‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ

ಸಿನಿಪ್ರಿಯರ ವಲಯದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಅಭಿಮಾನಿಗಳ ಕ್ರೇಜ್​ ಹೇಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ
| Updated By: ಮದನ್​ ಕುಮಾರ್​

Updated on: Apr 11, 2022 | 9:41 AM

ಕನ್ನಡ ಚಿತ್ರರಂಗದ ಹೆಮ್ಮೆಯ ನಟನಾಗಿ ಯಶ್ (Yash)​ ಬೆಳೆದುನಿಂತಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರ ಖ್ಯಾತಿ ಹೆಚ್ಚಿದೆ. ಈಗ ಅವರ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಬಿಡುಗಡೆಗೆ ಸಜ್ಜಾಗಿದೆ. ಏ.14ರಂದು ವಿಶ್ವಾದ್ಯಂತ ಈ ಚಿತ್ರ ರಿಲೀಸ್​ ಆಗಲಿದೆ. ನಿರ್ದೇಶಕ ಪ್ರಶಾಂತ್​ ನೀಲ್​, ಹೀರೋ ಯಶ್​ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಕೆಜಿಎಫ್​ 2’ ಸಿನಿಮಾ ಹಲವು ದಾಖಲೆಗಳನ್ನು ಬರೆಯುವುದರಲ್ಲಿ ಅನುಮಾನ ಇಲ್ಲ. ಆದರೆ ಅದಕ್ಕೂ ಮುನ್ನವೇ ಅಭಿಮಾನಿಗಳು ಹೊಸದೊಂದು ದಾಖಲೆ ಮಾಡಿದ್ದಾರೆ. ಯಶ್​ ಅವರ ಅತಿ ದೊಡ್ಡ ಮೊಸಾಯಿಕ್​ ಬುಕ್​ ಪೋಟ್ರೇಟ್​ (Mosaic Portrait) ರಚಿಸಲಾಗಿದೆ. ಇದು ಬರೋಬ್ಬರಿ 21,600 ಚದರ ಅಡಿ ಇದೆ. ಇದಕ್ಕಾಗಿ 20,700 ಬುಕ್​ಗಳನ್ನ ಬಳಸಲಾಗಿದೆ. ಮಾಲೂರಿನ ವೈಟ್ ಗಾರ್ಡನ್ ಗ್ರೌಂಡ್ಸ್​ನಲ್ಲಿ ಈ ಪೋಟ್ರೇಟ್ ಮಾಡಲಾಗಿದೆ. ಇದರ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಇದನ್ನೂ ಓದಿ:

‘ಕೆಜಿಎಫ್​ ಚಾಪ್ಟರ್​ 2’ ಬಗ್ಗೆ ಹಲವು ಅಚ್ಚರಿಯ ವಿಚಾರಗಳು; ಯಶ್ ಜತೆಗಿನ ವಿಶೇಷ ಸಂದರ್ಶನ

ಆನ್​ಲೈನ್ ಟಿಕೆಟ್​ ಬುಕಿಂಗ್​ನಲ್ಲಿ ಧೂಳೆಬ್ಬಿಸಿದ ‘ಕೆಜಿಎಫ್​: ಚಾಪ್ಟರ್​ 2’; ಹಲವು ಶೋಗಳು ಸೋಲ್ಡ್​ಔಟ್​

Follow us