AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​, ಪ್ರಶಾಂತ್​ ಅವರನ್ನು ಸಂದರ್ಶನ ಮಾಡಿದ ಬಾಲಿವುಡ್​ ಸ್ಟಾರ್​ ನಟ; ಇಲ್ಲಿದೆ ವಿಡಿಯೋ

ಯಶ್ ಅವರು ‘ಕೆಜಿಎಫ್​ 2’ ತಂಡದ ಜತೆಗೆ ದೆಹಲಿಗೆ ತೆರಳಿದ್ದರು. ಅಲ್ಲಿ ಸಿನಿಮಾ ಪ್ರಚಾರ ಮಾಡಲಾಗಿತ್ತು. ಆದರೆ, ಯಶ್​ ಜತೆ ಪ್ರಶಾಂತ್​ ನೀಲ್ ಅವರು ಕಾಣಿಸಿಕೊಂಡಿರಲಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ.

ಯಶ್​, ಪ್ರಶಾಂತ್​ ಅವರನ್ನು ಸಂದರ್ಶನ ಮಾಡಿದ ಬಾಲಿವುಡ್​ ಸ್ಟಾರ್​ ನಟ; ಇಲ್ಲಿದೆ ವಿಡಿಯೋ
ಪ್ರಶಾಂತ್​, ಯಶ್​, ಫರ್ಹಾನ್
TV9 Web
| Edited By: |

Updated on:Apr 09, 2022 | 8:20 PM

Share

‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ (KGF Chapter 2 Movie) ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಹಿಂದಿಯಲ್ಲಿ ಈ ಸಿನಿಮಾಗೆ ದೊಡ್ಡ ಮಾರುಕಟ್ಟೆ ಸಿಕ್ಕಿದೆ. ಈ ಕಾರಣಕ್ಕೆ ಆ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಯಶ್ ಅವರು ನಾನಾ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈಗ ಯಶ್​ ಹಾಗೂ ಪ್ರಶಾಂತ್​ ನೀಲ್ (Praashanth Neel)​ ಅವರನ್ನು ಬಾಲಿವುಡ್​ನ ಸ್ಟಾರ್ ನಟ ಫರ್ಹಾನ್​ ಅಖ್ತರ್ ಅವರು ಸಂದರ್ಶನ ಮಾಡಿದ್ದಾರೆ. ಈ ವಿಡಿಯೋವನ್ನು ‘ಹೊಂಬಾಳೆ ಫಿಲ್ಮ್ಸ್​’ನ (Hombale Films) ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾಗಿದ್ದು, ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ.

ಇತ್ತೀಚೆಗೆ ಯಶ್ ಅವರು ‘ಕೆಜಿಎಫ್​ 2’ ತಂಡದ ಜತೆಗೆ ದೆಹಲಿಗೆ ತೆರಳಿದ್ದರು. ಅಲ್ಲಿ ಸಿನಿಮಾ ಪ್ರಚಾರ ಮಾಡಲಾಗಿತ್ತು. ಆದರೆ, ಯಶ್​ ಜತೆ ಪ್ರಶಾಂತ್​ ನೀಲ್ ಅವರು ಕಾಣಿಸಿಕೊಂಡಿರಲಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಯಶ್ ಅವರು ಸಂದರ್ಶನದಲ್ಲಿ ಈ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಪ್ರಶಾಂತ್​ ನೀಲ್​ ಅವರು ಪರ್ಫೆಕ್ಷನ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ‘ಕೆಜಿಎಫ್​ 2’ ಅಚ್ಚುಕಟ್ಟಾಗಿ ಮೂಡಿಬರಬೇಕು ಎಂಬುದು ಅವರ ಉದ್ದೇಶ. ಈ ಕಾರಣಕ್ಕೆ, ಕೊನೆಯ ಕ್ಷಣದವರೆಗೂ ಅವರು ‘ಕೆಜಿಎಫ್ 2’ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈ ಕಾರಣಕ್ಕೆ ಪ್ರಶಾಂತ್ ನೀಲ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರಲಿಲ್ಲ.

‘ಆರಂಭದಲ್ಲಿ ಇದನ್ನು ಕನ್ನಡ ಸಿನಿಮಾ ಮಾಡಲು ಮಾತ್ರ ಆಲೋಚಿಸಲಾಗಿತ್ತು. ಆದರೆ, ಸ್ಕ್ರಿಪ್ಟ್​ನಲ್ಲಿ ಬರೆದ ರೀತಿಯಲ್ಲೇ ಸಿನಿಮಾ ಮೂಡಿ ಬರಲು ಯಶ್ ಸಹಕಾರಿ ಆದರು. ಈ ಸಿನಿಮಾ ರಿಲೀಸ್​ಗೆ ಬಂದು ನಿಂತಿದೆ. ನಾನು ನನ್ನ ಮಗಳನ್ನು ಮದುವೆ ಮಾಡಿ ಕೊಡುತ್ತಿರುವಂತೆ ಭಾಸವಾಗುತ್ತಿದೆ’ ಎಂದರು ಪ್ರಶಾಂತ್ ನೀಲ್. ಈ ಮೂಲಕ ಸಿನಿಮಾ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸಿದರು.

‘ಗೂಗ್ಲಿ ಸಿನಿಮಾ ನೋಡಿ ಯಶ್ ನಟನೆಯನ್ನು ಮೆಚ್ಚಿಕೊಂಡೆ. ಯಶ್ ಅವರು ನನ್ನ ನಿರ್ದೇಶನದ ‘ಉಗ್ರಂ’ ಸಿನಿಮಾ ನೋಡಿದ್ದರು. ನಾನು ನನ್ನ ನಿರ್ಮಾಪಕರಿಗೆ ‘ಕೆಜಿಎಫ್​’ ಚಿತ್ರದ ಒಂದು ದೃಶ್ಯವನ್ನು ಮಾತ್ರ ವಿವರಿಸಿದ್ದೆ. ನಿರ್ಮಾಪಕರಿಗೆ ಇಷ್ಟವಾಯ್ತು. ಅವರಿಗೆ ನಾನು ಕಥೆಯನ್ನು ವಿವರಿಸಿರಲಿಲ್ಲ. ಈ ಚಿತ್ರದಲ್ಲಿ ಯಾರು ನಟಿಸಬೇಕು ಎನ್ನುವ ಚರ್ಚೆ ಬಂದಾಗ ಮೊದಲ ಹೆಸರು ಬಂದಿದ್ದು ಯಶ್​ ಅವರದ್ದು’ ಎಂದಿದ್ದಾರೆ ಪ್ರಶಾಂತ್ ನೀಲ್.

ಇದನ್ನೂ ಓದಿ:  ‘ಕೆಜಿಎಫ್​ 2’ ಹಾಗೂ ‘ಬೀಸ್ಟ್​’ ಚಿತ್ರಗಳಿಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಇಲ್ಲಿದೆ ವಿವರ

ಭಾನುವಾರದಿಂದ ಕರ್ನಾಟಕದಲ್ಲಿ ‘ಕೆಜಿಎಫ್​ ಚಾಪ್ಟರ್ 2’ ಟಿಕೆಟ್ ಬುಕಿಂಗ್​ ಓಪನ್​; ಎಷ್ಟು ಗಂಟೆಗೆ ಶೋ ಶುರು?

Published On - 8:11 pm, Sat, 9 April 22

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ