AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಷನ್ ಥ್ರಿಲ್ಲರ್ ‘ತ್ರಿಕೋನ’ ಮೂಲಕ ಕಂಬ್ಯಾಕ್ ಮಾಡಿದ ಡೈರೆಕ್ಟರ್ ಚಂದ್ರಕಾಂತ್

ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ‘ತ್ರಿಕೋನ’ ಚಿತ್ರ ಟ್ರೇಲರ್ ಮೂಲಕ ಸುದ್ದಿಯಲ್ಲಿದೆ. ಚಿತ್ರದ ತಾರಾಬಳಗವೂ ಚಿತ್ರದ ಮತ್ತೊಂದು ಹೈಲೈಟ್.

ಆಕ್ಷನ್ ಥ್ರಿಲ್ಲರ್ ‘ತ್ರಿಕೋನ’ ಮೂಲಕ ಕಂಬ್ಯಾಕ್ ಮಾಡಿದ ಡೈರೆಕ್ಟರ್ ಚಂದ್ರಕಾಂತ್
TV9 Web
| Edited By: |

Updated on: Apr 05, 2022 | 6:04 PM

Share

ಕೊರೋನಾ ಕಾರಣದಿಂದ ಬಿಡುಗಡೆಯಾಗದೇ ಕಾಯುತ್ತಿದ್ದ ಚಿತ್ರಗಳು ಈಗ ಸಾಲು ಸಾಲಾಗಿ ಬಿಡುಗಡೆ ದಿನಾಂಕ ನಿಕ್ಕಿಯಾಗಿಸಿಕೊಂಡು ಚಿತ್ರಮಂದಿರಕ್ಕೆ ಕಾಲಿಡಲು ತುದಿಗಾಲಿನಲ್ಲಿ ನಿಂತಿವೆ. ಪ್ರೇಕ್ಷಕರ ಪ್ರಭುಗಳಿಗಂತೂ ಹಬ್ಬದ ವಾತಾವರಣ ಚಿತ್ರಮಂದಿರದಲ್ಲಿ ನಿರ್ಮಾಣವಾಗಿದೆ. ಒಂದಕ್ಕಿಂತ ಒಂದು ಡಿಫ್ರೆಂಟ್ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರ ಮನಸೆಳೆಯಲು ಚಿತ್ರತಂಡಗಳು ಸಾಲಗಿ ನಿಂತಿವೆ. ಇವುಗಳಲ್ಲಿ ಮುಂಚೂಣಿಯಲ್ಲಿರುವ ಚಿತ್ರ ‘ತ್ರಿಕೋನ’.

ಆಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ‘ತ್ರಿಕೋನ’ ಚಿತ್ರ ಟ್ರೇಲರ್ ಮೂಲಕ ಸುದ್ದಿಯಲ್ಲಿದೆ. ಚಿತ್ರದ ತಾರಾಬಳಗವೂ ಚಿತ್ರದ ಮತ್ತೊಂದು ಹೈಲೈಟ್. ಅಹಂ, ಶಕ್ತಿ, ತಾಳ್ಮೆ  ಸುತ್ತ ಹೆಣೆದಿರೋ ಕಥಾಹಂದರ ಚಿತ್ರದಲ್ಲಿದ್ದು ಮೂರು ವಯೋಮಾನದವರ ಕಥೆ ಇಲ್ಲಿದೆ. ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನ ಈ ಚಿತ್ರದ ಮೂಲಕ ಹೇಳಹೊರಟಿದೆ ಚಿತ್ರತಂಡ. ಚಂದ್ರಕಾಂತ್ ಚಿತ್ರದ ಸೂತ್ರಧಾರ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜವಾಬ್ದಾರಿ ವಹಿಸಿಕೊಂಡು ನಿರ್ದೇಶನದ ನೊಗವನ್ನು ಹೊತ್ತಿರೋ ಇವರಿಗೆ ಇದು ಎರಡನೇ ಸಿನಿಮಾ. 143 ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಚಂದ್ರಕಾಂತ್ ಬಿಗ್ ಬ್ರೇಕ್ ಬಳಿಕ ಮತ್ತೆ ಆಕ್ಷನ್ ಕಟ್ ಹೇಳಿರುವ ಸಿನಿಮಾವಿದು. ಚಿತ್ರದ ಕಥೆಗೆ ತಕ್ಕಂತೆ ಅನುಭವಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಗಟ್ಟಿಕಥೆಯನ್ನು ಅಷ್ಟೇ ಸೊಗಸಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಚಿತ್ರದ ಕಥೆ ಹಾಗೂ ನಿರ್ಮಾಣದ ರೂವಾರಿ ರಾಜ್ ಶೇಖರ್. ಪೊಲೀಸ್ ಪ್ರಕಿ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಜೂಲಿ ಲಕ್ಷ್ಮಿ, ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸುಧಾರಾಣಿ, ಮಾರುತೇಶ್, ರಾಜ್ ವೀರ್, ಸಾಧುಕೋಕಿಲ ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ. ಸುರೇಂದ್ರನಾಥ್ ಸಂಗೀತ, ಜೀವನ್ ಪ್ರಕಾಶ್ ಸಂಕಲನ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ ಚಿತ್ರಿಕ್ಕಿದೆ. ಸಾಕಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟರ್ ಒಳಗೊಂಡ ತ್ರಿಕೋನ ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ: ಏಪ್ರಿಲ್​ 1ರ ಬದಲು ಏಪ್ರಿಲ್ 8ಕ್ಕೆ ‘ತ್ರಿಕೋನ’ ಸಿನಿಮಾ; ಚಿತ್ರದ ಬಗ್ಗೆ ಸುಚೇಂದ್ರ ಪ್ರಸಾದ್ ಮಾತು

‘ತ್ರಿಕೋನ’ ಚಿತ್ರದಲ್ಲಿ ಪಲ್ಲವಿ ಅನುಪಲ್ಲವಿ ತಾರಾ ಜೋಡಿ