KGF 2: ‘ಯಶ್ ಬಹಳ ಪ್ರತಿಭಾವಂತ ನಟ’; ರಾಕಿಂಗ್ ಸ್ಟಾರ್ ಬಗ್ಗೆ ರವೀನಾ ವಿಶೇಷ ಮಾತು

KGF 2: ‘ಯಶ್ ಬಹಳ ಪ್ರತಿಭಾವಂತ ನಟ’; ರಾಕಿಂಗ್ ಸ್ಟಾರ್ ಬಗ್ಗೆ ರವೀನಾ ವಿಶೇಷ ಮಾತು
ಯಶ್, ರವೀನಾ ಟಂಡನ್ (ಸಂಗ್ರಹ ಚಿತ್ರ)

Yash | Raveena Tandon | Sanjay Dutt: ‘ಕೆಜಿಎಫ್ ’ ಚಿತ್ರ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಯಶ್ ಜತೆಗೆ ಸಂಜಯ್ ದತ್, ರವೀನಾ ಟಂಡನ್ ಮೊದಲಾದ ತಾರೆಯರು ಬಣ್ಣಹಚ್ಚಿದ್ದಾರೆ. ಇದೀಗ ರವೀನಾ ಯಶ್ ಬಗ್ಗೆ, ಕೆಜಿಎಫ್ 2 ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

TV9kannada Web Team

| Edited By: shivaprasad.hs

Apr 03, 2022 | 3:51 PM

‘ಕೆಜಿಎಫ್ 2’ (KGF 2) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 14ರಂದು ರಿಲೀಸ್ ಆಗುತ್ತಿರುವ ಚಿತ್ರಕ್ಕೆ ಉತ್ತರ ಭಾರತದಲ್ಲೂ ಅಭಿಮಾನಿಗಳು ದೀರ್ಘ ಕಾಲದಿಂದ ಕಾದಿದ್ದಾರೆ. ಅದಕ್ಕೆ ತಕ್ಕಂತೆ ಚಿತ್ರದಲ್ಲಿ ಸಂಜಯ್ ದತ್ (Sanjay Dutt) ಹಾಗೂ ರವೀನಾ ಟಂಡನ್ (Raveena Tandon) ನಟಿಸಿರುವುದು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಚಿತ್ರತಂಡ ಪ್ರಚಾರದ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ತಾವು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ತಾರೆಯರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಾಯಕ ನಟ ಯಶ್ ಕುರಿತಂತೆ ಟ್ರೇಲರ್ ರಿಲೀಸ್ ಈವೆಂಟ್​ನಲ್ಲಿ ಸಂಜಯ್ ದತ್ ಹೊಗಳಿದ್ದರು. ಇದೀಗ ರವೀನಾ ಟಂಡನ್ ಯಶ್ ಬಗ್ಗೆ ಮಾತನಾಡಿದ್ದಾರೆ. ಯಶ್ (Yash) ವೃತ್ತಿಪರತೆಗೆ ಶಹಬ್ಬಾಸ್​ಗಿರಿ ನೀಡಿರುವ ರವೀನಾ, ಚಿತ್ರದ ಬಗ್ಗೆ ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇಟೈಮ್ಸ್​ನೊಂದಿಗೆ ಮಾತನಾಡುತ್ತಾ ರವೀನಾ ಟಂಡನ್, ‘ಕೆಜಿಎಫ್ 2’ ಚಿತ್ರದಲ್ಲಿ ಭಾಗಿಯಾದ ಸಂತಸಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಯಶ್ ಹಾಗೂ ಸಂಜಯ್ ದತ್ ಜತೆ ನಟಿಸುವಾಗಿನ ಅನುಭವಗಳನ್ನು ಅವರು ತೆರೆದಿಟ್ಟಿದ್ದಾರೆ. ‘‘ಸಂಜಯ್ ಜತೆ ಕೆಲಸ ಮಾಡುವುದು ಅದ್ಭುತ ಅನುಭವ. ಯಶ್ ಬಹಳ ಉತ್ತಮ ವ್ಯಕ್ತಿ. ಬಹಳ ಪ್ರತಿಭಾವಂತ ನಟ ಅವರು. ಯಶ್ ಜತೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು’’ ಎಂದು ಹೇಳಿದ್ದಾರೆ ರವೀನಾ.

ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ರವೀನಾ ಮಾತು:

ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಹಲವು ಭಾಷೆಗಳಲ್ಲಿ ಕೆಲಸ ಮಾಡಲು ಕಲಾವಿದರಿಗೆ ಅವಕಾಶ ಸಿಗುತ್ತಿರುವ ಬಗ್ಗೆ ಮಾತನಾಡಿದ ರವೀನಾ, ‘‘ಈಗ ಸಿನಿಮಾವನ್ನು ಯಾವುದೇ ಗಡಿಗಳಾಚೆಗೂ ಗುರುತಿಸುತ್ತಾರೆ. ಭಾಷೆಗಿಂತ ಚಿತ್ರದ ಕಂಟೆಂಟ್ ಮುಖ್ಯ. ಈ ಕಾರಣದಿಂದ ಕಲಾವಿದರನ್ನು ಆಯ್ಕೆ ಮಾಡುವಾಗ ಪ್ರತಿಭೆ ಹಾಗೂ ಅನುಭವವನ್ನು ಮಾನದಂಡವಾಗಿಟ್ಟು ಆಫರ್ ನೀಡಲಾಗುತ್ತಿದೆ’’ ಎಂದಿದ್ದಾರೆ.

‘ಕೆಜಿಎಫ್ 1’ ಹಿಂದಿ ಅವತರಣಿಕೆ 44 ಕೋಟಿ ರೂಗಳನ್ನು ಬಾಚಿಕೊಂಡಿತ್ತು. ‘ಕೆಜಿಎಫ್ 2’ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಚಿತ್ರದ ಹಿಂದಿ ಅವತರಣಿಕೆಯ ಹಾಡುಗಳು ಹಾಗೂ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹೀಗಾಗಿ ‘ಕೆಜಿಎಫ್ 2’ ಉತ್ತರ ಭಾರತದಲ್ಲಿ ದಾಖಲೆಯ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಕನ್ನಡದಲ್ಲಿ ತಯಾರಾಗಿರುವ ಚಿತ್ರವು ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ.

ಇದನ್ನೂ ಓದಿ: ‘ಅಕಟಕಟ’ ಜಾನಕಿ ಆಗಿಬಿಟ್ರು ಚೈತ್ರಾ ಆಚಾರ್​; ಕನ್ನಡದ ಟ್ಯಾಲೆಂಟೆಡ್​ ನಟಿಗೆ ಮತ್ತೊಂದು ಅವಕಾಶ

‘ಬಾನದಾರಿಯಲ್ಲಿ’ ಪ್ರೀತಂ ಗುಬ್ಬಿ- ಗಣೇಶ್ ಆಫ್ರಿಕಾ ಪಯಣ; ಹರೆಯದ ಹೃದಯಗಳ ಹಾರೈಕೆ ಕೋರಿದ ಗೋಲ್ಡನ್ ಸ್ಟಾರ್

Follow us on

Related Stories

Most Read Stories

Click on your DTH Provider to Add TV9 Kannada