Niharika Konidela: ರೇವ್​ ಪಾರ್ಟಿ ಮೇಲೆ ಪೊಲೀಸ್​ ದಾಳಿ; ಚಿರಂಜೀವಿ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೆಲಾ ವಶಕ್ಕೆ​

Rave Party | Niharika Konidela: ಐಷಾರಾಮಿ ಹೋಟೆಲ್​ನಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ನಿಹಾರಿಕಾ ಕೊನಿಡೆಲಾ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆಯಲಾಗಿದೆ.

Niharika Konidela: ರೇವ್​ ಪಾರ್ಟಿ ಮೇಲೆ ಪೊಲೀಸ್​ ದಾಳಿ; ಚಿರಂಜೀವಿ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೆಲಾ ವಶಕ್ಕೆ​
ನಿಹಾರಿಕಾ ಕೊನಿಡೆಲಾ
Follow us
TV9 Web
| Updated By: ಮದನ್​ ಕುಮಾರ್​

Updated on:Apr 03, 2022 | 4:34 PM

ಸೆಲೆಬ್ರಿಟಿಗಳ ವಲಯದಲ್ಲಿ ಮತ್ತೆ ಮಾದಕ ವಸ್ತುಗಳ ಕುರಿತಾದ ವಿಚಾರ ಸದ್ದು ಮಾಡಲು ಆರಂಭಿಸಿದೆ. ಹೈದರಾಬಾದ್​ನಲ್ಲಿ ರೇವ್​ ಪಾರ್ಟಿ (Rave Party) ನಡೆಯುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ನಗರದ ಬಂಜಾರ ಹಿಲ್ಸ್​ನಲ್ಲಿ ಇರುವ ಖಾಸಗಿ ಹೋಟೆಲ್​ನಲ್ಲಿ ರೇವ್​ ಪಾರ್ಟಿ ನಡೆಯುತ್ತಿತ್ತು. ಅದರಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳ ಮಕ್ಕಳು, ಸೆಲೆಬ್ರಿಟಿ ಕುಟುಂಬದ ಕುಡಿಗಳು ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಹೋಟೆಲ್​ನಲ್ಲಿ ಇದ್ದ ನಟಿ ನಿಹಾರಿಕಾ ಕೊನಿಡೆಲಾ  (Niharika Konidela) ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೆಲುಗು ನಟ ನಾಗಬಾಬು ಅವರ ಪುತ್ರಿ ನಿಹಾರಿಕಾ ಅವರು ಆ ಹೋಟೆಲ್​ನಲ್ಲಿ ಏನು ಮಾಡುತ್ತಿದ್ದರು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ‘ಮೆಗಾ ಸ್ಟಾರ್​​’​ ಚಿರಂಜೀವಿ  (Megastar Chiranjeevi) ಕುಟುಂಬದ ಮನೆ ಮಗಳು ಎಂಬ ಕಾರಣಕ್ಕೆ ನಿಹಾರಿಕಾ ಅವರ ಬಂಧನದ ವಿಷಯ ಹೆಚ್ಚು ವೈರಲ್​ ಆಗಿದೆ. ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಂಜಾರಾ ಹಿಲ್ಸ್​ ಠಾಣೆಯ ಪೊಲೀಸರು ಬಳಿಕ ಅವರನ್ನು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ನಿಹಾರಿಕಾ ಅವರು ಪೊಲೀಸ್​ ಠಾಣೆಯಿಂದ ಹೊರಬರುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೈದರಾಬಾದ್​ನ 5 ಸ್ಟಾರ್​ ಹೋಟೆಲ್​ನಲ್ಲಿ ಶನಿವಾರ (ಏ.2) ಮಧ್ಯರಾತ್ರಿ ರೇವ್​ ಪಾರ್ಟಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಂದಾಜು 150 ಜನರನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ನಿಹಾರಿಕಾ ಕೊನಿಡೆಲಾ, ಬಿಗ್​ ಬಾಸ್​ ತೆಲುಗು ವಿನ್ನರ್​ ರಾಹುಲ್ ಕೂಡ ಇದ್ದರು. ಇನ್ನೂ ಅನೇಕ ಸೆಲೆಬ್ರಿಟಿಗಳ ಮಕ್ಕಳ ಹೆಸರು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಆ ಬಗ್ಗೆ ಇನ್ನಷ್ಟು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಭಾನುವಾರ ಮಧ್ಯಾಹ್ನ 12 ಗಂಟೆವರೆಗೂ ನಿಹಾರಿಕಾ ಕೊನಿಡೆಲಾ ಅವರು ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಇದ್ದರು. ಬಳಿಕ ಅವರನ್ನು ಬಿಟ್ಟು ಕಳಿಸಲಾಯಿತು. ಪೊಲೀಸ್​ ಠಾಣೆಯಿಂದ ಹೊರಬರುವ ವೇಳೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಪ್ರಯತ್ನಿಸಿದರು. ಆದರೆ ವಿಹಾರಿಕಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರೇವ್​ ಪಾರ್ಟಿಯಲ್ಲಿ ಅವರು ತೊಡಗಿಕೊಂಡಿದ್ದರಾ? ಹೋಟೆಲ್​ನಲ್ಲಿ ಅವರು ಏನು ಮಾಡುತ್ತಿದ್ದರು? ಈ ಎಲ್ಲ ಪ್ರಶ್ನೆಗಳ ಕುರಿತಂತೆ ತನಿಖೆ ನಡೆಯುತ್ತಿದೆ.​

ಮಧ್ಯರಾತ್ರಿ ಬಳಿಕ ಹೋಟೆಲ್​ ತೆರೆಯಲು ಅನುಮತಿ ನೀಡಿರಲಿಲ್ಲ. ದಾಳಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಪತ್ತೆ ಆಗಿವೆ. ಆ ಕಾರಣಕ್ಕಾಗಿ ನಿಹಾರಿಕಾ, ರಾಹುಲ್​ ಮುಂತಾದವರನ್ನು ವಶಕ್ಕೆ ಪಡೆಯಲಾಯಿತು. ಸದ್ಯ ತನಿಖೆ ಜಾರಿಯಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ. ಘಟನೆ ಕುರಿತಂತೆ ನಿಹಾರಿಕಾ ತಂದೆ ನಾಗ ಬಾಬು ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಪುತ್ರಿಯ ಪರವಾಗಿ ಅವರು ಮಾತನಾಡಿದ್ದಾರೆ.

‘ಅನುಮತಿ ಇಲ್ಲದ ವೇಳೆಯಲ್ಲಿ ಪಬ್​ ತೆರೆದಿದ್ದಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಿಹಾರಿಕಾ ಏನೂ ತಪ್ಪು ಮಾಡಿಲ್ಲ ಎಂದು ನಮಗೆ ಪೊಲೀಸರು ಹೇಳಿದ್ದಾರೆ. ಆ ಸ್ಥಳದಲ್ಲಿ ಇದ್ದರು ಎಂಬ ಕಾರಣಕ್ಕೆ ನಿಹಾರಿಕಾರನ್ನು ವಶಕ್ಕೆ ಪಡೆಯಲಾಯಿತು. ಬೇರೆ ಯಾವುದೇ ರೀತಿಯ ಗಾಳಿ ಸುದ್ದಿ ಹರಡಬಾರದು ಎನ್ನುವ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ನಾಗ ಬಾಬು ಹೇಳಿದ್ದಾರೆ.

ಇದನ್ನೂ ಓದಿ:

ಮೆಗಾ ನಟಿ ನಿಹಾರಿಕಾ ಮದುವೆ: ಅದ್ದೂರಿ ವಿವಾಹ, ದುಬಾರಿ ಉಡುಗೊರೆಗಳು..

ರಾಜಸ್ತಾನದಲ್ಲಿ ಮೆಗಾ ಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾಳ ಅದ್ದೂರಿ ಮೆಹಂದಿ ಕಾರ್ಯಕ್ರಮ..

Published On - 4:02 pm, Sun, 3 April 22

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್