ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ, ಎಸ್ಕೇಪ್ ಆದ ಹಂತಕರು..
ತಡರಾತ್ರಿ ಮನೆಗೆ ನುಗ್ಗಿ ಲಾಂಗು ಮಚ್ಚುಗಳಿಂದ ಲಿಂಗರಾಜ್(42) ಎಂಬಾತನನ್ನು ಕೊಚ್ಚಿ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ.
ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಮರವಳ್ಳಿ ಗ್ರಾಮದಲ್ಲಿ ನಡೆದಿದೆ.
ತಡರಾತ್ರಿ ಮನೆಗೆ ನುಗ್ಗಿ ಲಾಂಗು ಮಚ್ಚುಗಳಿಂದ ಲಿಂಗರಾಜ್(42) ಎಂಬಾತನನ್ನು ಕೊಚ್ಚಿ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಲಿಂಗರಾಜ್ ಲಾಕ್ಡೌನ್ ಬಳಿಕ ಊರಿಗೆ ಮರಳಿ, ಕಮರವಳ್ಳಿಯಲ್ಲಿ ಕೋಳಿ ಫಾರಂ ನಡೆಸುತ್ತಿದ್ದರು.
ಹತ್ಯೆಗೀಡಾದ ಲಿಂಗರಾಜ್ ತನ್ನ ಸಹೋದರನ ಜೊತೆಗೆ ವಾಸವಾಗಿದ್ದು, ಹತ್ಯೆ ವೇಳೆ ಅಡ್ಡ ಬಂದ ಸಹೋದರನಿಗೂ ಹಂತಕರಿಂದ ಹಲ್ಲೆ ನಡೆದಿದೆ. ಸ್ಥಳಕ್ಕೆ ಹಿರೀಸಾವೆ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
Published On - 10:14 am, Wed, 9 December 20