ಮಕ್ಕಳ ಲೋಕದಲ್ಲಿ ಹೇಗಿದೆ ‘ಕೆಜಿಎಫ್​ 2’ ಕ್ರೇಜ್​? ಯಶ್​ ರೀತಿಯೇ ‘ಐ ಕಾಂಟ್​ ಅವಾಯ್ಡ್​..’ ಎಂದ ಪುಟಾಣಿ ಪ್ರತಿಭೆ

KGF Chapter 2: ಪ್ರತಿ ವೀಕೆಂಡ್​ನಲ್ಲಿ ‘ಡ್ರಾಮಾ ಜ್ಯೂನಿಯರ್ಸ್​’ ಮಕ್ಕಳು ಭರ್ಜರಿ ಮನರಂಜನೆ ನೀಡುತ್ತಾರೆ. ಈ ಬಾರಿ ‘ಕೆಜಿಎಫ್​: ಚಾಪ್ಟರ್​ 2’ ಥೀಮ್​ನಲ್ಲಿ ಸ್ಕಿಟ್​ ಮಾಡಲಿದ್ದಾರೆ.

ಮಕ್ಕಳ ಲೋಕದಲ್ಲಿ ಹೇಗಿದೆ ‘ಕೆಜಿಎಫ್​ 2’ ಕ್ರೇಜ್​? ಯಶ್​ ರೀತಿಯೇ ‘ಐ ಕಾಂಟ್​ ಅವಾಯ್ಡ್​..’ ಎಂದ ಪುಟಾಣಿ ಪ್ರತಿಭೆ
ಡ್ರಾಮಾ ಜ್ಯೂನಿಯರ್ಸ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 13, 2022 | 9:05 AM

ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಈ ಸಿನಿಮಾ ಸಜ್ಜಾಗಿದೆ. ಯಶ್​ (Yash) ನಟನೆ, ಆ್ಯಕ್ಷನ್​ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಮೊದಲ ದಿನದ ಎಲ್ಲ ಟಿಕೆಟ್​ಗಳು ಸೋಲ್ಡ್​ ಔಲ್ಡ್​ ಆಗಿವೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಪರರಾಜ್ಯಗಳಲ್ಲೂ ‘ಕೆಜಿಎಫ್​ 2’ ಸಿನಿಮಾ ಧೂಳೆಬ್ಬಿಸುವುದು ಖಚಿತವಾಗಿದೆ. ಪ್ರಶಾಂತ್​ ನೀಲ್​ ಅವರು ಈ ಬಾರಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಸಮಯ ಹತ್ತಿರವಾಗಿದೆ. ಉತ್ತರ ಭಾರತದಲ್ಲೂ ಈ ಚಿತ್ರಕ್ಕೆ ಅತ್ಯುತ್ತಮ ಓಪನಿಂಗ್​ ಸಿಗಲಿದೆ. ಇಷ್ಟೆಲ್ಲ ಕ್ರೇಜ್​ ಸೃಷ್ಟಿ ಮಾಡಿರುವ ಸಿನಿಮಾ ಬಗ್ಗೆ ಮಕ್ಕಳು ಕೂಡ ಗುಂಗು ಹತ್ತಿಸಿಕೊಂಡಿದ್ದಾರೆ. ನಟ ಯಶ್​ ಅವರಿಗೆ ಎಲ್ಲ ವಯೋಮಾನದ ಅಭಿಮಾನಿಗಳು ಇದ್ದಾರೆ. ಚಿಕ್ಕ ಮಕ್ಕಳು ಕೂಡ ಅವರನ್ನು ಇಷ್ಟಪಡುತ್ತಾರೆ. ಈಗ ‘ಡ್ರಾಮಾ ಜ್ಯೂನಿಯರ್ಸ್​’ (Drama Juniors 4) ವೇದಿಕೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ರೀತಿ ಸ್ಕಿಟ್​ ಮಾಡಲಾಗಿದೆ. ಅದನ್ನು ಕಂಡು ಜಡ್ಜ್​ಗಳಾದ ರವಿಚಂದ್ರನ್​, ರಚಿತಾ ರಾಮ್​, ಲಕ್ಷ್ಮೀ ಅವರು ಬಿದ್ದು ಬಿದ್ದು ನಕ್ಕಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್​’ ನಾಲ್ಕನೇ ಸೀಸನ್​ ಆರಂಭ ಆಗಿದೆ. ಪ್ರತಿ ವೀಕೆಂಡ್​ನಲ್ಲಿ ಭರ್ಜರಿ ಮನರಂಜನೆ ನೀಡಲು ಮಕ್ಕಳು ಒಂದಕ್ಕಿಂತ ಒಂದು ಸೂಪರ್​ ಆದ ಸ್ಕಿಟ್​ಗಳ ಮೂಲಕ ವೇದಿಕೆ ಏರುತ್ತಿದ್ದಾರೆ. ಈ ಬಾರಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಥೀಮ್​ನಲ್ಲಿ ಮಕ್ಕಳು ಅಭಿನಯಿಸಿದ್ದಾರೆ. ಆದರಲ್ಲಿ ಒಂದು ಟ್ವಿಸ್ಟ್​ ಇದೆ. ಯಶ್​ ನಟನೆಯ ‘ಕೆಜಿಎಫ್​ 2’ ಟ್ರೇಲರ್​ ಗಂಭೀರವಾಗಿ ಮೂಡಿಬಂದಿದೆ. ಆದರೆ ‘ಡ್ರಾಮಾ ಜ್ಯೂನಿಯರ್ಸ್​’ ಪುಟಾಣಿಗಳು ಕಾಮಿಡಿ ರೀತಿಯಲ್ಲಿ ಅದನ್ನು ಅಳವಡಿಸಿಕೊಂಡಿದ್ದಾರೆ.

‘ವಾಯ್ಲೆನ್ಸ್​.. ವಾಯ್ಲೆನ್ಸ್​.. ವಾಯ್ಲೆನ್ಸ್​..’ ಎಂದು ‘ಕೆಜಿಎಫ್​ 2’ ಟ್ರೇಲರ್​ನಲ್ಲಿ ಯಶ್​ ಹೊಡೆದಿರುವ ಡೈಲಾಗ್​ ಸಖತ್​ ಟ್ರೆಂಡ್​ ಆಗಿದೆ. ಅದಕ್ಕೆ ಹಾಸ್ಯದ ಸ್ಪರ್ಶ ನೀಡಿದ್ದಾರೆ ‘ಡ್ರಾಮಾ ಜ್ಯೂನಿಯರ್ಸ್​’ ಮಕ್ಕಳು. ‘ಕಾಮಿಡಿ ಕಾಮಿಡಿ ಕಾಮಿಡಿ.. ಐ ಡೋಂಟ್​ ಲೈಕ್​ ಇಟ್​. ಐ ಅವಾಯ್ಡ್​.. ಬಟ್​ ಕಾಮಿಡಿ ಲೈಕ್ಸ್​ ಮಿ.. ಐ ಕಾಂಟ್​ ಅವಾಯ್ಡ್​’ ಎಂದು ಪುಟಾಣಿ ಪ್ರತಿಭೆಗಳು ಡೈಲಾಗ್ ಹೊಡೆದಿರುವುದು ಕಂಡು ರವಿಚಂದ್ರನ್​, ಲಕ್ಷ್ಮೀ, ರಚಿತಾ ರಾಮ್​ ಸಖತ್​ ಎಂಜಾಯ್​ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯು ಈ ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರಸಾರ ಆಗಲಿದೆ. ಈ ಬಾರಿ ಜಡ್ಜ್​ ಸ್ಥಾನಕ್ಕೆ ರವಿಚಂದ್ರನ್​ ಆಗಮಿಸಿರುವುದರಿಂದ ಕಾರ್ಯಕ್ರಮದ ಮೆರುಗು ಹೆಚ್ಚಿದೆ.

View this post on Instagram

A post shared by Zee Kannada (@zeekannada)

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ವಿಚಾರಕ್ಕೆ ಬರೋದಾದರೆ, ಏ.14ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಯಶ್​, ಶ್ರೀನಿಧಿ ಶೆಟ್ಟಿ, ಪ್ರಕಾಶ್​ ರಾಜ್​, ಸಂಜಯ್​ ದತ್​, ರವೀನಾ ಟಂಡನ್​, ರಾವ್​ ರಮೇಶ್​, ಅರ್ಚನಾ ಜೋಯಿಸ್​ ಮುಂತಾದ ಕಲಾವಿದರ ನಟನೆಯನ್ನು ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರ ಬ್ಲಾಕ್​ಬಸ್ಟರ್​ ಹಿಟ್​ ಆಗಲಿದೆ ಎಂಬ ನಿರೀಕ್ಷೆ ಇದೆ. ‘ಕೆಜಿಎಫ್​ 2’ ಎದುರು ಪೈಪೋಟಿ ನೀಡಲು ಬಾಲಿವುಡ್​ನ ‘ಜೆರ್ಸಿ’ ಸಿನಿಮಾ ಸಿದ್ಧವಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಯಶ್​ ಹವಾ ಕಂಡು ‘ಜೆರ್ಸಿ’ ಸೈಲೆಂಟ್​ ಆಗಿದೆ. ಶಾಹಿದ್​ ಕಪೂರ್​ ನಟನೆಯ ಆ ಸಿನಿಮಾವನ್ನು ಒಂದು ವಾರ ತಡವಾಗಿ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ:

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನ ಯಶ್​ ಅಭಿಮಾನಿಗಳೇ ಮಾಡಿದ್ರು ದಾಖಲೆ; ಇಲ್ಲಿದೆ ವಿಡಿಯೋ

‘ಕೆಜಿಎಫ್​: ಚಾಪ್ಟರ್​ 2’ ರಿಲೀಸ್​ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ