AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಪ್ರಮುಖರೇ ನಾಮಿನೇಟ್; ಹೊರ ಹೋಗುವವರು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಫಿನಾಲೆಗೂ ಮುನ್ನ ನಾಮಿನೇಷನ್ ಪ್ರಕ್ರಿಯೆ ರಂಗು ಪಡೆದುಕೊಂಡಿದೆ. ಪರಿಷತ್ ಮಾದರಿಯಲ್ಲಿ ನಡೆದ ವಿಶಿಷ್ಟ ನಾಮಿನೇಷನ್‌ನಲ್ಲಿ ಮಂಜು ಅಧ್ಯಕ್ಷರಾಗಿ ಭಾಗವಹಿಸಿದ್ದರು. ವಾದ-ವಿವಾದಗಳ ನಂತರ ತಾಂಡವ್, ಜಗದೀಶ್, ಗಗನ್, ಪ್ರಶಾಂತ್, ಕಿರಣ್ ಶಾಸ್ತ್ರಿ, ಆಸಿಯಾ ಮತ್ತು ಸೋನಿಕಾ ಈ ವಾರ ಎಲಿಮಿನೇಷನ್ ಫೈಟ್‌ಗೆ ನಾಮಿನೇಟ್ ಆಗಿದ್ದಾರೆ.

ಈ ವಾರ ಪ್ರಮುಖರೇ ನಾಮಿನೇಟ್; ಹೊರ ಹೋಗುವವರು ಯಾರು?
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 10, 2026 | 10:48 PM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಪರಿಷತ್ ಮಾದರಿಯ ನಾಮಿನೇಷನ್ ಧಮಾಕಾ
  • ಅಧ್ಯಕ್ಷ ಮಂಜು ತೀರ್ಪಿಗೆ ನಡುಗಿದ ಬಿಗ್ ಬಾಸ್ ಸ್ಪರ್ಧಿಗಳು
  • ಎಲಿಮಿನೇಷನ್ ಭೀತಿಗೆ ಸಿಲುಕಿದ ಪ್ರಮುಖ ಸ್ಪರ್ಧಿಗಳು

‘ಬಿಗ್ ಬಾಸ್ ಕನ್ನಡ ಸೀಸನ್ 13’ ಈಗಾಗಲೇ ಎರಡು ತಿಂಗಳು ಪೂರೈಸಿದೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ಬರಲಿದೆ. ಅದಕ್ಕೂ ಮೊದಲು ನಾಮಿನೇಷನ್ ಸಾಕಷ್ಟು ರಂಗು ಪಡೆದುಕೊಂಡಿದೆ. ಮೊದಲೆಲ್ಲ ನೇರವಾಗಿ ನಾಮಿನೇಟ್ ಮಾಡಲು ಅವಕಾಶ ನೀಡಲಾಗುತ್ತಾ ಇತ್ತು. ಆದರೆ, ಈ ವಾರ ನಾಮಿನೇಷನ್ ಪ್ರಕ್ರಿಯೆ ಬದಲಾಯಿಸಲಾಗಿದೆ. ಇದರಿಂದ ಪ್ರಮುಖರೇ ನಾಮಿನೇಟ್ ಆಗಿದ್ದಾರೆ.

ಈ ವಾರ ಪರಿಷತ್ ಮಾದರಿಯಲ್ಲಿ ಬಿಗ್ ಬಾಸ್ ಮನೆ ರೆಡಿ ಮಾಡಲಾಗಿದೆ. ಇದಕ್ಕೆ ಅತಿಥಿಯಾಗಿ ಆಗಮಿಸಿರೋ ಮಂಜು ಅವರು ಅಧ್ಯಕ್ಷರಾಗಿದ್ದಾರೆ. ಯಶಸ್ ಕ್ಯಾಪ್ಟನ್. ಇಬ್ಬರನ್ನು ವೇದಿಕೆ ಮೇಲೆ ಕರೆಸಬೇಕು. ಆ ಬಳಿಕ ವಾದ-ವಿವಾದ ಮಂಡಿಸಬೇಕು. ಇದನ್ನು ಆಧರಿಸಿ ಮಂಜು ಅವರು ಒಬ್ಬರನ್ನು ನಾಮಿನೇಟ್ ಮಾಡಬೇಕು.

ಮೊದಲ ಸುತ್ತಿನಲ್ಲಿ ಪ್ರಶಾಂತ್-ಗಗನ್ ಅವರನ್ನು ವೇದಿಕೆ ಮೇಲೆ ಕರೆಯಲಾಯಿತು. ಇವರ ವಾದ ವಿವಾದ ಗಮನಿಸಿ, ತಾಂಡವ್ ಅವರನ್ನು ಮಂಜು ನಾಮಿನೇಟ್ ಮಾಡಿದರು. ನಂತರ ಗಗನ್ ಹಾಗೂ ಪ್ರಶಾಂತ್ ಅವರನ್ನು ಕರೆಸಲಾಯಿತು. ಈ ವೇಳೆ ತಾಂಡವ್ ರಾಮ್ ಅವರನ್ನು ನಾಮಿನೇಟ್ ಮಾಡಲಾಯಿತು.

ನಂತರ ಸೌಂದರ್ಯಾ ಹಾಗೂ ಜಗದೀಶ್ ಅವರನ್ನು ಕರೆಸಲಾಯಿತು. ಇಬ್ಬರ ವಾದ-ವಿವಾದ ಪರಿಗಣಿಸಿ ಜಗದೀಶ್ ಅವರನ್ನು ನಾಮಿನೇಟ್ ಮಾಡಲಾಯಿತು. ಆಸಿಯಾ ಹಾಗೂ ಧನುಷ್ ಅವರನ್ನು ವಾದ ವಿವಾದಕ್ಕೆ ಕರೆಸಲಾಯಿತು. ಈ ವಾದದಲ್ಲಿ ಆಸಿಯಾರನ್ನು ನಾಮಿನೇಟ್ ಮಾಡಲಾಯಿತು.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ

ಕಿರಣ್ ಶಾಸ್ತ್ರಿ ಹಾಗೂ ಸೌಂದರ್ಯಾ ಶೆಟ್ಟಿ ಅವರು ಪರಸ್ಪರ ಮಾತಿನ ಫೈಟ್​​ಗೆ ಇಳಿದರು. ಇವರ ಮಧ್ಯೆ ಭರ್ಜರಿ ಮಾತಿನ ಚಕಮಕಿ ನಡೆಯಿತು. ಈ ವೇಳೆ ನಾಮಿನೇಟ್ ಆಗಿದ್ದು ಕಿರಣ್ ಶಾಸ್ತ್ರಿ ಅವರು.

ಕೊನೆಗೆ ಈ ವಾರದ ನಾಮಿನೇಷನ್ ಲಿಸ್ಟ್ ಅಲ್ಲಿ ಗಗನ್, ಪ್ರಶಾಂತ್, ತಾಂಡವ್, ಜಗದೀಶ್, ಕಿರಣ್ ಶಾಸ್ತ್ರಿ, ಆಸಿಯಾ ಹಾಗೂ ಸೋನಿಕಾ ನಿಂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ