‘ಪಾರ್ಟ್ 2’ ಸದ್ಯಕ್ಕಂತೂ ಅಸಂಭವದ ಮಾತು; ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ ಮಾತು
‘ಸಲಾರ್’ ಕಥೆಯನ್ನು ತುಂಬಾನೇ ವಿಸ್ತೃತವಾಗಿ ಹೇಳುವ ಅವಶ್ಯಕತೆ ಇದೆ. ಹೀಗಾಗಿ, ಒಂದೇ ಪಾರ್ಟ್ನಲ್ಲಿ ಎಲ್ಲವನ್ನೂ ತುರುಕುವ ಬದಲು, ಎರಡು ಪಾರ್ಟ್ಗಳಲ್ಲಿ ಸಿನಿಮಾ ತೆರೆಗೆ ತರಲು ಚಿಂತನೆ ನಡೆದಿದೆ ಎನ್ನುವ ಮಾತು ಈ ಮೊದಲು ಕೇಳಿ ಬಂದಿತ್ತು.
ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳು ಎರಡು ಪಾರ್ಟ್ನಲ್ಲಿ ತೆರೆಕಾಣುತ್ತಿವೆ. ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಬಾಹುಬಲಿ’ (Bahubali) ಚಿತ್ರ ಎರಡು ಪಾರ್ಟ್ನಲ್ಲಿ ಬಿಡುಗಡೆ ಆದ ನಂತರದಲ್ಲಿ ಈ ಟ್ರೆಂಡ್ ಜೋರಾಗಿದೆ. ಕನ್ನಡದ ‘ಕೆಜಿಎಫ್’ ಸಿನಿಮಾ (KGF Chapter 2) ಎರಡು ಪಾರ್ಟ್ಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಕೂಡ ಇದೇ ಹಾಡಿ ಹಿಡಿದಿದೆ. ಖ್ಯಾತ ನಟ ಪ್ರಭಾಸ್ ಹಾಗೂ ಜನಪ್ರಿಯ ನಿರ್ದೇಶಕ ಪ್ರಶಾಂತ್ ನೀಲ್ ಒಟ್ಟಾಗಿ ಕೆಲಸ ಮಾಡುತ್ತಿರುವ ‘ಸಲಾರ್’ ಸಿನಿಮಾ ಕೂಡ ಎರಡು ಪಾರ್ಟ್ಗಳಲ್ಲಿ ಬರಲಿದೆ ಎಂಬ ಸುದ್ದಿ ಜೋರಾಗಿತ್ತು. ಇದಕ್ಕೆ ಪ್ರಶಾಂತ್ ನೀಲ್ ಉತ್ತರಿಸಿದ್ದಾರೆ.
‘ಬಾಹುಬಲಿ’ ಸರಣಿ ಒಪ್ಪಿಕೊಂಡ ಬಳಿಕ ಪ್ರಭಾಸ್ ಖ್ಯಾತಿ ಹೆಚ್ಚಿದೆ ನಿಜ. ಆದರೆ, ಇತ್ತೀಚೆಗೆ ಅವರ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ. 2-3 ವರ್ಷಕ್ಕೆ ಅವರ ನಟನೆಯ ಒಂದು ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ, ಅವರು ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ‘ಸಲಾರ್’ ಸಿನಿಮಾ ಕೂಡ ಒಂದು. ಈ ಚಿತ್ರ ಎರಡು ಪಾರ್ಟ್ಗಳಲ್ಲಿ ಬರಲಿದೆ ಎನ್ನಲಾಗಿತ್ತು. ಇದಕ್ಕೆ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ.
‘ಕೆಜಿಎಫ್: ಚಾಪ್ಟರ್ 2’ ವಿಶ್ವಾದ್ಯಂತ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಸದ್ಯ, ಚಿತ್ರತಂಡ ಅದ್ದೂರಿಯಾಗಿಯೇ ಪ್ರಮೋಷನ್ ಮಾಡುತ್ತಿದೆ. ಈ ವೇಳೆ ಪ್ರಶಾಂತ್ ನೀಲ್ ಅವರಿಗೆ ‘ಸಲಾರ್’ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿವೆ. ‘ಸಲಾರ್’ ಎರಡು ಪಾರ್ಟ್ಗಳಲ್ಲಿ ಬರಲಿದೆಯೇ ಎಂದು ಕೇಳಲಾಯಿತು. ಇದಕ್ಕೆ ಸದ್ಯಕ್ಕಂತೂ ಆಲೋಚನೆ ಇಲ್ಲ ಎನ್ನುವ ಉತ್ತರ ಬಂತು.
‘ಸದ್ಯಕ್ಕಂತೂ ‘ಸಲಾರ್ 2’ ಅನ್ನೋದು ಅಸಂಭವದ ಮಾತು. ಹೆಚ್ಚು ಹಣ ಗಳಿಸಬೇಕು ಎನ್ನುವ ಉದ್ದೇಶದಿಂದ ನಾನು ಕಥೆಯನ್ನು ದುರ್ಬಲಗೊಳಿಸುವುದಿಲ್ಲ. ನಿಜ ಹೇಳಬೇಕೆಂದರೆ ಇನ್ನೂ ಆ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ. ನಾನು ಪ್ರಭಾಸ್ ಅವರ ಜತೆ ಈ ಬಗ್ಗೆ ಚರ್ಚೆ ಮಾಡ್ತೇನೆ. ಅವರೂ ಒಪ್ಪಿದರೆ ಮುಂದುವರಿಯುತ್ತೇವೆ. ಸದ್ಯಕ್ಕೆ ನಾವು ‘ಸಲಾರ್ 2’ ಬಗ್ಗೆ ಒಂದೇ ಒಂದು ದಿನವೂ ಚರ್ಚಿಸಿಲ್ಲ’ ಎಂದಿದ್ದಾರೆ ಪ್ರಶಾಂತ್ ನೀಲ್.
‘ಸಲಾರ್’ ಕಥೆಯನ್ನು ತುಂಬಾನೇ ವಿಸ್ತೃತವಾಗಿ ಹೇಳುವ ಅವಶ್ಯಕತೆ ಇದೆ. ಹೀಗಾಗಿ, ಒಂದೇ ಪಾರ್ಟ್ನಲ್ಲಿ ಎಲ್ಲವನ್ನೂ ತುರುಕುವ ಬದಲು, ಎರಡು ಪಾರ್ಟ್ಗಳಲ್ಲಿ ಸಿನಿಮಾ ತೆರೆಗೆ ತರಲು ಚಿಂತನೆ ನಡೆದಿದೆ ಎನ್ನುವ ಮಾತು ಈ ಮೊದಲು ಕೇಳಿ ಬಂದಿತ್ತು.
ಇದನ್ನೂ ಓದಿ: Shruti Haasan: ‘ಸಲಾರ್’ ಬೆಡಗಿ ಶೃತಿ ಹಾಸನ್ ತೆಕ್ಕೆಗೆ ಹೊಸ ಚಿತ್ರ; ನಟಿಯ ಬತ್ತಳಿಕೆಯಲ್ಲಿ ಈಗ ಇರುವ ಚಿತ್ರಗಳೆಷ್ಟು?
‘ಉಗ್ರಂ’ ಮತ್ತು ‘ಸಲಾರ್’ ಕಥೆ ನಡುವೆ ಹೋಲಿಕೆ; ಎಲ್ಲ ಅನುಮಾನಗಳಿಗೆ ತೆರೆ ಎಳೆದ ಪ್ರಶಾಂತ್ ನೀಲ್