆ.
ಒಲಿವಾ ಅವರು ತೆಳುವಾದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದರು. ಅಚ್ಚರಿ ಎಂದರೆ ಅವರು ಯಾವುದೇ ಒಳುಡುಪು ಹಾಕಿರಲಿಲ್ಲ. ‘ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹೀಗಾ ಬರೋದು? ಸ್ವಲ್ಪವಾದರೂ ನಾಚಿಕೆ ಇರಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ನೀವು ಉಡುಗೆ ತೊಡುವ ಅವಶ್ಯಕತೆ ಏನಿತ್ತು?’ ಎಂದು ಬರೆದುಕೊಂಡಿದ್ದಾರೆ.
View this post on Instagram
ಬಟ್ಟೆ ವಿಚಾರದಲ್ಲಿ ಟ್ರೋಲ್ ಆಗಿದ್ದ ನಟಿ ಪಾಯಲ್ ರಜಪೂತ್
ನಟಿ ಪಾಯಲ್ ರಜಪೂತ್ ಕೂಡ ಇತ್ತೀಚೆಗೆ ಇದೇ ರೀತಿಯ ಅವಮಾನ ಎದುರಿಸಿದ್ದರು. ಅವರು ತೊಟ್ಟಿದ್ದ ಬಟ್ಟೆಯೇ ಅವರಿಗೆ ಮುಳುವಾಗಿತ್ತು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ಚಿತ್ರರಂಗ ತೊರೆಯುವಂತೆ ಪಾಯಲ್ ತಾಯಿ ಸೂಚಿಸಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಪಾಯಲ್ ಹೇಳಿಕೊಂಡಿದ್ದಾರೆ.
ಹಳದಿ ಬಣ್ಣದ ಕೋಟ್ ರೀತಿಯ ಡ್ರೆಸ್ ಧರಿಸಿ ಪಾಯಲ್ ಇತ್ತೀಚೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಕೋಟ್ಗೆ ಅವರು ಬಟನ್ ಹಾಕಿರಲಿಲ್ಲ. ಫೋಟೋಶೂಟ್ ಮಾಡುವಾಗ ಇವರ ಖಾಸಗಿ ಅಂಗ ಪ್ರದರ್ಶನವಾಗಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿತ್ತು. ಈ ಫೋಟೋ ಹಾಗೂ ವಿಡಿಯೋಗಳನ್ನು ಹಲವರು ನಾನಾ ರೀತಿಯಲ್ಲಿ ಟ್ರೋಲ್ ಮಾಡಿದ್ದರು. ಕೆಟ್ಟದಾಗಿ ಕಮೆಂಟ್ಗಳನ್ನು ಮಾಡಿದ್ದರು. ಇದು ಪಾಯಲ್ ತಾಯಿಯ ಗಮನಕ್ಕೂ ಬಂದಿತ್ತು. ಮಗಳನ್ನು ಕರೆದು ಅವರು ಬುದ್ಧಿವಾದ ಹೇಳಿದ್ದರು.
ಇದನ್ನೂ ಓದಿ: Samantha: ಸಮಂತಾ ಜತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು; ಆಲಿಯಾ ಭಟ್ಗೆ ಹೀಗೊಂದು ಆಸೆ
Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!