AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಗಂಡನ ಫ್ಯಾಮಿಲಿ ಕಡೆಗೆ ಮತ್ತೆ ಒಲವು ತೋರಿದ ಸಮಂತಾ; ಏನಿದು ಹೊಸ ಸಮಾಚಾರ?

ಅಕ್ಕಿನೇನಿ ಫ್ಯಾಮಿಲಿ ಸದಸ್ಯರ ಕಡೆಗೆ ಸಮಂತಾ ಒಲವು ತೋರಿಸುತ್ತಿದ್ದಾರೆ. ನಾಗ ಚೈತನ್ಯ ಅವರ ಕಿರಿಯ ಸಹೋದರ ಅಕ್ಕಿನೇನಿ ಅಖಿಲ್​ಗೆ ಅವರು ವಿಶ್​ ಮಾಡಿದ್ದಾರೆ.​

ಮಾಜಿ ಗಂಡನ ಫ್ಯಾಮಿಲಿ ಕಡೆಗೆ ಮತ್ತೆ ಒಲವು ತೋರಿದ ಸಮಂತಾ; ಏನಿದು ಹೊಸ ಸಮಾಚಾರ?
ಸಮಂತಾ
TV9 Web
| Edited By: |

Updated on: Apr 09, 2022 | 12:07 PM

Share

ನಟಿ ಸಮಂತಾ (Samantha) ಅವರು ಅಕ್ಕಿನೇನಿ ಕುಟುಂಬದಿಂದ ಹೊರಬಂದು ಬಹಳ ದಿನಗಳೇ ಕಳೆದಿವೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ ಬಳಿಕ ಸಿಂಗಲ್​ ಆಗಿ ಬದುಕು ಸಾಗಿಸುತ್ತಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆ ಆಗಿ, ನಾಲ್ಕು ವರ್ಷಗಳ ಕಾಲ ಯಾವುದೇ ಕಿರಿಕ್​ ಇಲ್ಲದೇ ಸಂಸಾರ ನಡೆಸಿದ ಈ ಜೋಡಿ ಏಕಾಏಕಿ ವಿಚ್ಛೇದನ ಪಡೆಯಬಹುದು ಎಂದು ಯಾರೂ ಊಹಿಸಿರಲಿಲ್ಲ. ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ಡಿವೋರ್ಸ್​ ಪಡೆಯಲು ಕಾರಣ ಏನು ಎಂಬುದು ಈವರೆಗೂ ತಿಳಿದುಬಂದಿಲ್ಲ. ಮಾಜಿ ಪತಿಗೆ ಸಂಬಂಧಿಸಿದ ಎಲ್ಲ ಪೋಸ್ಟ್​ಗಳನ್ನು ಕೂಡ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಿಂದ ಡಿಲೀಟ್​ ಮಾಡಿರುವ ಸಮಂತಾ ಅವರು ಅಕ್ಕಿನೇನಿ ಕುಟುಂಬದಿಂದ ಪೂರ್ತಿ ಸಂಪರ್ಕ ಕಡಿದುಕೊಂಡಿದ್ದರು. ಆದರೆ ಈಗ ಅವರೇಕೋ ಮತ್ತೆ ಆ ಫ್ಯಾಮಿಲಿ ಸದಸ್ಯರ ಕಡೆಗೆ ಒಲವು ತೋರಿಸುತ್ತಿದ್ದಾರೆ. ನಾಗ ಚೈತನ್ಯ ಅವರ ಕಿರಿಯ ಸಹೋದರ ಅಕ್ಕಿನೇನಿ ಅಖಿಲ್​ (Akhil Akkineni) ಅವರಿಗೆ ಏ.8ರಂದು ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಸಮಂತಾ ಅವರು ವಿಶೇಷವಾಗಿ ಶುಭ ಹಾರೈಸಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ.

‘ಹ್ಯಾಪಿ ಬರ್ತ್​ಡೇ ಅಖಿಲ್​ ಅಕ್ಕಿನೇನಿ. ಈ ವರ್ಷ ನಿಮಗೆ ಅತ್ಯುತ್ತಮವಾಗಿರಲಿ ಅಂತ ಹಾರೈಸುತ್ತೇನೆ. ನೀವು ಬಯಸಿದ್ದೆಲ್ಲವೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ದೇವರು ಒಳ್ಳೆಯದು ಮಾಡಲಿ’ ಎಂದು ಸಮಂತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ. ಕೆಲವೇ ದಿನಗಳ ಹಿಂದೆ ಸಮಂತಾ ಅವರು ‘ಮಜಿಲಿ’ ಸಿನಿಮಾದ ಪೋಸ್ಟರ್​ ಅನ್ನು ಇದೇ ರೀತಿ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ಮಾಜಿ ಪತಿ ನಾಗ ಚೈತನ್ಯ ಫೋಟೋ ಹೈಲೈಟ್​ ಆಗಿತ್ತು. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಅಕ್ಕಿನೇನಿ ಕುಟುಂಬದ ಕಡೆಗೆ ಸಮಂತಾ ಒಲವು ತೋರಿಸುತ್ತಿರುವುದು ಅಭಿಮಾನಿಗಳ ಅನುಮಾನಕ್ಕೆ ಕಾರಣ ಆಗಿದೆ.

ವಿಚ್ಛೇದನ ಪಡೆದ ನಂತರ ಒಂದಷ್ಟು ದಿನಗಳು ಕಳೆದ ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ನಾಗ ಚೈತನ್ಯ ಅವರನ್ನು ಸಮಂತಾ ಅನ್​ಫಾಲೋ ಮಾಡಿದರು. ಅದು ಅವರ ವೈಯಕ್ತಿಕ ನಿರ್ಧಾರ. ಆದರೆ ಸಿನಿಮಾ ವಿಚಾರದಲ್ಲಿ ಅವರು ಬೇರೆಯದೇ ನಿಲುವು ಹೊಂದಿದ್ದಾರೆ. ‘ಮಜಿಲಿ’ ಚಿತ್ರಕ್ಕೆ 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರು ಪೋಸ್ಟರ್​ ಶೇರ್​ ಮಾಡಿಕೊಂಡಿದ್ದರು.  2019ರ ಏ.5ರಂದು ‘ಮಜಿಲಿ’ ಸಿನಿಮಾ ತೆರೆಕಂಡಿತ್ತು. ನಾಗ ಚೈತನ್ಯ ಮತ್ತು ಸಮಂತಾ ಅವರು ಜೋಡಿಯಾಗಿ ನಟಿಸಿದ್ದ 4ನೇ ಚಿತ್ರ ಅದಾಗಿತ್ತು. ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆ ಪಡೆಯುವುದರ ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಹಾಗಾಗಿ ಸಮಂತಾ ಪಾಲಿಗೆ ‘ಮಜಿಲಿ’ ಚಿತ್ರ ಸ್ಪೆಷಲ್. ‘ಯೇ ಮಾಯ ಚೇಸಾವೆ’, ‘ಮನಂ’, ‘ಆಟೋನಗರ್​ ಸೂರ್ಯ’ ಮತ್ತು ‘ಮಜಿಲಿ’ ಸಿನಿಮಾಗಳಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಸಮಂತಾ ಅವರಿಗೆ ಸಖತ್​ ಡಿಮ್ಯಾಂಡ್​​ ಇದೆ. ಹಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ವಿಘ್ನೇಶ್​ ಶಿವನ್​ ನಿರ್ದೇಶನ ಮಾಡುತ್ತಿರುವ ‘ಕಾದು ವಾಕುಲ ರೆಂಡು ಕಾದಲ್​’ ಚಿತ್ರದಲ್ಲಿ ಸಮಂತಾ ಮುಖ್ಯಪಾತ್ರ ಮಾಡಿದ್ದಾರೆ. ಇತ್ತೀಚೆಗಷ್ಟೇ ಅದರ ಶೂಟಿಂಗ್ ಮುಗಿಸಲಾಗಿದೆ. ‘ಶಾಕುಂತಲಂ’, ‘ಯಶೋಧ’ ಇತ್ಯಾದಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಇಂಗ್ಲಿಷ್​ ನಿರ್ದೇಶಕ ಫಿಲಿಪ್​​ ಜಾನ್​ ಅವರ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಚಿತ್ರದಲ್ಲೂ ಸಮಂತಾ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ವಿಚ್ಛೇದನದ ಬಳಿಕ ಅವರ ವೃತ್ತಿಜೀವನ ಸೂಪರ್ ಆಗಿದೆ.

ಇದನ್ನೂ ಓದಿ:

ಸಮಂತಾಗೆ ಡ್ಯಾನ್ಸ್​ ಸ್ಟೆಪ್​ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಪಡ್ಡೆಗಳ ಕಣ್ಣು ಕುಕ್ಕಿದ ಸಮಂತಾ ಹೊಸ ಅವತಾರ; ಇಲ್ಲಿದೆ ಫೋಟೋ ಗ್ಯಾಲರಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್