ಬಿಗ್​ ಬಾಸ್​ ವೈಷ್ಣವಿ ಗೌಡ ಹೊಸ ಸಿನಿಮಾ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ಇದರಲ್ಲಿದೆ ಡಿಫರೆಂಟ್​ ಕಾನ್ಸೆಪ್ಟ್​​

ಬಿಗ್​ ಬಾಸ್​ ವೈಷ್ಣವಿ ಗೌಡ ಹೊಸ ಸಿನಿಮಾ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ಇದರಲ್ಲಿದೆ ಡಿಫರೆಂಟ್​ ಕಾನ್ಸೆಪ್ಟ್​​
ವೈಷ್ಣವಿ ಗೌಡ, ಮಹೇಶ್ ಗೌಡ

ಯುಗಾದಿ ಹಬ್ಬದ ಪ್ರಯುಕ್ತ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರದ ಟೈಟಲ್​ ಮತ್ತು ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಈ ಚಿತ್ರದಲ್ಲಿ ವೈಷ್ಣವಿ ಗೌಡ ಮತ್ತು ಮಹೇಶ್​ ಗೌಡ ಜೋಡಿ ಆಗಿದ್ದಾರೆ.

TV9kannada Web Team

| Edited By: Madan Kumar

Apr 03, 2022 | 5:24 PM

ನಟಿ ವೈಷ್ಣವಿ ಗೌಡ (Vaishnavi Gowda) ಅವರು ಕಿರುತೆರೆಯಲ್ಲಿ ಸಖತ್​ ಫೇಮಸ್​. ‘ಅಗ್ನಿಸಾಕ್ಷಿ’ ಸೀರಿಯಲ್​ನಲ್ಲಿ ಸನ್ನಿಧಿ ಪಾತ್ರ ಮಾಡಿದ್ದ ಅವರು ನಂತರ ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೈ ಎನಿಸಿಕೊಂಡರು. ದೊಡ್ಮನೆಯಲ್ಲಿ ಇದ್ದಷ್ಟು ದಿನವೂ ಅವರು ಜನಮೆಚ್ಚುಗೆ ಗಳಿಸಿದ್ದರು. ಯಾವುದೇ ಕಾಂಟ್ರವರ್ಸಿ ಮಾಡಿಕೊಳ್ಳದೇ ಗಮನ ಸೆಳೆದಿದ್ದರು. ಕೆಲವು ಸಿನಿಮಾಗಳಲ್ಲಿಯೂ ವೈಷ್ಣವಿ ಗೌಡ ನಟಿಸಿದ್ದಾರೆ. ಈಗ ಅವರ ಇನ್ನೊಂದು ಹೊಸ ಸಿನಿಮಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಜೊತೆಗೆ ಪೋಸ್ಟರ್​ ಕೂಡ ರಿಲೀಸ್​ ಮಾಡಲಾಗಿದೆ. ಈ ಸಿನಿಮಾಗೆ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ (Bili Chukki Halli Hakki) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಡಿಫರೆಂಟ್​ ಕಾನ್ಸೆಪ್ಟ್​ ಇದೆ. ಆ ಕುರಿತು ಚಿತ್ರತಂಡ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದೆ. ಮಹೇಶ್​ ಗೌಡ (Mahesh Gowda) ಅವರು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿವಾಹಿತ ಮಹಿಳೆಯಾಗಿ ವೈಷ್ಣವಿ ಗೌಡ ಕಾಣಿಸಿಕೊಳ್ಳಲಿದ್ದಾರೆ. ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ಈ ಚಿತ್ರ ತಯಾರಾಗಲಿದೆ.

ನಿರ್ದೇಶಕ ಮಹೇಶ್​ ಗೌಡ ಅವರು ಈ ಹಿಂದೆ ‘ಮಹಿರ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದರು. ತಾಯಿ-ಮಗಳ ಹೋರಾಟದ ಕಥೆಯನ್ನು ಆ ಚಿತ್ರ ಹೊಂದಿತ್ತು. ಈಗ ಮತ್ತೊಂದು ಡಿಫರೆಂಟ್​ ಕಾನ್ಸೆಪ್ಟ್​ ಇಟ್ಟುಕೊಂಡು ಅವರು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರವನ್ನು ಕಟ್ಟಿಕೊಡಲು ಮುಂದಾಗಿದ್ದಾರೆ. ಟೈಟಲ್​ ಮತ್ತು ಫಸ್ಟ್​ಲುಕ್​ ಪೋಸ್ಟರ್​ ಮೂಲಕವೇ ಸಿನಿಪ್ರಿಯರ ಗಮನ ಸೆಳೆಯಲು ಅವರು ಪ್ರಯತ್ನಿಸಿದ್ದಾರೆ.

ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿ ಬರಲಿರುವ 2ನೇ ಸಿನಿಮಾ ಇದು. ಈ ಚಿತ್ರಕ್ಕೆ ಅವರೇ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಕೂಡ ಹೂಡುತ್ತಿದ್ದಾರೆ. ‘ಹೊನ್ನುಡಿ ಪ್ರೊಡಕ್ಷನ್’ ಬ್ಯಾನರ್​ ಮೂಲಕ ಮಹೇಶ್ ಗೌಡ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ದಿನೇಶ್ ಎಂಬ ಪಾತ್ರಕ್ಕೂ ಅವರು ಬಣ್ಣ ಹಚ್ಚುತ್ತಿದ್ದಾರೆ. ಕವಿತಾ ಎಂಬ ಹಳ್ಳಿ ಹುಡುಗಿಯಾಗಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ಮಹೇಶ್ ಗೌಡ ಮತ್ತು ವೈಷ್ಣವಿ ಗೌಡ ಅವರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಥಾನಾಯಕ ದಿನೇಶ್​ಗೆ ತೊನ್ನು (ವಿಟಿಲಿಗೋ) ಸಮಸ್ಯೆ ಇರುತ್ತದೆ. ಅವನು ಪಕ್ಕದ ಊರಿನ ಸುಂದರ ಹುಡುಗಿ ಕವಿತಾ ಜೊತೆ ಮದುವೆ ಆಗುತ್ತಾನೆ. ತನ್ನ ಸಮಸ್ಯೆ ಗೊತ್ತಿದ್ದರೂ ಕೂಡ ಕವಿತಾ ತನ್ನನ್ನು ಮದುವೆ ಆಗೋದು ಯಾಕೆ ಅನ್ನೋ ಗೊಂದಲ ದಿನೇಶ್​ನನ್ನು ಕಾಡುತ್ತಿರುತ್ತದೆ. ಈ ಕಥೆಯನ್ನು ಕಾಮಿಡಿ ಶೈಲಿಯಲ್ಲಿ ಹೇಳೋದೇ ದೊಡ್ಡ ಸವಾಲಿನ ಕೆಲಸ ಎಂದಿದ್ದಾರೆ ನಿರ್ದೇಶಕ ಮಹೇಶ್​ ಗೌಡ.

‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಪ್ರಕಾರದಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ಭರಪೂರ ಮನರಂಜನೆಯ ಜೊತೆಗೆ ಮೆಸೇಜ್​ ಕೂಡ ಇರಲಿದೆ ಎನ್ನಲಾಗಿದೆ. ಈಗಾಗಲೇ ಪೋಸ್ಟರ್​ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಟೈಟಲ್​ ಮತ್ತು ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ನಟಿ ವೈಷ್ಣವಿ ಅವರ ವೃತ್ತಿಜೀವನದಲ್ಲಿ ಇದೊಂದು ಭಿನ್ನ ಸಿನಿಮಾ ಆಗಲಿದೆ ಎಂಬ ಭರವಸೆ ಮೂಡಿದೆ.

‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾದ ಶೀರ್ಷಿಕೆ ಜೊತೆ ಇರುವ ‘Untouched Romance Unspoken Concept’ ಎಂಬ ಟ್ಯಾಗ್​ಲೈನ್​ ಕೂಡ ಗಮನ ಸೆಳೆಯುತ್ತಿದೆ. ವಿಟಿಲಿಗೋ ಸಮಸ್ಯೆ ಕುರಿತು ಭಾರತದಲ್ಲಿ ತಯಾರಾಗಲಿರುವ ಮೊಟ್ಟ ಮೊದಲ ಸಿನಿಮಾ ಎಂದು ಕೂಡ ಈ ಚಿತ್ರದ ಪೋಸ್ಟರ್​ನಲ್ಲಿ ಬರೆಯಲಾಗಿದೆ. ಈ ಎಲ್ಲ ಕಾರಣಗಳಿಂದ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ:

‘ಅಕಟಕಟ’ ಜಾನಕಿ ಆಗಿಬಿಟ್ರು ಚೈತ್ರಾ ಆಚಾರ್​; ಕನ್ನಡದ ಟ್ಯಾಲೆಂಟೆಡ್​ ನಟಿಗೆ ಮತ್ತೊಂದು ಅವಕಾಶ

Niharika Konidela: ರೇವ್​ ಪಾರ್ಟಿ ಮೇಲೆ ಪೊಲೀಸ್​ ದಾಳಿ; ಚಿರಂಜೀವಿ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೆಲಾ ವಶಕ್ಕೆ​

Follow us on

Related Stories

Most Read Stories

Click on your DTH Provider to Add TV9 Kannada