ಅಬ್ಬಬ್ಬಾ.. ಎಷ್ಟೊಂದು ಭಯಾನಕ ಅಧೀರನ ಲುಕ್; ಇಲ್ಲಿವೆ‘ಕೆಜಿಎಫ್ 2’ ನಟ ಸಂಜಯ್ ದತ್ ಫೋಟೋಗಳು
ಸಂಜಯ್ ದತ್ ಅವರನ್ನು ಅಧೀರನ ಅವತಾರದಲ್ಲಿ ತೆರೆಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈಗಾಗಲೇ ಅವರ ಪೋಸ್ಟರ್ಗಳು ಕಿಚ್ಚು ಹತ್ತಿಸಿವೆ.
Updated on: Apr 03, 2022 | 9:11 AM

Bollywood actor Sanjay Dutt aka Adheera posters from KGF Chapter 2 movie

Bollywood actor Sanjay Dutt aka Adheera posters from KGF Chapter 2 movie

ಎಲ್ಲ ಬಗೆಯ ಪಾತ್ರಗಳಿಗೂ ಸೈ ಎಂಬಂತಹ ಪ್ರತಿಭಾವಂತ ನಟ ಸಂಜತ್ ದತ್. ಈಗ ಅವರು ಅಧೀರನಾಗಿ ಹೇಗೆಲ್ಲ ಅಬ್ಬರಿಸಿರಬಹುದು ಎಂಬುದನ್ನು ತಿಳಿದುಕೊಳ್ಳುವ ಸಮಯ ಹತ್ತಿರವಾಗಿದೆ. ಏ.14ರಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಆ ದಿನಕ್ಕಾಗಿ ಯಶ್ ಫ್ಯಾನ್ಸ್ ಕಾದಿದ್ದಾರೆ.

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಗ್ಗೆ ಹಿಂದಿ ಪ್ರೇಕ್ಷಕರು ಸಹ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲಿವುಡ್ ಕಲಾವಿದರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಇದರಲ್ಲಿ ನಟಿಸಿರುವುದರಿಂದ ಉತ್ತರ ಭಾರತದಲ್ಲಿ ಹೈಪ್ ಸೃಷ್ಟಿ ಆಗಿದೆ.

ವಿಶ್ವಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಗಲಿದೆ. ದೇಶದ ಹಲವು ನಗರಗಳಿಗೆ ತೆರಳಿ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಸಂಜಯ್ ದತ್ ಅವರಿಗೆ ಈ ಸಿನಿಮಾ ಮೇಲೆ ಅಪಾರವಾದ ಭರವಸೆ ಇದೆ.



















