ಫ್ಯಾನ್ಸ್ ಪ್ರತಿಭೆಗೆ ಎಷ್ಟೊಂದು ಗೌರವ ಕೊಟ್ಟ ‘ಕೆಜಿಎಫ್: ಚಾಪ್ಟರ್ 2’ ತಂಡ; ರಾರಾಜಿಸುತ್ತಿವೆ ಪೋಸ್ಟರ್ಗಳು
KGF Chapter 2 Posters: ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಏ.14ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈಗ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ.
Updated on: Apr 04, 2022 | 1:21 PM

Yash starrer KGF Chapter 2 team selects fan made poster for promotions

Yash starrer KGF Chapter 2 team selects fan made poster for promotions

ಜನರು ಈ ಪರಿ ರೆಸ್ಪಾನ್ಸ್ ನೀಡಿರುವುದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಫ್ಯಾನ್ ಮೇಡ್ ಪೋಸ್ಟರ್ಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಯಾವ ಪೋಸ್ಟರ್ ಎಲ್ಲಿ ಬಿತ್ತರ ಆಗಲಿದೆ ಎಂಬ ಮಾಹಿತಿಯನ್ನೂ ತಿಳಿಸಲಾಗಿದೆ. ಕರ್ನಾಟಕದ ಅಭಿಮಾನಿ ಸಚಿನ್ ಕುಮಾರ್ ಈ ಪೋಸ್ಟರ್ ರಚಿಸಿದ್ದಾರೆ.

ಹೊರರಾಜ್ಯಗಳ ಅಭಿಮಾನಿಗಳು ಕೂಡ ತಮ್ಮ ವಿಶೇಷ ಕಲ್ಪನೆಯಲ್ಲಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಚಿತ್ರತಂಡ ಆಯ್ಕೆ ಮಾಡಿದೆ. ಪೋಸ್ಟರ್ ರಚಿಸಿದ ಅಭಿಮಾನಿಗಳ ಹೆಸರನ್ನೂ ಕೂಡ ಉಲ್ಲೇಖಿಸಲಾಗಿದೆ. ತಮಿಳುನಾಡಿನ ಬಾಲಾಜಿ ಮೂರ್ತಿ ಅವರು ರಚಿಸಿದ ಪೋಸ್ಟರ್ ಇಲ್ಲಿದೆ.

ಎಲ್ಲ ರಾಜ್ಯಗಳಲ್ಲೂ ‘ಕೆಜಿಎಫ್: ಚಾಪ್ಟರ್ 2’ ಹವಾ ಜೋರಾಗಿದೆ. ಹಿಂದಿಯಲ್ಲಿ ಈ ಸಿನಿಮಾ ದೊಡ್ಡ ಹಿಟ್ ಆಗುವ ಸೂಚನೆ ಸಿಕ್ಕಿದೆ. ಮುಂಬೈನ ಪ್ರಮುಖ ಸ್ಥಳಗಳಲ್ಲಿ ಈ ಪೋಸ್ಟರ್ಗಳು ರಾರಾಜಿಸಲಿವೆ. ಮಹಾರಾಷ್ಟ್ರದ ಪರಿವರ್ತನ್ ಅವರು ಈ ಪೋಸ್ಟರ್ ರಚಿಸಿದ್ದಾರೆ.



















