ಗ್ರೀಸ್​ನಲ್ಲಿ ತೆರೆಕಾಣಲಿರುವ ಮೊದಲ ದಕ್ಷಿಣ ಭಾರತೀಯ ಚಿತ್ರ ಕೆಜಿಎಫ್ 2; ರಿಲೀಸ್​ಗೂ ಮುನ್ನ ಹಲವು ದಾಖಲೆ ಬರೆದ ಯಶ್​ ಚಿತ್ರ

ಗ್ರೀಸ್​ನಲ್ಲಿ ತೆರೆಕಾಣಲಿರುವ ಮೊದಲ ದಕ್ಷಿಣ ಭಾರತೀಯ ಚಿತ್ರ ಕೆಜಿಎಫ್ 2; ರಿಲೀಸ್​ಗೂ ಮುನ್ನ ಹಲವು ದಾಖಲೆ ಬರೆದ ಯಶ್​ ಚಿತ್ರ
ಕೆಜಿಎಫ್ 2ನಲ್ಲಿ ಯಶ್

Yash | Sanjay Dutt | KGF 2: ‘ಕೆಜಿಎಫ್ 2’ ಚಿತ್ರವನ್ನು ವಿಶ್ವದ ಹಲವು ಮೂಲೆಗಳಿಗೆ ತಲುಪಿಸಲು ಚಿತ್ರತಂಡ ಪಣತೊಟ್ಟಿದೆ. ಇದೇ ಕಾರಣದಿಂದ ಚಿತ್ರ ರಿಲೀಸ್​ಗೂ ಮೊದಲೇ ಹಲವು ದಾಖಲೆಗಳನ್ನು ಬರೆಯುತ್ತಿದೆ.

TV9kannada Web Team

| Edited By: Apurva Kumar Balegere

Apr 05, 2022 | 11:49 AM

ಯಶ್ ನಟನೆಯ ‘ಕೆಜಿಎಫ್ 2’ (KGF 2) ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಸದ್ಯ ಚಿತ್ರತಂಡ ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ನಾಯಕ ನಟ ಯಶ್ (Yash), ಸಂಜಯ್ ದತ್ (Sanjay Dutt), ರವೀನಾ ಟಂಡನ್ ಮೊದಲಾದವರು ದೆಹಲಿಯಲ್ಲಿ ಪ್ರಚಾರ ಕಾರ್ಯ ನಡೆಸಿದ್ದರು. ಇದೀಗ ಚಿತ್ರತಂಡ ಮುಂಬೈಗೆ ತೆರಳಿದ್ದು, ಅಲ್ಲಿ ಪ್ರಚಾರ ನಡೆಸಲಿದೆ. ಈ ನಡುವೆ ಚಿತ್ರದ ರಿಲೀಸ್ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರವು ಈಗಲೇ ದಾಖಲೆಗಳನ್ನು ಬರೆಯುತ್ತಿದೆ. ದೊಡ್ಡ ಮಟ್ಟದಲ್ಲಿ ಟಿಕೇಟ್​ಗಳು ಸೇಲ್ ಆಗುತ್ತಿದ್ದು, ಚಿತ್ರತಂಡ ಖುಷಿಯಾಗಿದೆ. ವಿಶೇಷವೆಂದರೆ ಈವರೆಗೆ ಕನ್ನಡ ಚಿತ್ರಗಳು ತೆರೆಕಾಣದ ಪ್ರದೇಶಗಳನ್ನು ತಲುಪಲು ‘ಕೆಜಿಎಫ್ 2’ ತಂಡ ಶ್ರಮಿಸುತ್ತಿದ್ದು, ಅದರಲ್ಲಿ ಯಶಸ್ವಿಯೂ ಆಗಿದೆ. ಜತೆಗೆ ಇದು ಕೇವಲ ಕನ್ನಡಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಖ್ಯಾತ ಚಿತ್ರಗಳು ಮಾಡದ ಸಾಧನೆಯನ್ನೂ ‘ಕೆಜಿಎಫ್ 2’ ಬರೆಯುತ್ತಿದೆ. ಹೌದು, ಇದಕ್ಕೆ ಒಂದು ಉದಾಹರಣೆಯೆಂದರೆ ಚಿತ್ರವು ಗ್ರೀಸ್​ನಲ್ಲಿ ರಿಲೀಸ್ ಆಗುತ್ತಿರುವುದು!

ಯುರೋಪ್, ಅಮೇರಿಕಾ, ರಷ್ಯಾ ಸೇರಿದಂತೆ ವಿಶ್ವದ ಹಲವು ಪ್ರದೇಶಗಳಲ್ಲಿ ‘ಕೆಜಿಎಫ್ 2’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವೆಂದರೆ ಎಲ್ಲೆಡೆ ಕನ್ನಡ ಸೇರಿದಂತೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಇದೀಗ ಗ್ರೀಸ್​ನಲ್ಲಿ ರಿಲೀಸ್ ಆಗಲಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಯನ್ನು ಕೆಜಿಎಫ್ ಬರೆಯಲಿದೆ.

ಈ ಬಗ್ಗೆ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಗ್ರೀಸ್​ನಲ್ಲಿ ಚಿತ್ರ ರಿಲೀಸ್ ಆಗಲಿದೆ. ಹಾಗೆಯೇ ಇಟಲಿಯಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಕಾಣಲಿದೆ.

ರಷ್ಯಾದಲ್ಲಿ ರಷ್ಯನ್ ಸಬ್​ಟೈಟಲ್​​ನಲ್ಲಿ ಕೆಜಿಎಫ್ 2 ರಿಲೀಸ್:

ರಷ್ಯಾದಲ್ಲೂ ‘ಕೆಜಿಎಫ್ 2’ ರಿಲೀಸ್ ಆಗಲಿದೆ. ಕನ್ನಡ ಸೇರಿದಂತೆ ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದು ವಿಶೇಷ. ರಷ್ಯನ್ನರಿಗೆ ಇಂಗ್ಲೀಷ್ ಅಷ್ಟಾಗಿ ಬರದ ಕಾರಣ, ರಷ್ಯನ್ ಸಬ್​ಟೈಟಲ್​ ಮೂಲಕವೇ ಚಿತ್ರವನ್ನು ತೆರೆಕಾಣಿಸಲಾಗುತ್ತಿದೆ.

ಬ್ರಿಟನ್​​ನಲ್ಲಿ ಬುಕ್ಕಿಂಗ್​ನಲ್ಲಿ ದಾಖಲೆ:

ಬ್ರಿಟನ್​ನಲ್ಲಿ ‘ಕೆಜಿಎಫ್ 2’ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಕೇವಲ 12 ಗಂಟೆಗಳ ಅವಧಿಯಲ್ಲಿ 5,000 ಟಿಕೆಟ್​ಗಳು ಸೇಲ್ ಆಗಿವೆ. ಇದುವರೆಗೆ ಯಾವುದೇ ಭಾರತೀಯ ಚಿತ್ರವು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಿ-ಬುಕ್ಕಿಂಗ್ ಆಗಿರಲಿಲ್ಲ ಎಂದು ಹೇಳಲಾಗಿದೆ.

‘ಕೆಜಿಎಫ್​ 2’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್​ನ ಖ್ಯಾತ ನಟ ಸಂಜಯ್ ದತ್​ ಅಧೀರನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ರವೀನಾ ಟಂಡನ್​ ಹಲವು ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಮರಳುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್​ ಚಿತ್ರದಲ್ಲಿ ನಟಿಸಿದ್ದಾರೆ. ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​ ಪ್ರತಿಭೆಗೆ ಎಷ್ಟೊಂದು ಗೌರವ ಕೊಟ್ಟ ‘ಕೆಜಿಎಫ್​: ಚಾಪ್ಟರ್​ 2’ ತಂಡ; ರಾರಾಜಿಸುತ್ತಿವೆ ಪೋಸ್ಟರ್​ಗಳು

Samantha: ‘ತೆರೆಯ ಮೇಲೆ ಮತ್ತೆ ಒಂದಾಗಲಿದ್ದಾರೆ ಚೈ- ಸ್ಯಾಮ್’; ಸಮಂತಾ- ನಾಗ ಚೈತನ್ಯ ಕುರಿತ ಈ ಸುದ್ದಿಯ ಅಸಲಿಯತ್ತೇನು?

Follow us on

Related Stories

Most Read Stories

Click on your DTH Provider to Add TV9 Kannada