ದೇವರ ಎದುರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಪೋಸ್ಟರ್​ ಇಟ್ಟು ಪೂಜೆ ಮಾಡಿದ ಯಶ್​ ಅಭಿಮಾನಿಗಳು

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ ಯಶಸ್ಸು ಸಿಗಲಿ ಎಂದು ಯಶ್​ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ವಿಡಿಯೋ ಇಲ್ಲಿದೆ..

TV9kannada Web Team

| Edited By: Madan Kumar

Apr 13, 2022 | 3:16 PM

ಏ.14ರಂದು ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ಅನೇಕ ಫೂಜೆಗಳನ್ನು ಮಾಡಿಸಲಾಗುತ್ತಿದೆ. ಸ್ವತಃ ಅಭಿಮಾನಿಗಳು ಕೂಡ ‘ಕೆಜಿಎಫ್​ 2’ (KGF 2) ಸಿನಿಮಾದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿಯ ಯಶ್ ಅಭಿಮಾನಿಗಳು ದುರ್ಗಾದೇವಿ ದೇವಸ್ಥಾನದಲ್ಲಿ ದೇವರ ಎದುರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಪೋಸ್ಟರ್​ ಇಟ್ಟು ಪೂಜೆ ಮಾಡಿಸಿದ್ದಾರೆ. ಇತ್ತೀಚೆಗಷ್ಟೇ ಯಶ್​ (Yash) ಕೂಡ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮುಂತಾದ ಕಡೆಗಳಿಗೆ ತೆರಳಿ ದೇವರ ದರ್ಶನ ಪಡೆದುಕೊಂಡಿದ್ದರು. ಮೊದಲ ದಿನ ‘ಕೆಜಿಎಫ್​: ಚಾಪ್ಟರ್​ 2’ ಭರ್ಜರಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:

Sulthana lyrical video: ಅಬ್ಬರಿಸಲು ಬಂದ ‘ಸುಲ್ತಾನ’: ಹೊಸ ಹಾಡು​ ಬಿಡುಗಡೆ ಮಾಡಿದ ‘ಕೆಜಿಎಫ್​: ಚಾಪ್ಟರ್​ 2’ ತಂಡ

ಸುನಾಮಿ ಸೃಷ್ಟಿ ಮಾಡಲಿದೆ ‘ಕೆಜಿಎಫ್​: ಚಾಪ್ಟರ್ 2’ ಚಿತ್ರ: ಮೊದಲ ದಿನ ಆಗುವ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು?

Follow us on

Click on your DTH Provider to Add TV9 Kannada