- TV9 Kannada Kannada News Photos Cricket Photos Rahmat Shah Makes History: First Afghan in ICC Test Top 10 Batting Rankings
ವಿಶ್ವದ ಘಟಾನುಘಟಿ ಆಟಗಾರರನ್ನು ಹಿಂದಿಕ್ಕಿದ ಅಫ್ಘಾನ್ ನಾಯಕ
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಹಮತ್ ಶಾ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಐತಿಹಾಸಿಕ 7ನೇ ಸ್ಥಾನಕ್ಕೇರಿದ್ದಾರೆ. ಟೆಸ್ಟ್ ಬ್ಯಾಟಿಂಗ್, ಬೌಲಿಂಗ್ ಅಥವಾ ಆಲ್‌ರೌಂಡರ್ ವಿಭಾಗದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಅಫ್ಘಾನಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು. ಜಿಂಬಾಬ್ವೆ ವಿರುದ್ಧ 173 ರನ್ ಗಳಿಸಿ, ಶುಭಮನ್ ಗಿಲ್ ಸೇರಿದಂತೆ ಹಲವು ದಿಗ್ಗಜರನ್ನು ಹಿಂದಿಕ್ಕಿದ್ದಾರೆ. ಅಫ್ಘಾನ್ ಕ್ರಿಕೆಟ್‌ಗೆ ಇದು ದೊಡ್ಡ ಮೈಲುಗಲ್ಲು
Updated on: Nov 11, 2026 | 9:28 PM

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಹಮತ್ ಶಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೆಸ್ಟ್ ಬ್ಯಾಟಿಂಗ್, ಬೌಲಿಂಗ್ ಅಥವಾ ಆಲ್‌ರೌಂಡರ್ ವಿಭಾಗದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಅಫ್ಘಾನಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ(PC-PTI).

ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರಹಮತ್ ಶಾ ಭರ್ಜರಿ 173 ರನ್ ಸಿಡಿಸಿದ್ದರು. ಈ ಅಮೋಘ ಆಟದ ಪರಿಣಾಮ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಆರು ಸ್ಥಾನ ಮೇಲಕ್ಕೇರಿರುವ ಅವರು ಇದೀಗ ಏಳನೇ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲ, ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅನ್ನೂ ಪಡೆದುಕೊಂಡಿದ್ದಾರೆ(PC-PTI).

ಜಿಂಬಾಬ್ವೆ ವಿರುದ್ಧದ 173 ರನ್‌ಗಳ ಇನ್ನಿಂಗ್ಸ್ ರಹಮತ್ ಶಾ ಅವರ ಟೆಸ್ಟ್ ವೃತ್ತಿಜೀವನದ ಐದನೇ ಶತಕವಾಗಿದೆ. ಈ ವರ್ಷ ಅವರು ಬಾರಿಸಿದ ಎರಡನೇ ಟೆಸ್ಟ್ ಶತಕವೂ ಇದಾಗಿದೆ. ಈ ಅಮೋಘ ಪ್ರದರ್ಶನದ ಮೂಲಕ ಭಾರತದ ನಾಯಕ ಶುಭಮನ್ ಗಿಲ್, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಹಾಗೂ ಶ್ರೀಲಂಕಾದ ಸ್ಟಾರ್ ಆಟಗಾರ ಕಾಮಿಂಡು ಮೆಂಡಿಸ್ ಅವರನ್ನು ರಹಮತ್ ಶಾ ಹಿಂದಿಕ್ಕಿದ್ದಾರೆ(PC-PTI).

ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ತಂಡಗಳನ್ನು ಮಣಿಸಿ ತ್ರಿಕೋನ ಸರಣಿಯನ್ನು ಗೆದ್ದಿದ್ದ ಅಫ್ಘಾನಿಸ್ತಾನ, ಐಸಿಸಿ ಏಕದಿನ ತಂಡಗಳ ಶ್ರೇಯಾಂಕದಲ್ಲೂ ಆರನೇ ಸ್ಥಾನಕ್ಕೇರಿತ್ತು(PC-PTI).

ಶಾರ್ಜಾ ಟೆಸ್ಟ್ ಪಂದ್ಯ ಹಾಗೂ ಬಾಂಗ್ಲಾದೇಶ-ವೆಸ್ಟ್ ಇಂಡೀಸ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಬಳಿಕ ಹಲವು ಆಟಗಾರರು ಐಸಿಸಿ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಶಾರ್ಜಾ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ ದ್ವಿಶತಕ ಸಿಡಿಸಿದ ಜಿಂಬಾಬ್ವೆಯ ಅನುಭವಿ ಆಟಗಾರ ಕ್ರೇಗ್ ಎರ್ವಿನ್ ಒಂಬತ್ತು ಸ್ಥಾನ ಮೇಲಕ್ಕೇರಿ 48ನೇ ಸ್ಥಾನ ತಲುಪಿದ್ದಾರೆ(PC-PTI).

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳ ಬಳಿಕ ಐಸಿಸಿ ಏಕದಿನ ಶ್ರೇಯಾಂಕದಲ್ಲೂ ಹಲವು ಬದಲಾವಣೆಗಳಾಗಿವೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 28 ರನ್ ನೀಡಿ ಎರಡು ವಿಕೆಟ್ ಪಡೆದ ಭಾರತದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ 23 ಸ್ಥಾನಗಳ ಜಿಗಿತದೊಂದಿಗೆ 21ನೇ ಸ್ಥಾನಕ್ಕೇರಿದ್ದಾರೆ(PC-PTI).

ಇನ್ನು ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ 11 ಸ್ಥಾನ ಮೇಲಕ್ಕೇರಿ 31ನೇ ಸ್ಥಾನವನ್ನು ಜಂಟಿಯಾಗಿ ಪಡೆದುಕೊಂಡಿದ್ದಾರೆ. ಸರಣಿಯಲ್ಲಿ ಈವರೆಗೆ ಏಳು ವಿಕೆಟ್‌ಗಳನ್ನು ಪಡೆದಿರುವ ವೇಗಿ ಗುರ್ನೂರ್ ಬ್ರಾರ್ ಕೂಡ ಭರ್ಜರಿ ಪ್ರಗತಿ ಸಾಧಿಸಿದ್ದಾರೆ. ಅಗ್ರ 100ರ ಪಟ್ಟಿಯಿಂದ ಹೊರಗಿದ್ದ ಅವರು ಇದೀಗ 48ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More