KGF 3: ‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಬಿಗ್ ಸರ್ಪ್ರೈಸ್ ನೋಡಿ ಥ್ರಿಲ್ ಆದ ಅಭಿಮಾನಿಗಳು; ಟ್ರೆಂಡ್ ಆಯ್ತು ‘ಕೆಜಿಎಫ್ 3’

KGF Chapter 3 | KGF Chapter 2 | Prashanth Neel: ‘ಕೆಜಿಎಫ್ ಚಾಪ್ಟರ್ 2’ ಚಿತ್ರ ನೋಡಿದ ಜನರು ಕೊನೆಯ ಕ್ರೆಡಿಟ್ಸ್ ದೃಶ್ಯಗಳನ್ನು ನೋಡಲು ಮರೆಯಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಅಭಿಮಾನಿಗಳಿಗೆ ಚಿತ್ರತಂಡ ದೊಡ್ಡದೊಂದು ಸರ್ಪ್ರೈಸ್ ನೀಡಿದೆ. ಇದರ ಬೆನ್ನಲ್ಲೇ ‘ಕೆಜಿಎಫ್ 3’ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

KGF 3: ‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಬಿಗ್ ಸರ್ಪ್ರೈಸ್ ನೋಡಿ ಥ್ರಿಲ್ ಆದ ಅಭಿಮಾನಿಗಳು; ಟ್ರೆಂಡ್ ಆಯ್ತು ‘ಕೆಜಿಎಫ್ 3’
ಯಶ್, ಪ್ರಶಾಂತ್ ನೀಲ್
Follow us
TV9 Web
| Updated By: shivaprasad.hs

Updated on:Apr 14, 2022 | 11:47 AM

‘ಕೆಜಿಎಫ್ ಚಾಪ್ಟರ್ 2’ (KGF Chapter 2) ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೆಜೆಎಫ್ ಟ್ರೆಂಡ್ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕುಸುರಿತನಕ್ಕೆ, ಕತೆ ಹೇಳುವ ಶೈಲಿಗೆ ಜನರು ಶಹಬ್ಬಾಸ್​ಗಿರಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅದ್ಭುತವಾದ ಕ್ಲೈಮ್ಯಾಕ್ಸ್​ಅನ್ನು ಕೆಜಿಎಫ್ 2 ಒಳಗೊಂಡಿದೆ ಎನ್ನುವ ಅಭಿಪ್ರಾಯಗಳನ್ನು ನೆಟ್ಟಿಗರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಚಿತ್ರ ನೋಡಿದ ಜನರು ಕೊನೆಯ ಕ್ರೆಡಿಟ್ಸ್ ದೃಶ್ಯಗಳನ್ನು ನೋಡಲು ಮರೆಯಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಚಿತ್ರತಂಡ ಅಭಿಮಾನಿಗಳಿಗೆ ದೊಡ್ಡದೊಂದು ಸರ್ಪ್ರೈಸ್ ನೀಡಿದೆ. ಹೌದು, ಚಿತ್ರದ ಕೊನೆಯಲ್ಲಿ ‘ಕೆಜಿಎಫ್ 3’ಯ (KGF 3) ಮುನ್ಸೂಚನೆಯನ್ನು ನೀಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿದೆ. ಸದ್ಯ ಈ ದೃಶ್ಯಗಳನ್ನು ಅಭಿಮಾನಿಗಳು ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದು, ಈಗಲೇ ನಿರೀಕ್ಷೆ ಹೆಚ್ಚಿಸಿದೆ ಎಂದು ಬರೆದುಕೊಂಡಿದ್ದಾರೆ.

‘ಕೆಜಿಎಫ್ 3’ ಬಗ್ಗೆ ನೆಟ್ಟಿಗರು ಹಂಚಿಕೊಂಡಿರುವ ಟ್ವೀಟ್​ಗಳು:

ಬಾಕ್ಸಾಫೀಸ್ ವಿಶ್ಲೇಶಕ ಹಾಗೂ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಕೂಡ ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದಾರೆ. ‘ಕೆಜಿಎಫ್ 3’ ಬರಲಿದೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

‘ಕೆಜಿಎಫ್ 3’ ಬಗ್ಗೆ ಪ್ರಶಾಂತ್ ನೀಲ್ ಹೇಳಿದ್ದೇನು?

‘ಕೆಜಿಎಫ್’ ಒಂದು ಚಿತ್ರವಾಗಿ ಬರಬೇಕಿದ್ದದ್ದು ಎರಡು ಭಾಗಗಳಲ್ಲಿ ತಯಾರಾಗಿತ್ತು. ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಕೆಜಿಎಫ್ 2’ ಪ್ರಚಾರದ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್​ಗೆ ಮುಂದಿನ ಭಾಗದ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆದರೆ ಈ ಬಗ್ಗೆ ಖಚಿತ ಉತ್ತರವನ್ನು ಅವರು ನೀಡಿರಲಿಲ್ಲ. ಆದರೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರಶಾಂತ್ ನೀಲ್ ಈ ಬಗ್ಗೆ ಮೌನಮುರಿದಿದ್ದರು.

‘ಕೆಜಿಎಫ್ 3’ ಬರಬೇಕೋ ಬೇಡವೋ ಎನ್ನುವುದು ‘ಕೆಜಿಎಫ್ 2’ ನೋಡಿದ ಪ್ರೇಕ್ಷಕರು ನಿರ್ಧರಿಸಬೇಕು. ಈ ಸಂದರ್ಭದಲ್ಲಿ ನಮ್ಮ ಗಮನ ಕೆಜಿಎಫ್ 2 ಗೆ ಎಂದಿದ್ದರು. ಈ ಮೂಲಕ ಅವರು ಈ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದರು. ಇದೀಗ ‘ಕೆಜಿಎಫ್ 2’ ಕೊನೆಯಲ್ಲಿ ಮುಂದಿನ ಭಾಗದ ಮುನ್ಸೂಚನೆ ಇದೆ. ಜತೆಗೆ ಅಭಿಮಾನಿಗಳೂ ಈ ಬಗ್ಗೆ ಕುತೂಹಲಗೊಂಡಿದ್ದು, ‘ಕೆಜಿಎಫ್ 3’ ಬರಬೇಕು ಎಂದು ಅಪೇಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ಮುಂದಿನ ಭಾಗ ಬರಬಹುದೇ? ಬಂದರೆ ಯಾವಾಗ? ಎನ್ನುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಚಿತ್ರ ನೋಡಿ ‘ಕೆಜಿಎಫ್ 3’ ಬಗ್ಗೆ ಹೇಳಿದ ಅಭಿಮಾನಿಗಳು:

ಇದನ್ನೂ ಓದಿ: KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ

ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್ ಚಾಪ್ಟರ್ 2’- ಕಾರಣವೇನು? ರಾಜ್ಯದ ವಿವಿಧೆಡೆ ಬಿಡುಗಡೆ ಸಂಭ್ರಮ ಹೇಗಿದೆ?

Published On - 11:25 am, Thu, 14 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ