ರೈತ ಹೋರಾಟಕ್ಕೆ ಜೈ ಜೈ! ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ನಟಿ ಲೀಲಾವತಿ
ನನಗೆ ಸಿನಿಮಾಕ್ಕಿಂತ ರೈತಾಪಿ ಕೆಲಸವೇ ಹಿತ ಎನ್ನಿಸಿದೆ. ಓರ್ವ ರೈತಳಾಗಿ ನಾನು ರೈತರ ಹೋರಾಟವನ್ನು ಬೆಂಬಲಿಸುತ್ತೇನೆ. ಎಲ್ಲರೂ ರೈತರ ಪರ ನಿಲ್ಲಬೇಕು ಎಂದಿದ್ದಾರೆ ನಟಿ ಲೀಲಾವತಿ.
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ತೀವ್ರವಾಗಿದೆ. ಹಾಗೇ ರೈತರ ಬೆಂಬಲಕ್ಕೆ ನಿಲ್ಲುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಟ್ವೀಟ್ ಮೂಲಕ ತಾವು ರೈತರೊಂದಿಗೆ ನಿಲ್ಲುವುದಾಗಿ ಹೇಳಿಕೊಂಡಿದ್ದರು. ಇಂದು ಹಿರಿಯ ನಟಿ ಲೀಲಾವತಿ, ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಮಾತನಾಡಿ, ರೈತರು ಕೆಸರಲ್ಲಿ ಎತ್ತುಗಳ ತರ ಉರುಳಾಡಿ, ಹೊರಳಾಡಿ ಕಷ್ಟಪಡುತ್ತಾನೆ. ಅವನ ಮನಸು ನೊಂದರೆ ಎಲ್ಲರಿಗೂ ಕಷ್ಟವಾಗುತ್ತದೆ. ನಿಮ್ಮ ಒಗ್ಗಟ್ಟಿನಿಂದ ರೈತರಿಗೆ ಒಳ್ಳೆಯದು ಮಾಡಿ..ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ಸರ್ಕಾರ ದಯವಿಟ್ಟು ವಾಪಸ್ ಪಡೆಯಲಿ ಎಂದಿದ್ದಾರೆ.
ನನಗೆ ಸಿನಿಮಾಕ್ಕಿಂತ ರೈತಾಪಿ ಕೆಲಸವೇ ಹಿತ ಎನ್ನಿಸಿದೆ. ಓರ್ವ ರೈತಳಾಗಿ ನಾನು ರೈತರ ಹೋರಾಟವನ್ನು ಬೆಂಬಲಿಸುತ್ತೇನೆ. ಎಲ್ಲರೂ ರೈತರ ಪರ ನಿಲ್ಲಬೇಕು. ಪ್ರತಿಭಟನೆಯನ್ನು ಬೆಂಬಲಿಸಬೇಕು ಎಂದು ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಹೋರಾಟಕ್ಕೆ ‘ಭಜರಂಗಿ’ ಬಲ: ರೈತರೊಂದಿಗೆ ನಾವು ಇರ್ತೇವೆ ಎಂದ್ರು ಶಿವರಾಜ್ಕುಮಾರ್