AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 13 November : ಇಂದು ಈ ರಾಶಿಯವರು ಭೂಮಿಯ ವಿಚಾರದಲ್ಲಿ ದುಡುಕುವರು

ನವೆಂಬರ್ 13ರ ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ? ಯಾರಿಗೆ ಉದ್ಯೋಗದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ? ಮೇಷದಿಂದ ಮೀನದವರೆಗೆ ಎಲ್ಲಾ 12 ರಾಶಿಗಳ ದಿನ ಭವಿಷ್ಯ, ಪ್ರೀತಿ, ಕುಟುಂಬ, ಆರೋಗ್ಯ, ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಜ್ಯೋತಿಷ್ಯ ಭವಿಷ್ಯವನ್ನು ತಿಳಿಯಿರಿ.

Horoscope Today 13 November : ಇಂದು ಈ ರಾಶಿಯವರು ಭೂಮಿಯ ವಿಚಾರದಲ್ಲಿ ದುಡುಕುವರು
ನಿತ್ಯ ಭವಿಷ್ಯ
ಭಾವನಾ ಹೆಗಡೆ
|

Updated on:Nov 13, 2026 | 12:26 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಶುಕ್ರವಾರದಂದು ಉನ್ನತ ವಿದ್ಯಾಭ್ಯಾಸ, ದುಂದುವೆಚ್ಚ, ದುರಭ್ಯಾಸ, ಹಳೆಯ ಮಿತ್ರರ ಭೇಟಿ, ವೈಯಕ್ತಿಕ ಹೂಡಿಕೆ, ಅನ್ಯರಿಂದ ನೆಮ್ಮದಿ ಹಾಳು ಇವೆಲ್ಲ ಈ‌ ದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಅತಿಗಂಡ, ಕರಣ : ವಣಿಜ, ಸೂರ್ಯೋದಯ – 06 – 18 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:37 – 12:04, ಯಮಗಂಡ ಕಾಲ 14:56 – 16:23, ಗುಳಿಕ ಕಾಲ 07:45 – 09:11

ಮೇಷ ರಾಶಿ : ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ, ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ಜಿಪುಣರಾಗುವಿರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ನಿಮಗೆ ಆತಂಕ ತರಿಸುವುದು. ಮಕ್ಕಳ ಸಹವಾಸದ ಬಗ್ಗೆ ಗಮನವಿರಲಿ. ಆಲಸ್ಯದಿಂದ ದೂರವಿದ್ದರೂ ಸೋಮಾರಿ ಬಿರುದು ಬರಬಹುದು. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ.

ವೃಷಭ ರಾಶಿ : ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು. ಹೊಸ ಸ್ಥಳವು ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ನಿಮ್ಮ ಸಹನೆಯನ್ನು ಬಿಡದೇ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಿ.

ಮಿಥುನ ರಾಶಿ : ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನೀವು ಇತರರಿಗೆ ಹಂಚಿ ನಿರಾಳರಾಗುವಿರಿ.

ಕರ್ಕಾಟಕ ರಾಶಿ : ಸಂಘಟಿಸುವುದು ಮತ್ತು ವಿವರಿಸುವುದು ಸಮಯ ಹಾಳು. ಏಕೆಂದರೆ ನೀವು ವಿಷಯಗಳನ್ನು ಶಿಸ್ತಿಗೆ ಒಳಪಡಿಸಲು ಅಪಾರ ಗಂಟೆಗಳ ಶ್ರಮ ವಹಿಸುತ್ತೀರಿ. ನಿಮ್ಮ ತೀವ್ರ ಒತ್ತಡಕ್ಕೆ ವೈರುಧ್ಯ ಮತ್ತು ಸಾಮಾಜಿಕವಾಗಿ ನಿರಾಳವಾಗಿರಿ. ದೃಷ್ಟಿದೋಷಕ್ಕೆ ಪರಿಹಾರಕ್ಕೆ ಕಂಡುಕೊಳ್ಳಿ. ಇಂದಿನ ನಿಮ್ಮ ವರ್ತನೆಯು ಬೇರೆ ರೀತಿಯಲ್ಲಿ ತೋರುವುದು. ಏಕಾಂತವನ್ನೇ ನೀವು ಬೇಕೆಂದುಕೊಳ್ಳುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.

ಸಿಂಹ ರಾಶಿ : ನೀವು ಇಂದು ಮೇಲಧಿಕಾರಿಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ. ನಾಲಿಗೆ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕೆಲವು ಸಮಯವನ್ನು ಕಳೆಯುವ ಮನಸ್ಸಾಗುವುದು.

ಕನ್ಯಾ ರಾಶಿ : ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ. ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಬೇಡ. ಸ್ನೇಹಿತರು ನೆಚ್ಚುವ ಕಾರ್ಯವನ್ನು ಮಾಡುವಿರಿ.

ತುಲಾ ರಾಶಿ : ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಶ್ರಮದಿಂದ ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ. ಇದರಿಂದ ನಿಮ್ಮ ಭವಿಷ್ಯಕ್ಕೆ ತಿರುಸಿಕ್ಕಂತಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ಪ್ರೇಮಿಯನ್ನು ನೀವು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುವುದು. ಸಣ್ಣ ವಿರಸವೂ ದೂರಾಗಲು ಕಾರಣವಾಗಬಹುದು.

ವೃಶ್ಚಿಕ ರಾಶಿ : ವ್ಯಾಪಾರದಲ್ಲಿ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವನ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಅತಿಯಾದ ಉದ್ಯೋಗದ ಬದಲಾವಣೆಯನ್ನು ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವಿರದೇ ಸಂಪಾದನೆಯ ಕಡೆ ಅಧಿಕ ಗಮನವಿರುವುದು.

ಧನು ರಾಶಿ : ನೀವು ಉದ್ಯೋಗಕ್ಕೆ ಆದ್ಯತೆ ನೀಡಬಹುದು. ನಿಮಗೆ ಕೊಟ್ಟ ಕೆಲಸವನ್ನು ಏಕಾಗ್ರತೆಯಿಂದ ಬೇಗನೆ ಮುಗಿಸುತ್ತೀರಿ. ನಿಮ್ಮ ಕೆಲಸ ಮಾಡುವ ಉತ್ಸಾಹ ಅತ್ಯಂತ ಉನ್ನತವಾಗಿರುತ್ತದೆ. ಇದು ಮಿತ್ರರಿಗೆ ಬಹಳ ಪ್ರಾಮುಖ್ಯತೆ ನೀಡುತ್ತದೆ ಅದು ನೀವು ಹೊರಗಡೆ ಹೋಗಿ ಅವರನ್ನು ಭೇಟಿಯಾಗುತ್ತೀರಿ. ಉನ್ನತ ಹುದ್ದೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಲಿದೆ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡವಿರಿ. ಇಂದಿನ ಸಮಯ ಮಿತಿಯನ್ನು ಅರಿತು ಕಾರ್ಯವನ್ನು ಮಾಡುವಿರಿ.

ಮಕರ ರಾಶಿ : ಧಾರ್ಮಿಕ‌ ಅಚರಣೆ ಮಾಡಲು ನಿಮ್ಮ ಮನಸ್ಸಿನಲ್ಲಿ ಹಲವು ಕಾರ್ಯಗಳು ಓಡಾಡಬಹುದು. ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಪ್ರವಾಸ ಹೋಗುವ ನಿಮ್ಮ ಬಯಕೆ ಅವರಿಗೆ ಪ್ರಚೋದನೆ ನೀಡುತ್ತದೆ. ಪ್ರಯಾಣಕ್ಕೆ ಒಳ್ಳೆಯ ಸಮಯ ಮತ್ತು ನೀವು ಈ ಪ್ರವಾಸವನ್ನು ನಿಮ್ಮ ಯೋಜನೆಯಲ್ಲಿ ಸಂತೃಪ್ತಿಕರವಾಗಿ ಮುಗಿಸುವಿರಿ. ಸಹೋದ್ಯೋಗಿಗಳ ಅನಾದರವನ್ನು ನೀವು ಲೆಕ್ಕಿಸದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಕುಂಭ ರಾಶಿ : ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ‌ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ.

ಮೀನ ರಾಶಿ : ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ನಿಮ್ಮ ಸ್ನೇಹ ಬಳಗ ಬೆಳೆಯಲಿದೆ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚು ಸ್ವಲ್ಪ ಕಡಿಮೆ‌ ಆಗಿದ್ದು ಸಂತಸದ ಸಮಾಚಾರವಾಗಲಿದೆ. ನಿಮ್ಮ ನೀರೀಕ್ಷೆಯ ಮಟ್ಟಕ್ಕೆ ವ್ಯಾಪಾರವು ತಲುಪದಿರುವುದು ನಿಮಗೆ ಬೇಸರವಾಗುವುದು.

– ಲೋಹಿತ್ ಹೆಬ್ಬಾರ್ 8762924271 (what’s app only)

Published On - 12:25 am, Fri, 13 November 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ