AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘2030ರ ವೇಳೆಗೆ 7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ’: ಸಿಎಂ ಡಿಕೆ ಶಿವಕುಮಾರ್​​

2030ರ ವೇಳೆಗೆ ಕರ್ನಾಟಕದಲ್ಲಿ 7.5 ಲಕ್ಷ ಕೋಟಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಇನ್ವೆಸ್ಟ್ ಕರ್ನಾಟಕ ಪೂರ್ವಭಾವಿ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ. ಕಳೆದ ವರ್ಷ ರಾಜ್ಯದ ಆರ್ಥಿಕತೆ ಶೇ. 8ರಷ್ಟು ಬೆಳವಣಿಗೆ ಕಂಡಿದೆ ಎಂದ ಅವರು, ದೇಶದಲ್ಲೇ ಅತಿ ಹೆಚ್ಚು ಅಂದರೆ 1,100ಕ್ಕೂ ಅಧಿಕ ಗ್ಲೋಬಲ್ ಕೆಪಬಿಲಿಟಿ ಸೆಂಟರ್‌ಗಳಿಗೆ (GCC) ಕರ್ನಾಟಕ ನೆಲೆಯಾಗಿದೆ ಎಂದಿದ್ದಾರೆ.

'2030ರ ವೇಳೆಗೆ 7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ': ಸಿಎಂ ಡಿಕೆ ಶಿವಕುಮಾರ್​​
ಸಿಎಂ ಡಿಕೆ ಶಿವಕುಮಾರ್​​
ಪ್ರಸನ್ನ ಗಾಂವ್ಕರ್​
| Edited By: |

Updated on:Nov 12, 2026 | 10:50 PM

Share

ಬೆಂಗಳೂರು, ನವೆಂಬರ್​​ 12: 2030ರ ವೇಳೆಗೆ ₹7.5 ಲಕ್ಷ ಕೋಟಿ ಹೂಡಿಕೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿರುವುದಾಗಿ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದಾರೆ. ಇನ್ವೆಸ್ಟ್​​ ಕರ್ನಾಟಕ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೆಮಿಕಂಡಕ್ಟರ್‌ಗಳು, ಏರೋಸ್ಪೇಸ್, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಶುದ್ಧ ಇಂಧನ, ಜೀವ ವಿಜ್ಞಾನ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಸೇರಿದಂತೆ ಭವಿಷ್ಯದ ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆಗೆ ರಾಜ್ಯವು ಅಗ್ರಗಣ್ಯ ತಾಣವಾಗಿ ಹೊರಹೊಮ್ಮುತ್ತಿದೆ. ಇದು ಕೇವಲ ಹೂಡಿಕೆ ಸಮಾವೇಶವಲ್ಲ. ಇದು ಕರ್ನಾಟಕದ ಭವಿಷ್ಯವನ್ನು ರೂಪಿಸುವ ಒಂದು ಅವಕಾಶ. ನಿಮ್ಮ ಆಲೋಚನೆಗಳನ್ನು,ಹೂಡಿಕೆಗಳನ್ನು ತನ್ನಿ. ನಾವು ಒಟ್ಟಾಗಿ ಭವಿಷ್ಯವನ್ನು ನಿರ್ಮಿಸೋಣ ಎಂದವರು ಕರೆ ನೀಡಿದ್ದಾರೆ.

‘ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ್ದೇ ಮೇಲುಗೈ’

ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ. 40ಕ್ಕಿಂತ ಹೆಚ್ಚು ಪಾಲು ಕರ್ನಾಟಕದ್ದು. ದೇಶದ ಏರೋಸ್ಪೇಸ್ ರಫ್ತಿನಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗ ರಾಜ್ಯದಿಂದಲೇ ಆಗುತ್ತಿದೆ. 1902ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರವು ಶಿವನಸಮುದ್ರದಲ್ಲಿ ಸ್ಥಾಪನೆಯಾಯಿತು . ಬೆಂಗಳೂರು ಭಾರತದ ಮೊದಲ ವಿಮಾನ ಕಾರ್ಖಾನೆ ಹಾಗೂ ಜೈವಿಕ ತಂತ್ರಜ್ಞಾನ ಕಂಪನಿಗೆ ನೆಲೆಯಾಯಿತು. ಕರ್ನಾಟಕವು ಹೊಸ ಆಲೋಚನೆಗಳನ್ನು ಕೇವಲ ಅನುಸರಿಸಿಲ್ಲ. ಅವುಗಳನ್ನು ಸೃಷ್ಟಿಸಲು ನಾವು ನೆರವಾಗಿದ್ದೇವೆ. ರಾಜ್ಯದ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ತಾಂತ್ರಿಕ ಸಾಮರ್ಥ್ಯ ಮತ್ತು ಉದ್ಯಮಶೀಲತಾ ಪರಿಸರ ವ್ಯವಸ್ಥೆಯೇ ನಮ್ಮ ಅತಿದೊಡ್ಡ ಶಕ್ತಿಯಾಗಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ:  ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರವಾಗಿ ಪ್ರಧಾನಿಗೆ ಪತ್ರ: ಸಿಎಂ ಡಿ.ಕೆ. ಶಿವಕುಮಾರ್

‘ಕಳೆದ ವರ್ಷ ರಾಜ್ಯದ ಆರ್ಥಿಕತೆಯಲ್ಲಿ ಶೇ. 8ರಷ್ಟು ಬೆಳವಣಿಗೆ’

ಕರ್ನಾಟಕ ಉದ್ಯೋಗ ಮಿತ್ರ ಮತ್ತು ಇನ್ವೆಸ್ಟ್ ಕರ್ನಾಟಕ ಫೋರಂ ಮೂಲಕ ಸರ್ಕಾರವು ಹೂಡಿಕೆದಾರರಿಗೆ ನೆರವು ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ಏಕಗವಾಕ್ಷಿ ವ್ಯವಸ್ಥೆಯು (Single Window System) ಪ್ರಸ್ತುತ ಒಂದೇ ವೇದಿಕೆಯಲ್ಲಿ 30ಕ್ಕೂ ಹೆಚ್ಚು ಇಲಾಖೆಗಳ 150ಕ್ಕೂ ಅಧಿಕ ಸೇವೆಗಳನ್ನು ಒದಗಿಸುತ್ತಿದೆ. ಅನುಮೋದನೆ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ಪಡೆಯಲು ನೋಡಲ್ ಅಧಿಕಾರಿಗಳು ಹೂಡಿಕೆದಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕಳೆದ ವರ್ಷ ರಾಜ್ಯದ ಆರ್ಥಿಕತೆಯು ಶೇ. 8ರಷ್ಟು ಬೆಳವಣಿಗೆ ಕಂಡಿದೆ. ಭಾರತದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕವು ಅತಿ ಹೆಚ್ಚು ತಲಾ ಆದಾಯವನ್ನು ಹೊಂದಿದೆ. ಜಿಎಸ್‌ಟಿ (GST) ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ರಾಜ್ಯವು ಸುಮಾರು 13 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆಯನ್ನು (FDI) ಆಕರ್ಷಿಸಿದೆ. ಅಲ್ಲದೆ, ದೇಶದಲ್ಲೇ ಅತಿ ಹೆಚ್ಚು ಅಂದರೆ 1,100ಕ್ಕೂ ಅಧಿಕ ಗ್ಲೋಬಲ್ ಕೆಪಬಿಲಿಟಿ ಸೆಂಟರ್‌ಗಳಿಗೆ (GCC) ಕರ್ನಾಟಕ ನೆಲೆಯಾಗಿದೆ ಎಂದಿ ಡಿಕೆಶಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:50 pm, Thu, 12 November 26

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ