AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ: ಮಂಜನ ಎಂಟ್ರಿ ಬಳಿಕ ಮನೆಯಲ್ಲಿ ಮತ್ತೆ ಮಾತಿನ ಚಕಮಕಿ

ಮಂಜ ಇದ್ದಲ್ಲಿ ಜಗಳ ಗ್ಯಾರಂಟಿ. ಮಾತಿನ ಕಾರಣಕ್ಕಾಗಿಯೇ ಜಗಳ ಆಗುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಜಕೀಯದ ಥೀಮ್​ನಲ್ಲಿ ಟಾಸ್ಕ್ ನಡೆಯುತ್ತಿದೆ. ಮಂಜ ಅವರು ಅಧ್ಯಕ್ಷ ಆಗಿದ್ದಾರೆ. ಅದರಿಂದ ಅನೇಕರಿಗೆ ಅಸಮಾಧಾನ ಇದೆ. ಆಟದ ಬಗ್ಗೆ ಚರ್ಚೆ ಮಾಡುವಾಗ ಮಂಜ ಅವರು ನಾಲಿಗೆ ಹರಿಬಿಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ: ಮಂಜನ ಎಂಟ್ರಿ ಬಳಿಕ ಮನೆಯಲ್ಲಿ ಮತ್ತೆ ಮಾತಿನ ಚಕಮಕಿ
Thandav Ram, Manja Image Credit source: Colors Kannada
ಮದನ್​ ಕುಮಾರ್​
|

Updated on: Nov 12, 2026 | 10:53 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮೂರನೇ ಟಾಸ್ಕ್ ರದ್ದಾಗಿದೆ. ರಾಜಕೀಯದ ಥೀಮ್​ನಲ್ಲಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಿಭಾಯಿಸಲು ಸ್ಪರ್ಧಿಗಳು ಎಡವಿದ್ದಾರೆ. ಕಷ್ಟಪಟ್ಟು ಟಾಸ್ಕ್ ಆಡಿದ್ದರೂ ಕೂಡ ಯಾವ ಟೀಮ್ ವಿನ್ ಆಗಿದೆ ಎಂಬುದನ್ನು ಘೋಷಿಸಲು ಸ್ಪರ್ಧಿಗಳು ಸೋತಿದ್ದಾರೆ. ಹಾಗಾಗಿ ಟಾಸ್ಕ್ ರದ್ದು ಮಾಡುವುದಾಗಿ ಬಿಗ್ ಬಾಸ್ ಘೋಷಿಸಿದ್ದಾರೆ. ಮಂಜನ ಎಂಟ್ರಿ ಬಳಿಕ ಮತ್ತೆ ಮಾತಿನ ಚಕಮಕಿ ಹೆಚ್ಚಾಗಿದೆ. ತಾಂಡವ್ ರಾಮ್ ಜೊತೆ ಮಂಜ ಕಿರಿಕ್ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಹೆಚ್ಚಾಗಿದೆ.

‘ನಿಮಗೆ ನರ ಇದೆಯಾ’ ಎಂದು ಮಂಜ ಪ್ರಶ್ನೆ ಮಾಡಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ತಾಂಡವ್ ರಾಮ್ ಅವರಿಗೆ ಕೋಪ ಬಂದಿದೆ. ಮಂಜ ಇಂಥ ಪದಬಳಕೆ ಮಾಡಿದ್ದಕ್ಕೆ ತಾಂಡವ್ ರಾಮ್, ಗಗನ್ ಚಿನ್ನಪ್ಪ ಹಾಗೂ ಯಶಸ್ ಅವರು ಗರಂ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಂಥ ಮಾತುಗಳನ್ನು ಆಡಿದ್ದಕ್ಕೆ ಮಂಜನ ವಿರುದ್ಧ ಸ್ಪರ್ಧಿಗಳು ಆಕ್ರೋಶ ವ್ಯಕ್ತಪಡಿದ್ದಾರೆ.

ಆಟದ ವೇಳೆ ಹಲವು ಜಗಳಗಳು ಆಗಿವೆ. ಆಟದ ಬಳಿಕ ಮೆಮೊರಿ ಲಾಸ್ ಆದಂತೆ ನಟಿಸಿದ ಗಾನವಿ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ. ಗಾನವಿ ಜೊತೆ ಮಂಜ ಕೂಡ ಸೇರಿಕೊಂಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗಾನವಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ. ಮಂಜ ಈಗಾಗಲೇ ಎಲಿಮಿನೇಟ್ ಆಗಿ ಮತ್ತೆ ಬಂದಿರುವ ವ್ಯಕ್ತಿ. ಆದರೆ ಅವರು ಸ್ಪರ್ಧಿ ಅಲ್ಲ. ಒಂದಷ್ಟು ದಿನಗಳ ಕಾಲ ಬಿಗ್ ಬಾಸ್ ಆಟದಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಲಾಗಿದೆ ಅಷ್ಟೇ. ಆದರೆ ಈ ವಾರ ಅವರಿಗೆ ಅಧ್ಯಕ್ಷನ ಸ್ಥಾನವನ್ನು ನೀಡಲಾಗಿದೆ. ಅವರು ಗಾನವಿ ಪರವಾಗಿ ಪಕ್ಷಪಾತ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಮಂಜನ ಬಾಯಲ್ಲಿ ಒಳ್ಳೆಯ ಮಾತುಗಳೇ ಬರಲ್ಲ. ಕಚಡ, ನರ ಎಂಬಿತ್ಯಾದಿ ಮಾತುಗಳೇ ಬರುತ್ತವೆ’ ಎಂದು ಸೌಂದರ್ಯಾ ಶೆಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಮಂಜ ಅವರು ಪದ ಬಳಕೆಯಲ್ಲಿ ಎಡವಟ್ಟು ಮಾಡುವ ಸಾಧ್ಯತೆ ಇದೆ. ಇನ್ನುಳಿದ ಸ್ಪರ್ಧಿಗಳು ಅವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಮಂಜ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ

ಬಿಗ್ ಬಾಸ್ ಆಟದಲ್ಲಿ ಈಗ 67 ದಿನಗಳು ಕಳೆದಿವೆ. ದಿನ ಕಳೆದಂತೆಲ್ಲ ಕೆಲವು ಸಂಬಂಧಗಳಲ್ಲಿ ಬಿರುಕು ಮೂಡುತ್ತಿವೆ. ಇಷ್ಟು ದಿನಗಳ ಕಾಲ ಯಶಸ್ ಮತ್ತು ಆಸಿಯಾ ಅವರು ಆಪ್ತವಾಗಿದ್ದರು. ಆದರೆ ಈಗ ಟಾಸ್ಕ್ ರದ್ದಾದ ಬಳಿಕ ಆಸಿಯಾ ಹಾಗೂ ಯಶಸ್ ನಡುವೆ ಮಾತಿನ ಜಟಾಪಟಿ ನಡೆದಿದೆ. ಆಸಿಯಾ ಅವರನ್ನು ಬಲಹೀನ ಸ್ಪರ್ಧಿ ಎಂದು ಯಶಸ್ ಅವರು ಘೋಷಿಸಿದ್ದೇ ಈ ಮನಸ್ತಾಪಕ್ಕೆ ಕಾರಣ ಆಗಿದೆ. ಯಶಸ್ ಅವರು ಸೌಂದರ್ಯಾ ಪರವಾಗಿ ಪಕ್ಷಪಾತ ಮಾಡಿದ್ದಾರೆ ಎಂಬ ಕಾರಣಕ್ಕೆ ಆಸಿಯಾ ಕೋಪಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More