ಎನ್‌ಡಿಎಯಲ್ಲಿ ಭಾರತಕ್ಕೇ ಪ್ರಥಮ ರ್ಯಾಂಕ್ ಗಳಿಸಿದ ಶ್ರೇಯಾ ಮನೆಗೆ ಸಂಸದ ಬಿವೈ ರಾಘವೇಂದ್ರ ಅಭಿನಂದನೆ
ಯುಪಿಎಸ್‌ಸಿ ಎನ್ಡಿಎ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಶ್ರೇಯಾ ಎನ್. ಗೌಡ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಮನೆಗೆ ತೆರಳಿ ಸನ್ಮಾನಿಸಿದರು. ಶ್ರೇಯಾ ಅವರ ಸಾಧನೆ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ರಾಘವೇಂದ್ರ ಶ್ಲಾಘಿಸಿದರು.
ಶಿವಮೊಗ್ಗ, ನ.10: ಜಿಲ್ಲೆಯ ಭದ್ರಾವತಿ ಮೂಲದ ಶ್ರೇಯಾ ಎನ್. ಗೌಡ ಅವರು ಯುಪಿಎಸ್‌ಸಿ ನಡೆಸಿದ ಎನ್ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರ ಈ ಅಸಾಧಾರಣ ಸಾಧನೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಶ್ರೇಯಾ ಗೌಡ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಸಾಮಾನ್ಯ ಕುಟುಂಬದಿಂದ ಬಂದ ಶ್ರೇಯಾ ಅವರ ತಂದೆ ಜೆ. ನಾಗೇಂದ್ರ ಅವರು ವಿಐಎಸ್‌ಎಲ್ ನಿವೃತ್ತ ನೌಕರರಾಗಿದ್ದು, ತಾಯಿ ಬಿ.ಎಂ. ಆಶಾ ಉಪನ್ಯಾಸಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲೂ ಶ್ರೇಯಾ ಅವರು ತೋರಿದ ಪ್ರತಿಭೆ ಮತ್ತು ಶ್ರಮವನ್ನು ಸಂಸದ ರಾಘವೇಂದ್ರ ಅವರು ಕೊಂಡಾಡಿದರು. ಶ್ರೇಯಾ ಅವರ ಸಾಧನೆಯು ದೇಶಭಕ್ತಿಯ ಪ್ರತೀಕವಾಗಿದ್ದು, ಯುವ ಪೀಳಿಗೆಗೆ ಸ್ಫೂರ್ತಿ ನೀಡಲಿದೆ ಎಂದು ಅವರು ಹೇಳಿದರು. ದೇಶಕ್ಕೆ ಒಬ್ಬ ಉತ್ತಮ ಯುವ ಸೇನಾನಿ ಸಿದ್ಧವಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಶ್ರೇಯಾ ಅವರ ಸಾಧನೆ ಬಲ ತುಂಬಿದೆ ಎಂದು ರಾಘವೇಂದ್ರ ಹೇಳಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್ಪಿಎಫ್ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್ಆರ್ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ

