Kannada News » Photo gallery » Tata Digital super app Tata Neu is all set to launch on April 7 Stright competition from Amazon and Flipkart
Tata Neu: ಬರುತ್ತಿದೆ ಹೊಸ ಇ ಕಾಮರ್ಸ್ ತಾಣ: ಬೆಚ್ಚಿಬಿದ್ದ ಅಮೆಜಾನ್, ಫ್ಲಿಪ್ಕಾರ್ಟ್
What is Tata Neu: ಭಾರತದ ಇ ಕಾಮರ್ಸ್ ಉದ್ಯಮದಲ್ಲಿ ಇತರೆ ವಿದೇಶಿ ಕಂಪನಿಗಳೇ ಅಧಿಪತ್ಯ ಸಾಧಿಸುತ್ತಿದೆ. ಹೀಗಿರುವಾಗ ಇವುಗಳ ಮಧ್ಯೆ ಭಾರತದ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡಲಿದೆ.
ಭಾರತದ ಪ್ರಸಿದ್ಧ ಬೃಹತ್ ಇ-ಕಾಮರ್ಸ್ ತಾಣವಾದ ಅಮೆಜಾನ್, ಫ್ಲಿಪ್ಕಾರ್ಟ್, ಜಿಯೋ ಸೇರಿದಂತೆ ಕೆಲವು ಕಂಪನಿಗಳಿಗೆ ಇದೀಗ ನಡುಕ ಶುರುವಾಗಿದೆ. ಯಾಕೆಂದರೆ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡಲಿದೆ.
1 / 5
Tata Neu ಅಪ್ಲಿಕೇಷನ್ ನಲ್ಲಿ ದಿನಸಿ ಸಾಮಾನುಗಳಿಂದ ಹಿಡಿದು ಗ್ಯಾಜೆಟ್ ಗಳವರೆಗೆ ಎಲ್ಲವೂ ಇದೆ. ವಿಶೇಷ ಕೊಡುಗೆಗಳು, ಪ್ರಯೋಜನಗಳು ಮತ್ತು ಸವಲತ್ತುಗಳೊಂದಿಗೆ Tata Neuನ ಲಾಭದಾಯಕ ಜಗತ್ತನ್ನು ಅನುಭವಿಸಿ ಎಂದು ಕಂಪನಿ ಹೇಳಿದೆ.