ದಳಪತಿ ವಿಜಯ್ ಚಿತ್ರಕ್ಕೆ ಹಿನ್ನಡೆ; ಕಲೆಕ್ಷನ್​ ವಿಚಾರದಲ್ಲಿ ‘ಕೆಜಿಎಫ್​ 2’ ಹಿಂದಿಕ್ಕಲು ಬೀಸ್ಟ್​’ಗೆ ಅಸಾಧ್ಯ?

TV9kannada Web Team

TV9kannada Web Team | Edited By: Rajesh Duggumane

Updated on: Apr 13, 2022 | 6:03 AM

‘ಬೀಸ್ಟ್’ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಆದರೆ, ಚಿತ್ರಕ್ಕೆ ತಮಿಳುನಾಡಿನಲ್ಲಿ ಮಾತ್ರ ಹೆಚ್ಚು ಪ್ರಚಾರ ನೀಡಲಾಗಿದೆ. ಸಿನಿಮಾ ತಂಡ ಹಿಂದಿಯಲ್ಲಿ ನಾಮಕಾವಸ್ಥೆಗೆ ಮಾತ್ರ ರಿಲೀಸ್ ಮಾಡುತ್ತಿರುವಂತಿದೆ.

ದಳಪತಿ ವಿಜಯ್ ಚಿತ್ರಕ್ಕೆ ಹಿನ್ನಡೆ; ಕಲೆಕ್ಷನ್​ ವಿಚಾರದಲ್ಲಿ ‘ಕೆಜಿಎಫ್​ 2’ ಹಿಂದಿಕ್ಕಲು ಬೀಸ್ಟ್​’ಗೆ ಅಸಾಧ್ಯ?
ವಿಜಯ್-ಯಶ್

‘ಬೀಸ್ಟ್’ ಸಿನಿಮಾ (Beast Movie) ಇಂದು (ಏಪ್ರಿಲ್​ 13) ತೆರೆಗೆ ಬಂದಿದೆ. ದಳಪತಿ ವಿಜಯ್ (Thalapathy Vijay) ನಟನೆಯ ಸಿನಿಮಾ ಎಂಬ ಕಾರಣಕ್ಕೆ ‘ಬೀಸ್ಟ್​’ಗೆ ಸಾಕಷ್ಟು ಹೈಪ್ ಸಿಕ್ಕಿದೆ. ಏಪ್ರಿಲ್ 14ರಂದು ಯಶ್ ನಟನೆಯ, ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬರುತ್ತಿದೆ. ಯಾವ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೇಲುಗೈ ಸಾಧಿಸಲಿದೆ ಎಂಬ ಚರ್ಚೆ ಶುರುವಾಗಿದೆ. ಇಲ್ಲಿ ಸ್ಟಾರ್​ ವಾರ್ ಇಲ್ಲ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಆದರೆ, ಕಲೆಕ್ಷನ್​ ವಿಚಾರದಲ್ಲಿ ಅಭಿಮಾನಿಗಳ ವಲಯದಲ್ಲಿ ಈ ಬಗ್ಗೆ ಲೆಕ್ಕಾಚಾರ ಜೋರಾಗಿದೆ. ಮೊದಲ ದಿನದ ಕಲೆಕ್ಷನ್​ ವಿಚಾರದಲ್ಲಿ ‘ಕೆಜಿಎಫ್​ 2’ ಚಿತ್ರವನ್ನು (KGF Chapter 2) ‘ಬೀಸ್ಟ್​’ ಹಿಂದಿಕ್ಕೋದು ಕಷ್ಟ ಎನ್ನಲಾಗುತ್ತಿದೆ.

‘ಬೀಸ್ಟ್’ ಸಿನಿಮಾ ತಮಿಳು ಮಾತ್ರವಲ್ಲದೆ, ಕನ್ನಡ, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಆದರೆ, ಚಿತ್ರಕ್ಕೆ ತಮಿಳುನಾಡಿನಲ್ಲಿ ಮಾತ್ರ ಹೆಚ್ಚು ಪ್ರಚಾರ ನೀಡಲಾಗಿದೆ. ಸಿನಿಮಾ ತಂಡ ಹಿಂದಿಯಲ್ಲಿ ನಾಮಕಾವಸ್ಥೆಗೆ ಮಾತ್ರ ರಿಲೀಸ್ ಮಾಡುತ್ತಿರುವಂತಿದೆ. ಈ ಚಿತ್ರಕ್ಕೆ ಹಿಂದಿಯಲ್ಲಿ ಬೆರಳೆಣಿಕೆ ಚಿತ್ರಮಂದಿರಗಳು ಮಾತ್ರ ಸಿಕ್ಕಿವೆ. ‘ಬೀಸ್ಟ್’ ತಂಡ ಹಿಂದಿಯಲ್ಲಿ ಅಷ್ಟಾಗಿ ಪ್ರಚಾರ ಮಾಡಿಲ್ಲ. ಇನ್ನು, ಬಾಲಿವುಡ್​ನ ಯಾವ ಕಲಾವಿದರೂ ಈ ಸಿನಿಮಾದಲ್ಲಿ ಇಲ್ಲ. ಹೀಗಾಗಿ, ಚಿತ್ರಕ್ಕೆ ಅಷ್ಟಾಗಿ ಹೈಪ್ ಸಿಕ್ಕಿಲ್ಲ. ತೆಲುಗು ನಾಡಿನಲ್ಲೂ ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಗುತ್ತಿಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗಲಿದೆ.

ಆದರೆ, ‘ಕೆಜಿಎಫ್ ಚಾಪ್ಟರ್​ 2’ ಚಿತ್ರ ಆ ರೀತಿ ಅಲ್ಲ. ಈ ಸಿನಿಮಾಗೆ ದೊಡ್ಡ ಮಟ್ಟದ ಹೈಪ್ ಸಿಗುತ್ತಿದೆ. ಹಿಂದಿ ನಾಡಿನಲ್ಲಿ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗಿದೆ. ಬಾಲಿವುಡ್​ನ ಸಂಜಯ್ ದತ್ ಹಾಗೂ ರವೀನಾ ಟಂಡನ್ ಈ ಸಿನಿಮಾದಲ್ಲಿ ನಟಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್​ ಆಗಿದೆ. ಹಿಂದಿ ಬೆಲ್ಟ್​ನಲ್ಲಿ ದೊಡ್ಡ ಮಟ್ಟದಲ್ಲೇ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗಿನಲ್ಲೂ ಯಶ್ ಅವರ ಈ ಚಿತ್ರಕ್ಕೆ ಭಾರೀ ಬೇಡಿಕೆ ಇದೆ. ‘ಕೆಜಿಎಫ್​’ ಹಿಟ್ ಆಗಿರುವುದರಿಂದ ‘ಕೆಜಿಎಫ್ 2’ ಬಗ್ಗೆ ಹಲವರಿಗೆ ತಿಳಿದಿದೆ.

‘ಕೆಜಿಎಫ್​ 2’ ಚಿತ್ರಕ್ಕೆ ಮೊದಲ ದಿನ ಕನ್ನಡ, ಹಿಂದಿ, ತೆಲುಗಿನಿಂದ ದೊಡ್ಡ ಮಟ್ಟದ ಕಲೆಕ್ಷನ್ ಆಗಲಿದೆ. ತಮಿಳುನಾಡಿನಿಂದಲೂ ಈ ಸಿನಿಮಾಗೆ ಒಂದಷ್ಟು ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಹೀಗಾಗಿ, ‘ಕೆಜಿಎಫ್ 2’ ಮೊದಲ ದಿನ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡಲಿದೆ. ಮೊದಲ ದಿನ ಹಾಗೂ ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ ‘ಬೀಸ್ಟ್​’ ಚಿತ್ರಕ್ಕೆ ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕೋದು ಕಷ್ಟ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಪ್ರಿ-ಬುಕ್ಕಿಂಗ್​ನಲ್ಲಿ ದಾಖಲೆ ಬರೆಯುತ್ತಿರುವ ‘ಕೆಜಿಎಫ್ 2’; ಇದುವರೆಗೆ ಆದ ಕಲೆಕ್ಷನ್ ಎಷ್ಟು? ಮೊದಲ ದಿನ ಎಷ್ಟು ಗಳಿಸಬಹುದು?

‘ತೂಫಾನ್..’​ ಆಯ್ತು ಈಗ ‘ಸುಲ್ತಾನ್..’; ‘ಕೆಜಿಎಫ್​ 2’ ಹೊಸ ಸಾಂಗ್ ರಿಲೀಸ್​ಗೆ ಮುಹೂರ್ತ ಫಿಕ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada