ಸಮಂತಾಗೆ ಡ್ಯಾನ್ಸ್​ ಸ್ಟೆಪ್​ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸಮಂತಾಗೆ ಡ್ಯಾನ್ಸ್​  ಸ್ಟೆಪ್​ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಗಣೇಶ್ ಆಚಾರ್ಯ-ಸಮಂತಾ

ಗಣೇಶ್ ಆಚಾರ್ಯ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರಿದೆ. ಸಾಕಷ್ಟು ಹಿಟ್​​ ಹಾಡುಗಳಿಗೆ ಇವರದ್ದೇ ಕೊರಿಯೋಗ್ರಾಫಿ ಇದೆ. ಇವರ ವಿರುದ್ಧ ಕೋ-ಡ್ಯಾನ್ಸರ್​ ಒಬ್ಬರು ಲೈಂಗಿಕ ಕಿರಕುಳ ಆರೋಪ ಮಾಡಿದ್ದರು.

TV9kannada Web Team

| Edited By: Rajesh Duggumane

Apr 01, 2022 | 1:00 PM

‘ಪುಷ್ಪ’ ಸಿನಿಮಾದಲ್ಲಿ (Pushpa Movie) ‘ಹೂ ಅಂತೀಯಾ ಮಾವ’ ಹಾಡು ಸಖತ್ ಹಿಟ್​ ಆಗಿತ್ತು. ಈ ಹಾಡಿನಲ್ಲಿ ಸಮಂತಾ ಹಾಕಿದ ಸ್ಟೆಪ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಈ ಹಾಡಿನಿಂದ ಸಿನಿಮಾದ ಮೈಲೇಜ್ ಕೂಡ ಹೆಚ್ಚಿತ್ತು. ಈ ಹಾಡಿನಿಂದ ಸಮಂತಾ ಅವರ ಜನಪ್ರಿಯತೆ ಕೂಡ ಹೆಚ್ಚಿದೆ. ಈ ಸಾಂಗ್​ಗೆ ನೃತ್ಯ ಸಂಯೋಜನೆ ಮಾಡಿದ್ದು ಗಣೇಶ್ ಆಚಾರ್ಯ (Ganesh Acharya). ಅವರ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಂಬೈ ಪೊಲೀಸರು ಚಾರ್ಜ್​ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ. 2020ರ ಪ್ರಕರಣ ಇದಾಗಿದ್ದು, ಈಗ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ.

ಗಣೇಶ್ ಆಚಾರ್ಯ ವಿರುದ್ಧ ಕೋ-ಡ್ಯಾನ್ಸರ್​ ಒಬ್ಬರು ಲೈಂಗಿಕ ಕಿರಕುಳ ಆರೋಪ ಮಾಡಿದ್ದರು. ‘ಲೈಂಗಿಕವಾಗಿ ಸಹಕರಿಸುವಂತೆ ಗಣೇಶ್ ಕೋರಿದ್ದರು. ಆದರೆ, ಇದನ್ನು ನಿರಾಕರಿಸಿದೆ. ಯಶಸ್ಸು ಬೇಕಾದರೆ ಮಂಚ ಏರಲು ಹೇಳಿದ್ದರು. ನಾನು ಅದನ್ನು ನಿರಾಕರಿಸುತ್ತಲೇ ಬಂದೆ. ಇದರಿಂದ ಭಾರತೀಯ ಸಿನಿಮಾ ಮತ್ತು ದೂರದರ್ಶನ ನೃತ್ಯ ನಿರ್ದೇಶಕರ ಸಂಘದಿಂದ ನಾನು ಸದಸ್ಯತ್ವ ಕಳೆದುಕೊಂಡೆ. ನಾನು ನಿರಂತರವಾಗಿ ಕಿರುಕುಳ ಅನುಭವಿಸಿದ್ದೇನೆ’ ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಸಂಬಂಧ ದೂರು ಕೂಡ ದಾಖಲು ಮಾಡಿದ್ದರು.

ಗಣೇಶ್ ಆಚಾರ್ಯ ಹಾಗೂ ಅವರ ಸಹಾಯಕರೊಬ್ಬರ ವಿರುದ್ಧ ಸೆಕ್ಷನ್ 35- (ಲೈಂಗಿಕ ಕುರುಕುಳ), 354-ಡಿ ( ಹಿಂಬಾಲಿಸುವುದು), 323 (ನೋವು ಉಂಟುಮಾಡುವುದು), 504 (ಶಾಂತಿಯನ್ನು ಹಾಳು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಬೆದರಿಕೆ) ಮೊದಲಾದ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಕರಣದಲ್ಲಿ ಚಾರ್ಜ್​​ಶೀಟ್​ ಸಲ್ಲಿಕೆ ಆಗಿದೆ. ಗಣೇಶ್​ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅವರ ವಿರುದ್ಧ ಹಲವು ಮಹಿಳೆಯರು ಇದೇ ರೀತಿಯ ಆರೋಪ ಮಾಡಿದ್ದರು. ಆದರೆ, ಗಣೇಶ್​ ಅವರ ಲೀಗಲ್ ಟೀಂ ಇದಕ್ಕೆ ಉತ್ತರಿಸೋಕೆ ನಿರಾಕರಿಸಿದೆ.

ಗಣೇಶ್ ಆಚಾರ್ಯ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರಿದೆ. ಸಾಕಷ್ಟು ಹಿಟ್​​ ಹಾಡುಗಳಿಗೆ ಇವರದ್ದೇ ಕೊರಿಯೋಗ್ರಾಫಿ ಇದೆ. ‘ಪುಷ್ಪ’, ‘ಪೈಲ್ವಾನ್​’, ‘ಸಿಂಬಾ’ ಸೇರಿ ನೂರಾರು ಸಿನಿಮಾದ ಹಾಡುಗಳಿಗೆ ಇವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಇನ್ನು, ನಟನಾಗಿ, ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಅವರಿಗೆ ಇದೆ.

ಇದನ್ನೂ ಓದಿ: Sunny Leone: ಸನ್ನಿ ಲಿಯೋನ್ ಹೊಸ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ?; ನೆಟ್ಟಿಗರ ತೀವ್ರ ವಿರೋಧ

‘ಪುಷ್ಪ’ ಚಿತ್ರದಲ್ಲಿ ನಟಿ ಸಮಂತಾಗೆ ಐಟಂ ಡ್ಯಾನ್ಸ್​ ಹೇಳಿಕೊಡಲು ಬಂದ​ ಗಣೇಶ್​ ಆಚಾರ್ಯ

Follow us on

Related Stories

Most Read Stories

Click on your DTH Provider to Add TV9 Kannada