AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೂಫಾನ್..’​ ಆಯ್ತು ಈಗ ‘ಸುಲ್ತಾನ್..’; ‘ಕೆಜಿಎಫ್​ 2’ ಹೊಸ ಸಾಂಗ್ ರಿಲೀಸ್​ಗೆ ಮುಹೂರ್ತ ಫಿಕ್ಸ್

‘ಕೆಜಿಎಫ್​ 2’ ಚಿತ್ರದ ಹೊಸ ಸಾಂಗ್ ರಿಲೀಸ್ ಆಗುತ್ತಿದೆ. ಸಿನಿಮಾ ತೆರೆಗೆ ಬರೋಕು ಒಂದು ದಿನ ಮೊದಲು ಹೊಸ ಹಾಡನ್ನು ರಿಲೀಸ್ ಮಾಡಿ, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

‘ತೂಫಾನ್..’​ ಆಯ್ತು ಈಗ ‘ಸುಲ್ತಾನ್..’; ‘ಕೆಜಿಎಫ್​ 2’ ಹೊಸ ಸಾಂಗ್ ರಿಲೀಸ್​ಗೆ ಮುಹೂರ್ತ ಫಿಕ್ಸ್
TV9 Web
| Edited By: |

Updated on: Apr 12, 2022 | 4:53 PM

Share

‘ಕೆಜಿಎಫ್ 2’ ಸಿನಿಮಾದ (KGF Chapter 2) ಎರಡು ಹಾಡುಗಳು ರಿಲೀಸ್ ಆಗಿ ಧೂಳೆಬ್ಬಿಸಿವೆ. ‘ತೂಫಾನ್​..’ ಹಾಡು ಸಖತ್ ರಗಡ್ ಆಗಿದ್ದರೆ, ‘ಗಗನ ನೀ’ ಹಾಡು ಸಖತ್​ ಎಮೋಷನ್​ನಿಂದ ಕೂಡಿತ್ತು. ಈಗ ಚಿತ್ರತಂಡ ಹೊಸ ಹಾಡಿನೊಂದಿಗೆ ಬರೋಕೆ ರೆಡಿ ಆಗಿದೆ. ‘ಸುಲ್ತಾನ್​..’ ಲಿರಿಕಲ್ ಸಾಂಗ್​ಅನ್ನು (Sultan Song) ‘ಕೆಜಿಎಫ್​ 2’ ತಂಡ ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ (Hombale Films)​ ಅಪ್​ಡೇಟ್ ನೀಡಿದೆ. ಬುಧವಾರ (ಏಪ್ರಿಲ್ 13) ಬೆಳಗ್ಗೆ 11.07 ಗಂಟೆಗೆ ಹೊಸ ಹಾಡು ರಿಲೀಸ್ ಮಾಡುವುದಾಗಿ ಸಿನಿಮಾ ತಂಡ ತಿಳಿಸಿದೆ.

‘ಕೆಜಿಎಫ್​ ಚಾಪ್ಟರ್​ 2’ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಅವರ ಆ್ಯಕ್ಷನ್ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಅಬ್ಬರಿಸಿದೆ. ಈ ಸಿನಿಮಾ ತೆರೆಗೆ ಬರೋಕು ಒಂದು ದಿನ ಮೊದಲು ಹೊಸ ಹಾಡನ್ನು ರಿಲೀಸ್ ಮಾಡಿ, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಇನ್ನು, ‘ಕೆಜಿಎಫ್ 2’ ವಿಮರ್ಶೆ ಹೊರಬಿದ್ದಿದೆ. ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ಅವರು ಚಿತ್ರಕ್ಕೆ ಐದು ಸ್ಟಾರ್ ನೀಡಿದ್ದಾರೆ ಪ್ರಶಾಂತ್ ನೀಲ್ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಕೆಜಿಎಫ್ 2’ ಬಗ್ಗೆ ಉಮೈರ್ ಬರೆದುಕೊಂಡಿದ್ದಾರೆ. ‘ಸಿನಿಮಾ ಅದ್ಭುತವಾಗಿದೆ. ವಿಶ್ಯುವಲ್​ಗಳು ಸ್ಟನ್ನಿಂಗ್ ಆಗಿದೆ. ಆ್ಯಕ್ಷನ್ ದೃಶ್ಯಗಳು ಸಾಕಷ್ಟು ಮನರಂಜನೆ ನೀಡುತ್ತವೆ. ಮತ್ತೆ ಮತ್ತೆ ಸಿನಿಮಾ ನೋಡಬೇಕು ಅನಿಸುತ್ತದೆ. ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ದೃಷ್ಟಿ ಹೀರೋ ಹಾಗೂ ವಿಲನ್ ಮೇಲೆ ಇರುತ್ತದೆ. ಯಶ್ ಅವರ ನಟನೆ ಮೈಯಲ್ಲಿ ವಿದ್ಯುತ್ ಹರಿಯುವಂತೆ ಮಾಡುತ್ತದೆ. ಸಂಜಯ್ ದತ್​ ನಟನೆ ಅತ್ಯದ್ಭುತ’ ಎಂದು ಬರೆದುಕೊಂಡಿದ್ದಾರೆ ಅವರು. ಇನ್ನು ಚಿತ್ರಕ್ಕೆ ಅವರು ಐದು ಸ್ಟಾರ್ ನೀಡಿದ್ದಾರೆ.

ಉಮೈರ್ ಅವರು ಈ ಮೊದಲು ‘ಆರ್​ಆರ್​ಆರ್​’ ಚಿತ್ರ ತೆರೆಗೆ ಬರುವುದಕ್ಕೂ ಮೊದಲೇ ವೀಕ್ಷಣೆ ಮಾಡಿದ್ದರು. ಈ ವೇಳೆ ಅವರು ಎಸ್​.ಎಸ್​. ರಾಜಮೌಳಿ ನಿರ್ದೇಶನವನ್ನು ಹೊಗಳಿದ್ದರು. ಸಿನಿಮಾ ಸೂಪರ್ ಎಂದು ಬರೆದುಕೊಂಡಿದ್ದರು. ಆ ಮಾತು ನಿಜವಾಗಿದೆ. ಸಿನಿಮಾ ಹಿಟ್ ಆಗಿ, ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಈಗ ಯಶ್ ಚಿತ್ರವನ್ನು ನೋಡಿ ಅವರು ಯಶಸ್ಸು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಿ-ಬುಕ್ಕಿಂಗ್​ನಲ್ಲಿ ದಾಖಲೆ ಬರೆಯುತ್ತಿರುವ ‘ಕೆಜಿಎಫ್ 2’; ಇದುವರೆಗೆ ಆದ ಕಲೆಕ್ಷನ್ ಎಷ್ಟು? ಮೊದಲ ದಿನ ಎಷ್ಟು ಗಳಿಸಬಹುದು?

ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ ‘ಕೆಜಿಎಫ್ 2’ ಟಿಕೆಟ್ ದರ? ಇಲ್ಲಿದೆ ವಿವರ

ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು