ಭಾನುವಾರದಿಂದ ಕರ್ನಾಟಕದಲ್ಲಿ ‘ಕೆಜಿಎಫ್​ ಚಾಪ್ಟರ್ 2’ ಟಿಕೆಟ್ ಬುಕಿಂಗ್​ ಓಪನ್​; ಎಷ್ಟು ಗಂಟೆಗೆ ಶೋ ಶುರು?

‘ಕೆಜಿಎಫ್​: ಚಾಪ್ಟರ್​ 2’ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಚಿತ್ರರಂಗದಿಂದ ಸಿನಿಮಾಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ.

ಭಾನುವಾರದಿಂದ ಕರ್ನಾಟಕದಲ್ಲಿ ‘ಕೆಜಿಎಫ್​ ಚಾಪ್ಟರ್ 2’ ಟಿಕೆಟ್ ಬುಕಿಂಗ್​ ಓಪನ್​; ಎಷ್ಟು ಗಂಟೆಗೆ ಶೋ ಶುರು?
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 09, 2022 | 5:13 PM

‘ಕೆಜಿಎಫ್ ಚಾಪ್ಟರ್​ 2’ (KGF Chapter 2) ತೆರೆಗೆ ಬರೋಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಚಿತ್ರ ಸೃಷ್ಟಿ ಮಾಡಿರುವ ಹೈಪ್​ ನೋಡಿದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯುವ ಲಕ್ಷಣ ಗೋಚರವಾಗಿದೆ. ‘ಕೆಜಿಎಫ್​: ಚಾಪ್ಟರ್​ 1’ ಕೂಡ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಎರಡನೇ ಚಾಪ್ಟರ್​ ತೆರೆಗೆ ಬರುತ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಭಾನುವಾರದಿಂದ (ಮಾರ್ಚ್​ 10) ಕರ್ನಾಟಕದಲ್ಲಿ ಆನ್​ಲೈನ್​ ಟಿಕೆಟ್​ ಬುಕಿಂಗ್ (KGF 2 Ticket Boking) ಆರಂಭವಾಗಲಿದೆ. ಅಭಿಮಾನಿಗಳು ಸಿನಿಮಾ ಟಿಕೆಟ್ ಕಾಯ್ದಿರಿಸೋಕೆ ಕಾದು ಕೂತಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಚಿತ್ರರಂಗದಿಂದ ಸಿನಿಮಾಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಚಿತ್ರತಂಡದವರು ಹಿಂದಿಯಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ಬಾಲಿವುಡ್​ ಅಂಗಳದಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ.

ಈಗಾಗಲೇ ಮುಂಬೈ, ಕೊಚ್ಚಿ, ಚೆನ್ನೈ ಮೊದಲಾದ ಕಡೆಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಟಿಕೆಟ್​ ಬುಕಿಂಗ್​ ಓಪನ್ ಆಗಿದೆ. ಚೆನ್ನೈನಲ್ಲಿ ತಮಿಳು ಹಾಗೂ ಹಿಂದಿ ವರ್ಷನ್​ ಟಿಕೆಟ್​ಗಳನ್ನು ಬುಕ್ ಮಾಡಬಹುದು. ಅದೇ ರೀತಿ ಕೇರಳದ ಕೊಚ್ಚಿಯಲ್ಲಿ, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದ್ದು, ಟಿಕೆಟ್​ ಬುಕಿಂಗ್ ಓಪನ್ ಆಗಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಕೂಡ ಟಿಕೆಟ್​ ಬುಕಿಂಗ್​ಗೆ ಅವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ಭಾನುವಾರದಿಂದ ಬುಕಿಂಗ್ ಓಪನ್ ಆಗಲಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೂ ಟಿಕೆಟ್ ಕಾಯ್ದಿರಿಸಲು ಸದ್ಯಕ್ಕೆ ಅವಕಾಶ ನೀಡಿಲ್ಲ. ಈ ಎರಡೂ ರಾಜ್ಯಗಳಲ್ಲಿ ಭಾನುವಾರದಿಂದ ಟಿಕೆಟ್​ ಬುಕಿಂಗ್​ ಓಪನ್ ಆಗುವ ಸಾಧ್ಯತೆ ಇದೆ. ‘ಆರ್​ಆರ್​ಆರ್’ ಸಿನಿಮಾ ಮಧ್ಯ ರಾತ್ರಿಯಿಂದಲೇ ಪ್ರದರ್ಶನ ಕಂಡಿತ್ತು. ‘ಕೆಜಿಎಫ್​ 2’ಗೂ ಇದೇ ರೀತಿಯಲ್ಲಿ ಅವಕಾಶ ನೀಡಲಾಗುತ್ತದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಮೊದಲ ದಿನ ಈ ಚಿತ್ರ ದೊಡ್ಡ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಹೀಗಾಗಿ, ಮಧ್ಯರಾತ್ರಿಯಿಂದ ಅಲ್ಲದಿದ್ದರೂ ಮುಂಜಾನೆಯಿಂದ ಫ್ಯಾನ್ಸ್ ಶೋ ಏರ್ಪಡಿಸಲಾಗುತ್ತದೆ ಎನ್ನುತ್ತಿವೆ ಮೂಲಗಳು. ಇದಕ್ಕೆ ನಾಳೆ ಉತ್ತರ ಸಿಗುವ ಸಾಧ್ಯತೆ ಇದೆ.

ಹಿಂದಿ ವರ್ಷನ್​ಗೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟಿಕೆಟ್ ಬುಕಿಂಗ್ ಓಪನ್ ಆದ 12 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಬುಕ್ ಆದ ಬಗ್ಗೆ ವರದಿ ಆಗಿದೆ. ಬಾಲಿವುಡ್​ನ ಸಂಜಯ್​ ದತ್ ಹಾಗೂ ರವೀನಾ ಟಂಡನ್ ಚಿತ್ರದಲ್ಲಿ ನಟಿಸಿದ್ದು ಚಿತ್ರದ ತೂಕ ಹೆಚ್ಚಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ಹಾಗೂ ‘ಬೀಸ್ಟ್​’ ಚಿತ್ರಗಳಿಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಇಲ್ಲಿದೆ ವಿವರ

‘ಪಾರ್ಟ್​ 2’ ಸದ್ಯಕ್ಕಂತೂ ಅಸಂಭವದ ಮಾತು; ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್ ಮಾತು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ