ರಾಜಸ್ತಾನದಲ್ಲಿ ಮೆಗಾ ಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾಳ ಅದ್ದೂರಿ ಮೆಹಂದಿ ಕಾರ್ಯಕ್ರಮ..
ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಚಿರು ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಮೆಹಂದಿ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿದೆ. ಕೊರೊನಾದಿಂದ ಮನೆಯಲ್ಲೇ ಇದ್ದ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಸ್ತ್ ಎಂಜಾಯ್ ಮಾಡಿದ್ದಾರೆ.

ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಚಿರು ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಮೆಹಂದಿ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿದೆ. ಕೊರೊನಾದಿಂದ ಮನೆಯಲ್ಲೇ ಇದ್ದ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಸ್ತ್ ಎಂಜಾಯ್ ಮಾಡಿದ್ದಾರೆ.
ರಾಜಸ್ಥಾನದ ಉದಯ್ ಪುರದಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ತಡರಾತ್ರಿ ಜರುಗಿದ ಮೆಹಂದಿ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಅಲ್ಲು ಅರ್ಜುನ್, ನಿರ್ಮಾಪಕ ಅಲ್ಲು ಅರವಿಂದ, ರಾಮಚರಣ್ ಸೇರಿದಂತೆ ಅನೇಕ ನಟ-ನಟಿಯರು ಭಾಗಿಯಾಗಿದ್ದರು. ಈ ವೇಳೆ ನಿಹಾರಿಕಾ, ನಾಗಬಾಬು, ಚಿರಂಜಿವಿ ಹಾಗೂ ಕುಟುಂಬಸ್ಥರು, ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದ್ರು.
ಕೊರೊನಾ ಹಿನ್ನೆಲೆಯಲ್ಲಿ ಮದುವೆಯನ್ನು ಸರಳವಾಗಿ ಹಾಗೂ ಖಾಸಗಿಯಾಗಿ ಮಾಡಲು ಕುಟುಂಬಗಳು ನಿರ್ಧರಿಸಿವೆ. ಇಂದು (ಡಿ.09) ರಾಜಸ್ಥಾನದ ಉದಯ್ ಪುರದಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ವಿವಾಹ ಜರುಗಲಿದೆ.
ನಿಹಾರಿಕಾ ಮದುವೆಯಾಗುತ್ತಿರುವ ಹುಡುಗ ಯಾರು? ಗುಂಟೂರಿನ ಐಜಿಪಿ ಜೆ.ಪ್ರಭಾಕರ್ ರಾವ್ ಪುತ್ರ ಚೈತನ್ಯ ನಿಹಾರಿಕಾಳನ್ನ ವರಿಸಲಿದ್ದಾನೆ. ಚೈತನ್ಯ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಹೈದರಾಬಾದ್ನ ಪ್ರತಿಷ್ಠಿತ ಕಂಪನಿಯಲ್ಲಿ ಬ್ಯುಸಿನೆಸ್ ಸ್ಟ್ರಾಟಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಹಾರಿಕಾ ಮತ್ತು ಚೈತನ್ಯ ಅವರದ್ದು ಸಂಪೂರ್ಣ ಅರೆಂಜ್ ಮ್ಯಾರೇಜ್ ಆಗಿದೆ.
ಟಾಲಿವುಡ್ ದಿಗ್ಗಜ ನಟರ ಕುಟುಂಬದಲ್ಲಿ ಸಂಭ್ರಮ, ನೆರವೇರಿತು ನಿಹಾರಿಕಾಳ ಎಂಗೇಜ್‌ಮೆಂಟ್











