‘ಅಕಟಕಟ’ ಜಾನಕಿ ಆಗಿಬಿಟ್ರು ಚೈತ್ರಾ ಆಚಾರ್​; ಕನ್ನಡದ ಟ್ಯಾಲೆಂಟೆಡ್​ ನಟಿಗೆ ಮತ್ತೊಂದು ಅವಕಾಶ

‘ಅಕಟಕಟ’ ಜಾನಕಿ ಆಗಿಬಿಟ್ರು ಚೈತ್ರಾ ಆಚಾರ್​; ಕನ್ನಡದ ಟ್ಯಾಲೆಂಟೆಡ್​ ನಟಿಗೆ ಮತ್ತೊಂದು ಅವಕಾಶ
ಚೈತ್ರಾ ಆಚಾರ್

ಕನ್ನಡದ ‘ಅಕಟಕಟ’ ಸಿನಿಮಾಗೆ ನಟಿ ಚೈತ್ರಾ ಆಚಾರ್ ಅವರು ಹೀರೋಯಿನ್​ ಆಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾಗೆ ನಾಗರಾಜ್​ ಸೋಮಯಾಜಿ ನಿರ್ದೇಶನ ಮಾಡುತ್ತಿದ್ದಾರೆ.

TV9kannada Web Team

| Edited By: Madan Kumar

Apr 03, 2022 | 3:15 PM

ನಟಿ ಚೈತ್ರಾ ಆಚಾರ್​ (Chaitra Achar) ಅವರು ಕನ್ನಡ ಚಿತ್ರರಂಗದಲ್ಲಿ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಿರುವ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ (Sandalwood) ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ನಟನೆಗೆ ಸ್ಕೋಪ್​ ಇರುವಂತಹ ಪಾತ್ರಗಳನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆಯೇ ವಿಶೇಷ ಕಥಾಹಂದರ ಇರುವ ಸಿನಿಮಾಗಳೇ ಅವರನ್ನು ಹುಡುಗಿಕೊಂಡು ಬರುತ್ತಿವೆ. ಕೆಲವೇ ದಿನಗಳ ಹಿಂದೆ ಅವರು ‘ಗಿಲ್ಕಿ’ ಸಿನಿಮಾದಲ್ಲಿ ಒಂದು ಚಾಲೆಂಜಿಂಗ್​ ಪಾತ್ರ ಮಾಡಿದ್ದರು. ಈಗ ಹೊಸ ಸಿನಿಮಾದಲ್ಲಿನ ಪ್ರಮುಖ ಪಾತ್ರಕ್ಕೆ ಅವರು ಆಯ್ಕೆ ಆಗಿದ್ದಾರೆ. ಕನ್ನಡದ ‘ಅಕಟಕಟ’ (Akatakata Kannada Movie) ಚಿತ್ರಕ್ಕೆ ಚೈತ್ರಾ ಆಚಾರ್​ ನಾಯಕಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಜಾನಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಸುದ್ದಿಯನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಯುಗಾದಿ ಹಬ್ಬದ ಈ ಸಂದರ್ಭದಲ್ಲಿ ಹೊಸ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ನಾಯಕಿಯ ಆಯ್ಕೆಯನ್ನು ಖಚಿತಪಡಿಸಿದೆ ‘ಅಕಟಕಟ’ ಸಿನಿಮಾ ತಂಡ. ಡಿಫರೆಂಟ್​ ಆದ ಶೀರ್ಷಿಕೆಯಿಂದಲೇ ಈ ಚಿತ್ರ ಗಮನ ಸೆಳೆಯುತ್ತಿದೆ. ಈಗ ಕಲಾವಿದರ ಆಯ್ಕೆಯಿಂದ ಇನ್ನಷ್ಟು ಕುತೂಹಲ ಮೂಡಿಸುತ್ತಿದೆ.

ನಾಗರಾಜ್​ ಸೋಮಯಾಜಿ ಅವರು ‘ಅಕಟಕಟ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್‌ ನಟಿಸಿದ್ದ ‘ಪುಕ್ಸಟ್ಟೆ ಲೈಫು’ ಸಿನಿಮಾವನ್ನು ನಿರ್ಮಾಣ ಮಾಡಿದ್ದವರು ಇದೇ ನಾಗರಾಜ್​ ಸೋಮಯಾಜಿ ಅವರು. ಉತ್ತಮವಾದ, ಸಂವೇದನಾಶೀಲ ಕಥೆಯ ಕಾರಣಕ್ಕಾಗಿ ಆ ಚಿತ್ರವು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಹೀಗೆ ಸದಭಿರುಚಿಯ ಸಿನಿಮಾಗಳನ್ನು ಮಾಡುವ ಮೂಲಕ ನಾಗರಾಜ್‌ ಸೋಮಯಾಜಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗ ಅವರು ‘ಅಕಟಕಟ’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ನಿರ್ದೇಶಕ ನಾಗರಾಜ್‌ ಸೋಮಯಾಜಿ ಅವರು ಮೂಲತಃ ಫೋಟೋಗ್ರಾಫರ್‌. ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗೆ ಇದೆ. ಈಗಲೂ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಅವರು ಒಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ‘ಅಕಟಕಟ’ ಸಿನಿಮಾಗೆ ಕಥೆ ಬರೆದು, ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಹೀರೋ ಯಾರು ಎಂಬುದನ್ನು ಮೊದಲು ತಿಳಿಸಲಾಗುತ್ತದೆ. ನಂತರ ನಾಯಕಿಯ ಆಯ್ಕೆ ನಡೆಯುತ್ತದೆ. ಆದರೆ ‘ಅಕಟಕಟ’ ಚಿತ್ರತಂಡ ಬೇರೆ ಮಾರ್ಗ ಅನುಸರಿಸುತ್ತಿದೆ. ನಾಯಕನಿಗಿಂತಲೂ ಮುನ್ನವೇ ನಾಯಕಿಯ ಪರಿಚಯ ಮಾಡಿಕೊಡಲಾಗಿದೆ. ಹೀರೋಯಿನ್​ ಆಗಿ ಚೈತ್ರಾ ಆಚಾರ್​ ಆಯ್ಕೆ ಆಗಿದ್ದಾರೆ. ಹೀರೋ ಯಾರು? ಪಾತ್ರವರ್ಗದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇದ್ದಾರೆ? ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಕೆಲಸ ಮಾಡಲಿದ್ದಾರೆ ಎಂಬ ಬಗ್ಗೆ ವಿವರನ್ನು ನಂತರದ ದಿನಗಳಲ್ಲಿ ಬಿಟ್ಟುಕೊಡಲು ನಿರ್ದೇಶಕರು ನಿರ್ಧರಿಸಿದ್ದಾರೆ.

ಹೇಗಿದೆ ಚೈತ್ರಾ ಆಚಾರ್​ ಪಾತ್ರ?

ಈ ಮೊದಲೇ ಹೇಳಿದಂತೆ ನಟಿ ಚೈತ್ರಾ ಆಚಾರ್​ ಅವರು ಭಿನ್ನವಾದಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಫೇಮಸ್​ ಆಗಿದ್ದಾರೆ. ‘ಅಕಟಕಟ’ ಸಿನಿಮಾದಲ್ಲಿ ಅವರಿಗೆ ಜಾನಕಿ ಎಂಬ ಪಾತ್ರವನ್ನು ನೀಡಲಾಗಿದೆ. ಯಾವಾಗಲೂ ಖುಷಿಯಾಗಿ ಜೀವನ ಸಾಗಿಸುವ ಹುಡುಗಿಯ ಪಾತ್ರ ಇದು. ನೆಗೆಟಿವ್ ವಿಚಾರಗಳನ್ನು ಬದಿಗಿಟ್ಟು ಪಾಸಿಟಿವ್ ಬಗ್ಗೆ ಆಲೋಚಿಸುವ, ಮಧ್ಯಮ ವರ್ಗದ ಹುಡುಗಿ ಈ ಜಾನಕಿ. ಅಂಥ ಪಾತ್ರದಲ್ಲಿ ಚೈತ್ರಾ ಆಚಾರ್​ ಕಾಣಿಸಿಕೊಳ್ಳಲಿದ್ದಾರೆ. ಹೀರೋ ಬದುಕಿಗೆ ಜಾನಕಿ ಎಂಟ್ರ ನೀಡಿದಾಗ ಏನೆಲ್ಲ ಆಗುತ್ತದೆ ಎಂಬುದು ಕಥಾಕೌತುಕ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳೇ ಚೈತ್ರಾ ಆಚಾರ್​ ಅವರಿಗೆ ಸಿಗುತ್ತಿದೆ. ಈ ಮೊದಲು ಅವರು ‘ಮಹಿರ’ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ರಾಜ್​ ಬಿ. ಶೆಟ್ಟಿ, ವರ್ಜೀನಿಯಾ ರಾಡ್ರಿಗಸ್​ ಮುಂತಾದ ಪ್ರತಿಭಾವಂತ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು. ‘ಗಿಲ್ಕಿ’, ‘ತಲೆದಂಡ’ ಮುಂತಾದ ಸಿನಿಮಾಗಳಲ್ಲೂ ಅವರ ಪಾತ್ರ ಗಮನಾರ್ಹವಾಗಿದೆ.

ಇದನ್ನೂ ಓದಿ:

‘ಪುಕ್ಸಟ್ಟೆ ಲೈಫು’ ವಿಮರ್ಶೆ: ಭರಪೂರ ನಗಿಸಿ ಚೆಂದದ ಸಂದೇಶ ಕೊಟ್ಟುಹೋದ ಸಂಚಾರಿ ವಿಜಯ್​

ಜಯತೀರ್ಥ, ಸತ್ಯ ಮೆಚ್ಚಿದ ‘ಗಿಲ್ಕಿ’ ಟ್ರೇಲರ್​; ಇದು ಅಪರೂಪದ ಪ್ರೇಮಕಥೆಯ ವಿಭಿನ್ನ ಪ್ರಯತ್ನ

Follow us on

Most Read Stories

Click on your DTH Provider to Add TV9 Kannada