‘ಕೆಜಿಎಫ್​: ಚಾಪ್ಟರ್​ 2’ ಟಿಕೆಟ್​ ಪಡೆಯಲು ಫ್ಯಾನ್ಸ್​ ಹರಸಾಹಸ; ಕಾಲು ಮೇಲೆ ಮಾಡಿ ನಿಂತ ಅಭಿಮಾನಿ

ಯಶ್​ ಅಭಿಮಾನಿಗಳಿಗೆ ಇಂದು ನಿಜವಾದ ಹಬ್ಬ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನೋಡಿ ಎಲ್ಲರೂ ಎಂಜಾಯ್​ ಮಾಡುತ್ತಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಟಿಕೆಟ್​ ಪಡೆಯಲು ಫ್ಯಾನ್ಸ್​ ಹರಸಾಹಸ; ಕಾಲು ಮೇಲೆ ಮಾಡಿ ನಿಂತ ಅಭಿಮಾನಿ
| Updated By: ಮದನ್​ ಕುಮಾರ್​

Updated on: Apr 14, 2022 | 3:29 PM

ಅದ್ದೂರಿಯಾಗಿ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆ ಆಗಿದೆ. ಯಶ್​ (Yash) ನಟನೆ ಮತ್ತು ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಬಹುಕಾಲದಿಂದ ಕಾದಿದ್ದರು. ಇಂದು (ಏ.14) ದೇಶಾದ್ಯಂತ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​ 2’ ಸಿನಿಮಾ ಅಬ್ಬರಿಸಿದೆ. ಇಂಥ ಹೈವೋಲ್ಟೇಜ್​ ಸಿನಿಮಾಗಳ ಫಸ್ಟ್​ ಡೇ ಟಿಕೆಟ್​ ಪಡೆಯುವುದು ಎಂದರೆ ಸುಲಭದ ಮಾತಲ್ಲ. ಹಾಗಂತ ಅಭಿಮಾನಿಗಳು (Yash Fans) ಸುಮ್ಮನೆ ಬಿಡುವುದೂ ಇಲ್ಲ. ಕೊಪ್ಪಳದಲ್ಲಿ ಅಭಿಮಾನಿಯೊಬ್ಬರು ಕಾಲು ಮೇಲೆ ಮಾಡಿ ನಿಂತು ಟಿಕೆಟ್​ ಪಡೆದಿದ್ದಾರೆ. ಟಿಕೆಟ್​ ಸಲುವಾಗಿ ಅವರ ಮಾಡಿದ ಸಾಹಸ ಈ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:

KGF Chapter 2 Twitter Review: ಮಧ್ಯರಾತ್ರಿ ನೋಡಿದವರಿಗೆ ‘ಕೆಜಿಎಫ್​ 2’ ಇಷ್ಟ ಆಯ್ತಾ? ಇಲ್ಲಿದೆ ಟ್ವಿಟರ್​ ವಿಮರ್ಶೆ

‘ಕೆಜಿಎಫ್​ 3ನೇ ಪಾರ್ಟ್​ ಬರಲಿದೆ’: ಭವಿಷ್ಯ ನುಡಿದ ಪ್ರೇಕ್ಷಕರು; ಯಶ್​ ಫ್ಯಾನ್ಸ್​ ಹೀಗೆ ಹೇಳ್ತಿರೋದು ಏಕೆ?

Follow us