ಒಂದೇ ಕುಟುಂಬದ 7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್ ವಿಚಾರಣೆ ಮತ್ತಷ್ಟು ತೀವ್ರ
ಒಂದೇ ಕುಟುಂಬದ ಏಳು ಮಂದಿಯ ಹತ್ಯೆಗೈದ ಆರೋಪಿ ಇಂದು ಶೇಖರ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮಾನಸಿಕ ಹಿಂಸೆ ಮತ್ತು ಆಸ್ತಿ ವಿವಾದ ಕೊಲೆಗೆ ಕಾರಣ ಎಂದು ಆರೋಪಿ ಹೇಳುತ್ತಿದ್ದರೂ, ಪೊಲೀಸರು ಬೇರೆ ಕಾರಣಗಳ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಏಳು ಮೃತದೇಹಗಳು ಪತ್ತೆಯಾಗಿದ್ದು, ಡಿಸಿಪಿ ನೇಮಗೌಡ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಬೆಂಗಳೂರು, ನವೆಂಬರ್ 10: ಒಂದೇ ಕುಟುಂಬದ 7 ಮಂದಿ ಕೊಲೆ ಪ್ರಕರಣ ಸಂಬಂಧ ಆರೋಪಿ ಇಂದುಶೇಖರ್ ವಿಚಾರಣೆ ಇಂದಿನಿಂದ ಮತ್ತಷ್ಟು ತೀವ್ರಗೊಳ್ಳಲಿದೆ. ಖುದ್ದು ಡಿಸಿಪಿ ನೇಮಗೌಡ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಕೊಲೆಗೆ ಮಾನಸಿಕ ಹಿಂಸೆ ಮತ್ತು ಆಸ್ತಿ ವಿಚಾರ ಕಾರಣ ಎಂದು ಆರೋಪಿ ಹೇಳಿದ್ದಾನೆ. ಆದರೂ ಆದರೆ ಬೇರೆ ಕಾರಣ ಕೂಡ ಇರಬಹುದು ಎಂಬ ಅನುಮಾನ ಹಿನ್ನೆಲೆ ಮತ್ತಷ್ಟು ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

