Sign In

By signing in or creating an account, you agree with Associated Broadcasting Company's Terms & Conditions and Privacy Policy.

Hombale Films: ಬಿಗ್​ ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’; ಆರ್​ಸಿಬಿ ಜೊತೆ ಹೊಸ ಸಾಹಸ

Hombale Films | RCB: ‘ಆರ್​ಸಿಬಿ’ ತಂಡದ ಜೊತೆಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಕೈ ಜೋಡಿಸಿದೆ. ಆ ಮೂಲಕ ಒಂದು ಹೊಸ ಹೆಜ್ಜೆ ಇಟ್ಟಿದೆ. ಈ ಬಗ್ಗೆ ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ.

Hombale Films: ಬಿಗ್​ ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’; ಆರ್​ಸಿಬಿ ಜೊತೆ ಹೊಸ ಸಾಹಸ
ಹೊಂಬಾಳೆ ಫಿಲ್ಮ್ಸ್​
Follow us
TV9 Web
| Updated By: ಮದನ್​ ಕುಮಾರ್​

Updated on:Apr 10, 2022 | 11:50 AM

ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಈಗ ಹೊಸ ಹೆಜ್ಜೆ ಇಟ್ಟಿದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2), ‘ಸಲಾರ್​’ ಮುಂತಾದ ಪ್ಯಾನ್​ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಇಡುತ್ತಿರುವ ಎಲ್ಲ ಹೆಜ್ಜೆಗಳೂ ಕೂಡ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡುತ್ತಿವೆ. ಈಗ ‘ಹೊಂಬಾಳೆ ಫಿಲ್ಮ್ಸ್​’ ವತಿಯಿಂದ ಹೊಸ ಬ್ರೇಕಿಂಗ್​ ನ್ಯೂಸ್​ ನೀಡಲಾಗಿದೆ. ‘ರಾಯಲ್​ ಚಾಲೆಂಜರ್ಸ್​ ಬೆಂಗಳೂರು’ (RCB) ತಂಡದ ಜೊತೆ ‘ಹೊಂಬಾಳೆ ಫಿಲ್ಮ್ಸ್​’ ಕೈ ಜೋಡಿಸಿದೆ. ಈ ಕುರಿತು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಭಾನುವಾರ (ಏ.10) ಬೆಳಗ್ಗೆ 11.15ಕ್ಕೆ ದೊಡ್ಡ ಅನೌನ್ಸ್​ ಮೆಂಟ್​. ಮನರಂಜನೆಯ ಹೊಸ ಯುಗದ ಆರಂಭ ಆಗುತ್ತಿದೆ’ ಎಂದು ಪೋಸ್ಟ್​ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಕೌತುಕ ಮೂಡಿಸಿತ್ತು. ಅದೇನು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

ಐಪಿಎಲ್​ ಕ್ರಿಕೆಟ್​ ಟೀಮ್​ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಕೈ ಜೋಡಿಸಿರುವುದು ಇದೇ ಮೊದಲು. ಆ ಮೂಲಕ ಹೊಸ ಬಗೆಯ ಮನರಂಜನೆಯನ್ನು ನೀಡಲು ವಿಜಯ್​ ಕಿರಗಂದೂರು ಅವರು ಪ್ಲ್ಯಾನ್​ ಮಾಡಿದ್ದಾರೆ. ಈ ಕುರಿತು ಅವರು ಪ್ರಕಟಣೆ ನೀಡಿದ್ದಾರೆ.

‘ಸಿನಿಮಾ ಮಾಡುವುದು ನನ್ನ ಪ್ಯಾಷನ್. ಕ್ರಿಕೆಟ್ ಪ್ರೇಮಿಯಾಗಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆ. ನಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ಮತ್ತು ಥ್ರಿಲ್ ಅನ್ನು ನೀಡಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ. ಸ್ವಲ್ಪ ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿರುವ ನಾವು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.

‘2022 ನಮ್ಮೆಲ್ಲರಿಗೂ ರಾಯಲ್‌ ಆಗಿರಲಿದೆ. ಕ್ರೀಡೆ ಮತ್ತು ಮನರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನರಂಜನಾ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್ ಆಗಿ ಸೆಲಬ್ರೇಟ್‌ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ’ ಎಂದು ವಿಜಯ್​ ಕಿರಗಂದೂರು ಅವರು ತಿಳಿಸಿದ್ದಾರೆ.

‘ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಲನ ಆಗಿದೆ. ಈ ಸಹಯೋಗವು ಭರಪೂರ ಮನರಂಜನೆ, ಗ್ಲಾಮರ್, ಚಲನಚಿತ್ರಗಳು, ಕ್ರೀಡೆಗಳ ಅದ್ಭುತ ಸಂಗಮವನ್ನು ಉಂಟುಮಾಡಲಿದೆ. ಕ್ರಿಕೆಟ್ ಮತ್ತು ಚಲನಚಿತ್ರಗಳಲ್ಲಿ ಅತ್ಯುತ್ಸಾಹ ಹೊಂದಿರುವ ದೇಶದಲ್ಲಿ, ಬೆಂಗಳೂರಿನ ಎರಡು ಅತ್ಯಂತ ಪ್ರೀತಿಯ ಕ್ಷೇತ್ರಗಳ ಹಿಂದೆಂದೂ ನೋಡಿರದ ಸಂಯೋಜನೆಯನ್ನು ಈ ಸಹಭಾಗಿತ್ವವು ರೂಪಿಸುತ್ತದೆ’ ಎಂದು ‘ಹೊಂಬಾಳೆ ಫಿಲ್ಮ್ಸ್​’ ತಿಳಿಸಿದೆ.

ಇದನ್ನೂ ಓದಿ:

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

ಯಶ್​ ಮಾತ್ರವಲ್ಲ, ಫ್ಯಾನ್ಸ್​ ಕೂಡ ಮಾಡ್ತಿದ್ದಾರೆ ದಾಖಲೆ; ಸಿದ್ಧವಾಗ್ತಿದೆ ಅತಿ ದೊಡ್ಡ ಮೊಸಾಯಿಕ್​ ಪೋಟ್ರೇಟ್

Published On - 11:25 am, Sun, 10 April 22

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ