AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ; ಮತ್ತೆ ಪಟಾಕಿ ಹೊಡೆಯಿರಿ ಎಂದ ಮನೆಯವರು

ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ; ಮತ್ತೆ ಪಟಾಕಿ ಹೊಡೆಯಿರಿ ಎಂದ ಮನೆಯವರು

ಸೂರಜ್ ಪ್ರಸಾದ್ ಎಸ್ಎನ್
| Edited By: |

Updated on: Nov 10, 2026 | 7:42 PM

Share

ಮುಖ್ಯಾಂಶಗಳು

  • ಡಾ.ರಾಜ್​ಕುಮಾರ್ ಸಂಬಂಧಿ ಮನೆಯಲ್ಲಿ ಸ್ಫೋಟ ಪ್ರಕರಣ
  • ಇಬ್ಬರು ಯುವಕರನ್ನು ಮನೆಯ ಬಳಿ ಕರೆತಂದು ಸ್ಥಳ ಮಹಜರು
  • ಕೆಲಕಾಲ ಮನೋಜ್ಞ ಮನೆಯ ಎದುರು ಹೈಡ್ರಾಮಾ

ಡಾ.ರಾಜಕುಮಾರ್ ಸಂಬಂಧಿ ಮನೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರಿನಲ್ಲಿ ಯುವಕರು ಪಟಾಕಿ ಹೊಡೆದಿರುವುದಾಗಿ ಹೇಳಿಕೊಂಡರೆ, ಕುಟುಂಬಸ್ಥರು ಇದನ್ನು ಒಪ್ಪದೆ ಬೇರೆ ಏನೋ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಡಾ.ರಾಜಕುಮಾರ್ ಸಂಬಂಧಿಕರ ಮನೆ ಮುಂದೆ ಹೈಡ್ರಾಮಾಕ್ಕೆ ಕಾರಣವಾಗಿದೆ.

ಚಾಮರಾಜನಗರ, ನವೆಂಬರ್​​ 10: ತಮಿಳುನಾಡಿನ ಗಾಜನೂರಿನಲ್ಲಿರುವ ಡಾ.ರಾಜಕುಮಾರ್ ಅವರ ಸಂಬಂಧಿ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ಹಿನ್ನೆಲೆ ಕೆಲ ಯುವಕರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರಿಗಾಗಿ ಕರೆತಂದಿದ್ದಾರೆ. ಮೂರ್ನಾಲ್ಕು ಆಟೋ ಬಾಂಬ್‌ಗಳನ್ನ ಜೋಡಿಸಿ ಸ್ಫೋಟಿಸಿರುವುದಾಗಿ ಹೇಳಿದ್ದಾರೆ. ಆದರೆ ರಾಜಕುಮಾರ್ ಸಂಬಂಧಿ ಕುಟುಂಬದವರು ಇದನ್ನು ಒಪ್ಪಲು ತಯಾರಿಲ್ಲ. ಹಾಗಾದರೆ ಆ ಪಟಾಕಿಯನ್ನು ಮತ್ತೆ ಹೊಡೆದು ತೋರಿಸಿ. ಪಟಾಕಿ ಸ್ಫೋಟದಿಂದ ಬಾಗಿಲು, ಕಿಟಕಿ ಗಾಜು ಪುಡಿಪುಡಿಯಾಗಲು ಹೇಗೆ ಸಾಧ್ಯ. ಇದು ಕೇವಲ ಪಟಾಕಿಯಿಂದ ಆಗಿರಲು ಸಾಧ್ಯವಿಲ್ಲ, ಇದರ ಹಿಂದೆ ಬೇರೆ ಏನೋ ನಡೆದಿದೆ ಎಂದು ಕುಟುಂಬಸ್ಥರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲ ಕಾಲ ಮನೋಜ್ಞ ಮನೆಯ ಎದುರು ಹೈಡ್ರಾಮಾ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸೂರಜ್ ಪ್ರಸಾದ್ ಎಸ್ಎನ್
ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More