AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಬಳಿ ಎಲ್ಲವೂ ಇದ್ದರೂ ಇನ್ನಷ್ಟು ಬೇಕೆಂಬ ಹಂಬಲ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಬುಧವಾರದಂದು ಬಾಂಧವ್ಯದ ಬೆಸುಗೆ, ಹಿರಿಯರ ಪ್ರೀತಿ, ಗೌರವ, ಬೇಸರ, ಮನೆಯವರ ಒಡನಾಟ, ಉದ್ಯೋಗ, ಆತ್ಮಬಲ, ಗೃಹನಿರ್ಮಾಣಕ್ಕೆ ಸುತ್ತಾಟ, ಅನವಶ್ಯಕ ಮಾತು ಇವೆಲ್ಲ ಇಂದಿನ ವಿಶೇಷ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಬಳಿ ಎಲ್ಲವೂ ಇದ್ದರೂ ಇನ್ನಷ್ಟು ಬೇಕೆಂಬ ಹಂಬಲ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Nov 11, 2026 | 1:06 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ – 06 – 17 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:04 – 13:30, ಯಮಗಂಡ ಕಾಲ 07:44 – 09:11, ಗುಳಿಕ ಕಾಲ 10:37 – 12:04.

ಮೇಷ ರಾಶಿ: ಉದ್ಯೋಗಕ್ಕಾಗಿ ಇಲ್ಲಿಂದ ಅಲ್ಲಿಗೆ ಅಲೆಯಬೇಕಾಗುತ್ತದೆ. ಉನ್ನತ ವಿದ್ಯಾಭ್ಯಾಸದ ಕುರಿತು ಸ್ನೇಹಿತರ ಜೊತೆ ಚರ್ಚೆ ನಡೆಸುವಿರಿ. ಕುಟುಂಬ ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುವುದು. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಆಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು‌. ಯಾವುದೇ ಪ್ರತಿಸ್ಪಂದ ಇಲ್ಲದೇ ನಿಮ್ಮವರ ಪ್ರೀತಿಯನ್ನೂ ನೀವು ಕಳೆದುಕೊಳ್ಳುವಿರಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು.

ವೃಷಭ ರಾಶಿ: ಓದಿನಲ್ಲಿ ಆಸಕ್ತಿ ಕಡಿಮೆ ಆಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗಲಿದೆ‌. ದಾಖಲೆಗಳಲ್ಲಿ ಆಗಬೇಕಾದ ಬದಲಾವಣೆಯನ್ನು ಸಮಯ ಪಡೆದು ಮಾಡಿಕೊಳ್ಳಿ. ಬಲದಿಂದ ಕಾರ್ಯವನ್ನು ಮಾಡದೇ ಯುಕ್ತಿಯಿಂದ ಮಾಡಬೇಕಾಗುವುದು. ಮನೆಯಲ್ಲಿ ನಿಮ್ಮ ಗಮನಕ್ಕೆ ಬರದೇ ಆದ ಕಾರ್ಯದಿಂದ ಬೇಸರ. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಕೋಪ. ಕುಟುಂಬದಲ್ಲಿ ಕಲಹದ ಕಾರಣ ಕೆಲಸ ಕಾರ್ಯವು ವಿಳಂಬವಾಗುವುದು.

ಮಿಥುನ ರಾಶಿ: ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ವೃದ್ಧಿ ಆಗಬಹುದು. ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿ ಪರರ ಪಾಲಾಗಬಹುದು. ಮಾತನ್ನು ಪರರ ಅಪಹಾಸ್ಯಕ್ಕಾಗಿ ಹೆಚ್ಚು ಆಡುವಿರಿ. ಇದು ಅತಿಯಾಗುವುದು ಬೇಡ. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.

ಕರ್ಕಾಟಕ ರಾಶಿ: ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ಮನೆಯಿಂದ ದೂರವಾಸವಾಗಲಿದೆ. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಪರಿಣಾಮವಿಲ್ಲದ ಸಿಟ್ಟಿನಿಂದ ಮನಸ್ಸು ಹಾಳಷ್ಟೇ. ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ.

ಸಿಂಹ ರಾಶಿ: ಸ್ನೇಹಿತರ ವೈವಾಹಿಕ ಕಾರ್ಯಕ್ಕೆ ಸಹಾಯ ಮಾಡುವಿರಿ. ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ನೆರೆಹೊರೆಯರಿಂದ ತೊಂದರೆ ಬರಬಹುದು. ನಿಮ್ಮ ಉಪಯೋಗವನ್ನು ಪಡೆದು ಕೈ ಬಿಡಬಹುದು. ಉದ್ಯಮದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ಒತ್ತಡವನ್ನು ತಗ್ಗಿಸಿಕೊಳ್ಳಲು ಕೆಲಸವನ್ನು ಹಂಚುವುದು ಉತ್ತಮ.

ಕನ್ಯಾ ರಾಶಿ: ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ತಂದೆಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ. ಉದ್ಯಮದಲ್ಲಿ ನಿಮಗೆ ಸಣ್ಣ ಪೈಪೋಟಿ ರೂಪುಗೊಳ್ಳುವುದು. ಅವಧಿಗೆ ಮೊದಲೇ ಕಾರ್ಯವನ್ನು ಮುಗಿಸಿ, ಮತ್ತಷ್ಟು ಕಾರ್ಯ ಮಾಡಬೇಕಾಗುವುದು.

ತುಲಾ ರಾಶಿ: ಅಪೂರ್ಣ ಕಾರ್ಯಗಳಿಗೆ ಪೂರ್ಣ ಚಾಲನೆ ಸಿಗಲಿದೆ. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಾಹಿತ್ಯ ಕ್ಷೇತ್ರದಲ್ಲಿ ಒತ್ತಡವು ಹೆಚ್ಚು ಕಾಣಿಸುವುದು. ಸಂಗಾತಿಯು ನಿಮ್ಮ ಪರವಾಗಿ ಮಾತನಾಡುವುದು ಅಚ್ಚರಿಯಾದೀತು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ‌ ಕೆಲಸಗಳನ್ನು ಮರೆಸುವುದು. ನಿಮ್ಮಲ್ಲಿ ಖಾಯಿಲೆ ದಿನಚರಿಯ ವ್ಯತ್ಯಾಸದಿಂದ ಉಲ್ಬಣವಾಗಬಹುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು.

ವೃಶ್ಚಿಕ ರಾಶಿ: ಸಂಗಾತಿಯ ಜೊತೆ ಸ್ನೇಹ ಕೂಟದಲ್ಲಿ ಭಾಗವಹಿಸುವಿರಿ‌. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಹಿರಿಯರು ಮಾಡುವ ವಿವಾಹ ಸಂಬಂಧವನ್ನು ವಿವಾಹ ಆಗುವವರು ಒಪ್ಪಿಗೆ ನೀಡರು.

ಧನು ರಾಶಿ: ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ವಿದ್ಯಾಭ್ಯಾಸವು ನಿಮಗೆ ಹೊರೆ ಎನಿಸಬಹುದು. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಹಳೆಯ ವಸ್ತುಗಳನ್ನು ದುರಸ್ತಿ ಮಾಡಿಕೊಂಡು ಬಳಸುವಿರಿ.

ಮಕರ ರಾಶಿ: ಕಛೇರಿಯ ನಿಯಮಗಳನ್ನು ಸಡಿಲ ಮಾಡುಕೊಳ್ಳುವಿರಿ. ನಿಮ್ಮ ಮಾರ್ಗದರ್ಶಕರನ್ನು ಗೌರವಿಸುವಿರಿ. ರಾಜಕಾರಣಿಗಳ ಇಬ್ಬಗೆಯ ವರ್ತನೆಯು ಬೇಸರ ತರಿಸಬಹುದು. ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದು ಸುತ್ತಾಡುವಿರಿ. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು.

ಕುಂಭ ರಾಶಿ: ಯಾವುದೇ ವೃತ್ತಿಯಾಗಿದ್ದರೂ ಅವರ ಸಾಧನೆಗೆ ಗೌರವವು ಸಿಗಲಿದೆ‌ ಇಂದು ಅನಗತ್ಯವಾಗಿ ಜಗಳಕ್ಕೆ ಇಳಿಯುವ ಸಂದರ್ಭ ಬರಬಹುದು. ದಾಂಪತ್ಯದಲ್ಲಿ ಬೇಸರವಿರಲಿದೆ. ಇಬ್ಬರೂ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ‌ ನೌಕರರನ್ನು ಬಹಳ ಕೆಳಮಟ್ಟದಲ್ಲಿ ನೋಡುವಿರಿ. ಯಾವುದನ್ನೂ ಪೂರ್ವದಲ್ಲಿ ಖಚಿತಪಡಿಸಿಕೊಳ್ಳದೇ ಮುಂದುವರಿಯುವುದು ಬೇಡ. ನಿಮ್ಮ ಬಗ್ಗೆ ಇತರರಿಗೆ ತಿಳಿವಳಿಕೆ ಕೊಡುವಿರಿ.

ಮೀನ ರಾಶಿ: ನಿಮ್ಮ ತಪ್ಪುಗಳಿಂದ ಪಶ್ಚಾತ್ತಾಪವಾಗಬೇಕೇ ಹೊರತೆ, ಅದನ್ನು ಸಮರ್ಥಿಸಿಕೊಂಡು ದೊಡ್ಡವರಾಗುವುದಿಲ್ಲ. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಸ್ವಯಾರ್ಜಿತ ಆಸ್ತಿಯನ್ನು ನೀವು ಗಳಿಸುವಿರಿ. ಸಂತೋಷದ ವಾತಾವರಣವು ಮನೆಯಲ್ಲಿ ಇರುವುದು. ನಿರಾಸೆಯಿಂದ ನೀವು ಹೊರಬರುವಿರಿ. ನಿಮ್ಮ ಕೆಲಸದಲ್ಲಿ ಮೇಲಧಿಕಾರಿಯ ಕೋಪಕ್ಕೆ ನೀವೇ ಬಲಿ.

ಲೋಹಿತ್ ಹೆಬ್ಬಾರ್-8762924271 (what’s app only)

Published On - 1:05 am, Wed, 11 November 26

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ