ಇನ್ನೊಂದು ಪ್ಯಾನ್​​ ಇಂಡಿಯಾ ಚಿತ್ರದಲ್ಲಿ ‘ಕೆಜಿಎಫ್​ 2’ ನಟಿ ಅರ್ಚನಾ; ‘ಮ್ಯೂಟ್​’ ಟ್ರೇಲರ್​ ​ಮೆಚ್ಚಿದ ರವೀನಾ ಟಂಡನ್​

ಇನ್ನೊಂದು ಪ್ಯಾನ್​​ ಇಂಡಿಯಾ ಚಿತ್ರದಲ್ಲಿ ‘ಕೆಜಿಎಫ್​ 2’ ನಟಿ ಅರ್ಚನಾ; ‘ಮ್ಯೂಟ್​’ ಟ್ರೇಲರ್​ ​ಮೆಚ್ಚಿದ ರವೀನಾ ಟಂಡನ್​
ಅರ್ಚನಾ ಜೋಯಿಸ್

Mute Kannada Movie: ‘ಮ್ಯೂಟ್​’ ಟ್ರೇಲರ್​ ನೋಡಿದ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಚನಾ ಜೋಯಿಸ್​ ನಟಿಸಿದ್ದು, ರವೀನಾ ಟಂಡನ್​ ಟ್ರೇಲರ್​ ರಿಲೀಸ್​ ಮಾಡಿದ್ದಾರೆ.

TV9kannada Web Team

| Edited By: Madan Kumar

Apr 10, 2022 | 8:48 AM

ಈಗ ಪ್ಯಾನ್​ ಇಂಡಿಯಾ ಸಿನಿಮಾ ಎಂದರೆ ಥಟ್​ ಅಂತ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ನೆನಪಾಗುತ್ತದೆ. ಆ ಪರಿಯಾಗಿ ಅದು ಹವಾ ಸೃಷ್ಟಿ ಮಾಡಿದೆ. ಇತ್ತೀಚೆಗಂತೂ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್​ ಹೆಚ್ಚುತ್ತಿದೆ. ಒಂದು ಭಾಷೆಯಲ್ಲಿ ತಯಾರಾದ ಸಿನಿಮಾವನ್ನು ಹಲವು ಭಾಷೆಗಳಿಗೆ ಡಬ್​ ಮಾಡಿ ದೇಶಾದ್ಯಂತ ರಿಲೀಸ್​ ಮಾಡುವ ಟ್ರೆಂಟ್​ ಜೋರಾಗಿದೆ. ಈಗ ‘ಕೆಜಿಎಫ್​ 2’ ಚಿತ್ರದ ನಟಿ ಅರ್ಚನಾ ಜೋಯಿಸ್ (Archana Jois)​ ಅವರು ನಟಿಸಿರುವ ‘ಮ್ಯೂಟ್​’ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ರಮಿಕಾ ಸೇನ್​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ ಟಂಡನ್​ ಅವರು ‘ಮ್ಯೂಟ್​’ (Mute Kannada Movie) ಚಿತ್ರದ ಟ್ರೇಲರ್​ ಅನಾವರಣ ಮಾಡಿದ್ದಾರೆ. ಆ ಮೂಲಕ ಅರ್ಚನಾ ಜೋಯಿಸ್​ ನಟನೆಯ ಈ ಹೊಸ ಚಿತ್ರಕ್ಕೆ ರವೀನಾ ಟಂಡನ್​ (Raveena Tandon) ಬೆನ್ನು ತಟ್ಟಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ‘ಮ್ಯೂಟ್​’ ಸಿನಿಮಾ ಬಿಡುಗಡೆ ಆಗಲಿದೆ.

‘ಕೆಜಿಎಫ್​’ ಸಿನಿಮಾದಲ್ಲಿ ರಾಕಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡವರು ನಟಿ ಅರ್ಚನಾ ಜೋಯಿಸ್​. ಆ ಪಾತ್ರದಿಂದ ಅವರಿಗೆ ದೇಶವ್ಯಾಪಿ ಪ್ರಸಿದ್ಧಿ ಸಿಕ್ಕಿತು. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಅವರಿಗಾಗಿಯೇ ಒಂದು ಸಾಂಗ್​ ಕೂಡ ಈ ಚಿತ್ರದಲ್ಲಿದೆ. ಇಷ್ಟೆಲ್ಲ ಪ್ರಖ್ಯಾತಿ ಪಡೆದಿರುವ ಅವರು ‘ಮ್ಯೂಟ್​’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಈಗ ಗಮನ ಸೆಳೆಯುತ್ತಿದೆ.

ಇ.ಕೆ. ಪಿಕ್ಚರ್ಸ್ ಬ್ಯಾನರ್‌ನಲ್ಲಿ ‘ಮುಂಗಾರು ಮಳೆ 2’ ಖ್ಯಾತಿಯ ಜಿ. ಗಂಗಾಧರ್ ಅವರು ‘ಮ್ಯೂಟ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಮುಂಗಾರು ಮಳೆ 2’ ಸಿನಿಮಾದಲ್ಲಿ ನಿರ್ದೇಶಕ ಶಶಾಂಕ್ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ಅವರು ಈಗ ‘ಮ್ಯೂಟ್​’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ತಮಿಳಿನ ಖ್ಯಾತ ನಟ ಆಡುಕಲಂ ನರೇನ್ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಅವರು ಸಹ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರವೀನಾ ಟಂಡನ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಮ್ಯೂಟ್​’ ಸಿನಿಮಾದ ಟ್ರೇಲರ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ. ‘ಅರ್ಚನಾ ಜೋಯಿಸ್​ ನಟಿಸಿರುವ ಮ್ಯೂಟ್​ ಸಿನಿಮಾದ ಟ್ರೇಲರ್​ ಹಂಚಿಕೊಳ್ಳಲು ನಾನು ಎಗ್ಸೈಟ್​ ಆಗಿದ್ದೇನೆ. ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಸಿದ್ಧವಾಗಿರುವ ಸಿನಿಮಾ ಇದು’ ಎಂದು ಅವರು ಬರೆದುಕೊಂಡಿದ್ದಾರೆ. ಟ್ರೇಲರ್​ ನೋಡಿದ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಇದೊಂದು ಡಿಫರೆಂಟ್​ ಸಿನಿಮಾ ಎಂಬ ಅಭಿಪ್ರಾಯ ಎಲ್ಲರಿಂದ ಕೇಳಿಬರುತ್ತಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಟ ರಿಷಿ ಅವರು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದರು. ಡಾಲಿ ಧನಂಜಯ್ ಚಿತ್ರದ ಫಸ್ಟ್‌ಲುಕ್ ಅನಾವರಣ ಮಾಡಿದ್ದರು. ಇದೀಗ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆ ಹೇಳುವ ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ಅದರ ನಡುವೆಯೂ ‘ಮ್ಯೂಟ್​’ ಸಿನಿಮಾ ಭಿನ್ನವಾಗಿ ಗಮನ ಸೆಳೆಯುವ ಸೂಚನೆ ಸಿಕ್ಕಿದೆ. ಈ ಚಿತ್ರಕ್ಕೆ ‘ಮ್ಯೂಟ್​’ ಎಂದು ಶೀರ್ಷಿಕೆ ಇಟ್ಟಿದ್ದು ಯಾಕೆ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇದನ್ನೂ ಓದಿ:

ಫ್ಯಾನ್ಸ್​ ಪ್ರತಿಭೆಗೆ ಎಷ್ಟೊಂದು ಗೌರವ ಕೊಟ್ಟ ‘ಕೆಜಿಎಫ್​: ಚಾಪ್ಟರ್​ 2’ ತಂಡ; ರಾರಾಜಿಸುತ್ತಿವೆ ಪೋಸ್ಟರ್​ಗಳು

ಅಬ್ಬಬ್ಬಾ.. ಎಷ್ಟೊಂದು ಭಯಾನಕ ಅಧೀರನ ಲುಕ್; ಇಲ್ಲಿವೆ​‘ಕೆಜಿಎಫ್​ 2’ ನಟ ಸಂಜಯ್ ದತ್​ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada