AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gagana Nee Song: ತೂಫಾನ್ ಬಳಿಕ ತಂಗಾಳಿ! ಇದು ಎಲ್ಲಾ ಅಮ್ಮಂದಿರ ಧ್ವನಿ ಎಂದ ಚಿತ್ರತಂಡ; ಏನಿದು ಹೊಸ ಅಪ್ಡೇಟ್?

KGF Chapter 2 Song, Gagana Nee: ಕೆಜಿಎಫ್ ತಂಡ ಹೊಸ ಅಪ್ಡೇಟ್ ನೀಡಿದೆ. ಚಿತ್ರದ ಮತ್ತೊಂದು ಹಾಡು ಇಂದು (ಏಪ್ರಿಲ್​ 6) ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಿದೆ. ಗಗನ ನೀ ಎಂಬ ಹಾಡನ್ನು ವಾಯ್ಸ್ ಆಫ್ ಎವರಿ ಮದರ್ ಎಂದು ಬಣ್ಣಿಸಲಾಗಿದೆ.

Gagana Nee Song: ತೂಫಾನ್ ಬಳಿಕ ತಂಗಾಳಿ! ಇದು ಎಲ್ಲಾ ಅಮ್ಮಂದಿರ ಧ್ವನಿ ಎಂದ ಚಿತ್ರತಂಡ; ಏನಿದು ಹೊಸ ಅಪ್ಡೇಟ್?
KGF Chapter 2
TV9 Web
| Edited By: |

Updated on:Apr 06, 2022 | 1:20 PM

Share

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ ಇದೇ ತಿಂಗಳ 14ನೇ ತಾರೀಖಿನಂದು ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಭಾರತಾದ್ಯಂತ ಧೂಳೆಬ್ಬಿಸಿರುವುದು ಗೊತ್ತೇ ಇದೆ. ಅದಕ್ಕೂ ಮೊದಲು ಟೀಸರ್ ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದು ಅಭಿಮಾನಿಗಳ ಹುಚ್ಚೆಬ್ಬಿಸಿತ್ತು. ಹೀಗೆ ಒಂದರ ಮೇಲೆ ಒಂದರಂತೆ ದಾಖಲೆ ಬರೆಯುತ್ತಿರುವ ಕೆಜಿಎಫ್ ಬಗ್ಗೆ ಜನರು ಇನ್ನಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ, ಇಂದು (ಏಪ್ರಿಲ್ 6) ಕೆಜಿಎಫ್ ತಂಡ ಹೊಸ ಅಪ್ಡೇಟ್ ನೀಡಿದೆ. ಚಿತ್ರದ ಮತ್ತೊಂದು ಹಾಡು ಇಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಿದೆ. ಗಗನ ನೀ (Gagana Nee) ಎಂಬ ಹಾಡನ್ನು ವಾಯ್ಸ್ ಆಫ್ ಎವರಿ ಮದರ್ ಎಂದು ಬಣ್ಣಿಸಲಾಗಿದೆ.

ಕೆಜಿಎಫ್ ತೂಫಾನ್ ಬಳಿಕ ತಂಗಾಳಿಯೊಂದು ಬೀಸಲಿದೆ! ಹೌದು. ಕೆಜಿಎಫ್ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಬುಧವಾರ ಮಧ್ಯಾಹ್ನ 1 ಗಂಟೆಗೆ ತೆರೆ ಕಂಡಿದೆ. ನಾಲ್ಕು ಭಾಷೆಗಳಲ್ಲಿ ಈ ಹಾಡು ಬಿಡುಗಡೆ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿರುವ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನಿಡಿದೆ. ಕೆಜಿಎಫ್ ಚಾಪ್ಟರ್ 1 ರಲ್ಲೂ ಕೂಡ ತಾಯಿ ಸೆಂಟಿಮೆಂಟ್ ಬಹಳ ಮುಖ್ಯ ವಿಷಯವೇ ಆಗಿತ್ತು. ಇದೀಗ ಚಾಪ್ಟರ್ 2ರಲ್ಲೂ ಮದರ್ ಸೆಂಟಿಮೆಂಟ್ ಇರುವ ಹಾಡು ನಿರೀಕ್ಷೆ ಹೆಚ್ಚಿಸಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಮೇಲೆ ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕೆಜಿಎಫ್ ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಖ್ಯಾತ ಚಿತ್ರಗಳು ಮಾಡದ ಸಾಧನೆಯನ್ನೂ ‘ಕೆಜಿಎಫ್ 2’ ಬರೆಯುತ್ತಿದೆ. ಹೌದು, ಇದಕ್ಕೆ ಒಂದು ಉದಾಹರಣೆಯೆಂದರೆ ಚಿತ್ರವು ಗ್ರೀಸ್​ನಲ್ಲಿ ರಿಲೀಸ್ ಆಗಿರುವುದು.

ಯುರೋಪ್, ಅಮೇರಿಕಾ, ರಷ್ಯಾ ಸೇರಿದಂತೆ ವಿಶ್ವದ ಹಲವು ಪ್ರದೇಶಗಳಲ್ಲಿ ‘ಕೆಜಿಎಫ್ 2’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಎಲ್ಲೆಡೆ ಕನ್ನಡ ಸೇರಿದಂತೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಇದೀಗ ಗ್ರೀಸ್​ನಲ್ಲಿ ರಿಲೀಸ್ ಆಗಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಯನ್ನು ಕೆಜಿಎಫ್ ಬರೆಯಲಿದೆ.

ಈ ಬಗ್ಗೆ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಗ್ರೀಸ್​ನಲ್ಲಿ ಚಿತ್ರ ರಿಲೀಸ್ ಆಗಲಿದೆ. ಹಾಗೆಯೇ ಇಟಲಿಯಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ: ಗ್ರೀಸ್​ನಲ್ಲಿ ತೆರೆಕಾಣಲಿರುವ ಮೊದಲ ದಕ್ಷಿಣ ಭಾರತೀಯ ಚಿತ್ರ ಕೆಜಿಎಫ್ 2; ರಿಲೀಸ್​ಗೂ ಮುನ್ನ ಹಲವು ದಾಖಲೆ ಬರೆದ ಯಶ್​ ಚಿತ್ರ

ಇದನ್ನೂ ಓದಿ: ಫ್ಯಾನ್ಸ್​ ಪ್ರತಿಭೆಗೆ ಎಷ್ಟೊಂದು ಗೌರವ ಕೊಟ್ಟ ‘ಕೆಜಿಎಫ್​: ಚಾಪ್ಟರ್​ 2’ ತಂಡ; ರಾರಾಜಿಸುತ್ತಿವೆ ಪೋಸ್ಟರ್​ಗಳು

Published On - 9:30 pm, Tue, 5 April 22