ಜ್ಯೂ. ಎನ್​ಟಿಆರ್​ ತಾಯಿ ಜತೆ ಇರುವ ವಿಶೇಷ ಬಾಂಧವ್ಯದ ಬಗ್ಗೆ ಮಾತಾಡಿದ ಯಶ್​; ಇದು ಕನ್ನಡದ ನಂಟು

ಜ್ಯೂ. ಎನ್​ಟಿಆರ್ ಕುಟುಂಬದ ಜೊತೆಗೆ ಯಶ್​ ಅವರಿಗೆ ಉತ್ತಮ ಒಡನಾಟ ಇದೆ. ಆ ಕುರಿತು ಅವರು ಮಾತನಾಡಿದ್ದಾರೆ.

ಜ್ಯೂ. ಎನ್​ಟಿಆರ್​ ತಾಯಿ ಜತೆ ಇರುವ ವಿಶೇಷ ಬಾಂಧವ್ಯದ ಬಗ್ಗೆ ಮಾತಾಡಿದ ಯಶ್​; ಇದು ಕನ್ನಡದ ನಂಟು
ಯಶ್​, ಜ್ಯೂ. ಎನ್​ಟಿಆರ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 14, 2022 | 1:28 PM

ನಟ ಯಶ್​ (Yash) ಈಗ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ಪ್ಯಾನ್​ ಇಂಡಿಯಾ ಸಿನಿಮಾ ಮೂಲಕ ಅವರು ದೇಶವ್ಯಾಪ್ತಿ ಪ್ರಸಿದ್ಧಿ ಪಡೆದಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಅದೇ ರೀತಿ ಎಲ್ಲ ಭಾಷೆಯ ಚಿತ್ರರಂಗದವರ ಜೊತೆಗೂ ಯಶ್​ ಉತ್ತಮ ನಂಟು ಹೊಂದಿದ್ದಾರೆ. ಅದರಲ್ಲೂ ಪಕ್ಕದ ಟಾಲಿವುಡ್​ನಲ್ಲಿ ಅವರಿಗೆ ಅನೇಕ ಸೆಲೆಬ್ರಿಟಿಗಳು ಸ್ನೇಹಿತರಾಗಿದ್ದಾರೆ. ರಾಮ್​ ಚರಣ್, ಜ್ಯೂ, ಎನ್​ಟಿಆರ್​ (Jr NTR) ಸೇರಿದಂತೆ ಹಲವರ ಜೊತೆ ಅವರಿಗೆ ಬಾಂಧವ್ಯ ಇದೆ. ಯಶ್​ ಪ್ರತಿ ಬಾರಿ ಸಿನಿಮಾ ಕೆಲಸಗಳ ಸಲವಾಗಿ ಹೈದರಾಬಾದ್​ಗೆ ಹೋದಾಗ ರಾಮ್​ ಚರಣ್​ ಅವರು ಮನೆಯಲ್ಲಿ ತಯಾರಿಸಿದ ಅಡುಗೆಯಲ್ಲಿ ಕಳಿಸಿಕೊಡುತ್ತಾರಂತೆ. ಇಂಥ ಹಲವು ಸಂಗತಿಗಳ ಬಗ್ಗೆ ‘ರಾಕಿಂಗ್​ ಸ್ಟಾರ್​’ ಮಾತನಾಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಪ್ರಮೋಷನ್​ ಸಲುವಾಗಿ ಹೈದರಾಬಾದ್​ನಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡಿದಾಗ ಈ ವಿಚಾರಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಆಯಾ ಊರುಗಳಿಗೆ ತೆರಳಿದಾಗ ಅಲ್ಲಿನ ಭಾಷೆಯಲ್ಲಿ ಮಾತನಾಡಲು ಯಶ್​ ಪ್ರಯತ್ನಿಸುತ್ತಾರೆ. ಅದರಿಂದ ಅವರಿಗೆ ಅಭಿಮಾನಿಗಳು ಹೆಚ್ಚು ಗೌರವ ನೀಡುತ್ತಾರೆ. ಟಾಲಿವುಡ್​ನ ‘ಆರ್​ಆರ್​ಆರ್​’ ಸಿನಿಮಾ ಬಗ್ಗೆ ಯಶ್​ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಆ ಚಿತ್ರದಲ್ಲಿ ನಟಿಸಿದ ಸ್ಟಾರ್​ ಕಲಾವಿದರಾದ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಜೊತೆ ತಮಗೆ ಇರುವ ಸ್ನೇಹ-ಸಂಬಂಧ ಯಾವ ರೀತಿಯದ್ದು ಎಂಬುದನ್ನು ಕೂಡ ತಿಳಿಸಿದ್ದಾರೆ.

ಜ್ಯೂ. ಎನ್​ಟಿಆರ್​ ಅವರ ಮನೆಗೆ ಯಶ್​ ಒಂದೆರಡು ಬಾರಿ ಭೇಟಿ ನೀಡಿದ್ದಾರೆ. ಜ್ಯೂ. ಎನ್​ಟಿಆರ್ ಅವರು ಊಟಕ್ಕೆ ಆಹ್ವಾನಿಸಿದ್ದರು. ಅವರ ಕುಟುಂಬದವರು ನೀಡಿದ ಆತಿಥ್ಯ ಕಂಡು ಯಶ್​ ಖುಷಿಪಟ್ಟಿದ್ದಾರೆ. ಜ್ಯೂ. ಎನ್​​ಟಿಆರ್​ ಅವರ ತಾಯಿ ಶಾಲಿನಿ ಸ್ವಾಗತಿಸಿ, ಅತಿಥಿ ಸತ್ಕಾರ ಮಾಡಿದ ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಯಶ್​. ಜ್ಯೂ. ಎನ್​ಟಿಆರ್​ ತಾಯಿ ಕನ್ನಡದವರಾದ ಕಾರಣ ಇಷ್ಟೊಂದು ಬಾಂಧವ್ಯ ಬೆಳೆಯಲು ಸಾಧ್ಯವಾಯ್ತು ಎಂಬುದು ಅವರ ಭಾವನೆ. ‘ಅವರು ಕನ್ನಡದವರಾದ್ದರಿಂದ ಅವರ ಜೊತೆ ನಾವು ಸುಲಭವಾಗಿ ಮಾತನಾಡಬಹುದು’ ಎಂದು ಯಶ್​ ಹೇಳಿದ್ದಾರೆ. ಅದೇ ರೀತಿ ಜ್ಯೂ. ಎನ್​ಟಿಆರ್ ಅವರಿಗೂ ಕನ್ನಡದ ಮೇಲೆ ಅಭಿಮಾನ ಇದೆ. ಅವಕಾಶ ಸಿಕ್ಕಾಗಲೆಲ್ಲ ಅವರು ಕನ್ನಡದಲ್ಲಿ ಮಾತನಾಡುತ್ತಾರೆ.

ಕನ್ನಡದಲ್ಲಿ ಮೂಡಿಬಂದಿರುವ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್​ ಆಗಿ ಬಿಡುಗಡೆ ಆಗಿದೆ. ಆಯಾ ಭಾಷೆಯಲ್ಲಿ ಜನರು ಈ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಹಿಂದಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದಿ ವರ್ಷನ್​ನಿಂದ ಈ ಸಿನಿಮಾಗೆ ಅತಿ ಹೆಚ್ಚು ಕಲೆಕ್ಷನ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಬಾಲಿವುಡ್​ ಬಾಕ್ಸ್​ ಆಫೀಸ್​ ತಜ್ಞ ತರಣ್​ ಆದರ್ಶ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಒಂದೇ ಪದದಲ್ಲಿ ಇದನ್ನು ‘ಬ್ಲಾಕ್​ ಬಸ್ಟರ್​’ ಎಂದು ಹೊಗಳಿದ್ದಾರೆ. 5ಕ್ಕೆ 4.5 ರೇಟಿಂಗ್​ ನೀಡಿದ್ದಾರೆ. ಹಾಗಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಈ ಚಿತ್ರದ ಮೇಲೆ ಇನ್ನಷ್ಟು ಕ್ರೇಜ್​ ಹೆಚ್ಚಾಗಿದೆ.

ಇದನ್ನೂ ಓದಿ:

Yash Boss: ‘ಬಾಸ್’​ ಸ್ಥಾನ ಪಡೆದುಕೊಂಡ ಯಶ್​; ದೇಶಾದ್ಯಂತ ಟ್ರೆಂಡ್​ ಆಗಿದೆ ಈ ಹೆಸರು

‘ಕೆಜಿಎಫ್​ 3ನೇ ಪಾರ್ಟ್​ ಬರಲಿದೆ’: ಭವಿಷ್ಯ ನುಡಿದ ಪ್ರೇಕ್ಷಕರು; ಯಶ್​ ಫ್ಯಾನ್ಸ್​ ಹೀಗೆ ಹೇಳ್ತಿರೋದು ಏಕೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ