Samantha: ‘ತೆರೆಯ ಮೇಲೆ ಮತ್ತೆ ಒಂದಾಗಲಿದ್ದಾರೆ ಚೈ- ಸ್ಯಾಮ್’; ಸಮಂತಾ- ನಾಗ ಚೈತನ್ಯ ಕುರಿತ ಈ ಸುದ್ದಿಯ ಅಸಲಿಯತ್ತೇನು?

Naga Chaitanya: ನಾಗ ಚೈತನ್ಯ ಹಾಗೂ ಸಮಂತಾ ವೈಯಕ್ತಿಕ ಕಾರಣಗಳಿಂದ ಬೇರೆಯಾಗಿದ್ದಾರೆ. ಈರ್ವರೂ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಹೊಸ ಚಿತ್ರವೊಂದರಲ್ಲಿ ಈರ್ವರೂ ಜತೆಯಾಗಿ ತೆರೆಹಂಚಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಅಸಲಿಯತ್ತೇನು? ಇಲ್ಲಿದೆ ನೋಡಿ.

Samantha: ‘ತೆರೆಯ ಮೇಲೆ ಮತ್ತೆ ಒಂದಾಗಲಿದ್ದಾರೆ ಚೈ- ಸ್ಯಾಮ್’; ಸಮಂತಾ- ನಾಗ ಚೈತನ್ಯ ಕುರಿತ ಈ ಸುದ್ದಿಯ ಅಸಲಿಯತ್ತೇನು?
ಸಮಂತಾ, ನಾಗ ಚೈತನ್ಯ
Follow us
TV9 Web
| Updated By: shivaprasad.hs

Updated on: Apr 05, 2022 | 9:39 AM

ಸಮಂತಾ (Samantha) ಹಾಗೂ ನಾಗ ಚೈತನ್ಯ (Naga Chaitanya) ಟಾಲಿವುಡ್​ನ ಸ್ಟಾರ್ ಜೋಡಿಯಾಗಿದ್ದವರು. ಆದರೆ ವೈಯಕ್ತಿಕ ಕಾರಣಗಳಿಂದ ಈರ್ವರೂ 4 ವರ್ಷಗಳ ದಾಂಪತ್ಯ ಜೀವನವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದರು. ಇದೀಗ ಈರ್ವರೂ ತಮ್ಮ ತಮ್ಮ ವೈಯಕ್ತಿಕ ಬದುಕಿನಲ್ಲಿ ಮುಳುಗಿಹೋಗಿದ್ದಾರೆ. ಆದರೆ ಅಭಿಮಾನಿ ವಲಯದಲ್ಲಿ ಹೊಸ ಸುದ್ದಿ ಹರಡಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ. ಕೆಲವು ವರದಿಗಳ ಪ್ರಕಾರ ಸ್ಯಾಮ್ ಹಾಗೂ ಚೈ ಮತ್ತೆ ಒಟ್ಟಾಗಿ ತೆರೆಯ ಮೇಲೆ ನಟಿಸಲಿದ್ದಾರಂತೆ. ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಈರ್ವರೂ ಸಿನಿಮಾಗಾಗಿ ಒಂದಾಗಲಿದ್ದಾರೆ ಎಂದು ಕೆಲವು ವರದಿಗಳಲ್ಲಿ ಹೇಳಲಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಕೇಳಿ ಥ್ರಿಲ್ ಆಗಿದ್ದರು. ಆದರೆ ಇದರ ಅಸಲಿಯತ್ತೇನು? ನಿಜವಾಗಿಯೂ ಸಮಂತಾ ಹಾಗೂ ನಾಗ ಚೈತನ್ಯ ಜತೆಯಾಗಿ ನಟಿಸುತ್ತಾರಾ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಲಭಿಸಿದೆ.

ವಿಚ್ಛೇದನ ಘೋಷಿಸಿದ ನಂತರ ಸಮಂತಾ ಮೊದಲಿಗಿಂತಲೂ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಪುಷ್ಪ: ದಿ ರೈಸ್’ ಚಿತ್ರದ ಐಟಂ ಸಾಂಗ್​ನಲ್ಲಿ ನಟಿ ಹೆಜ್ಜೆಹಾಕಿದ್ದರು. ಇದು ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ಇದಲ್ಲದೇ ನಟಿ ಮತ್ತೊಂದು ವೆಬ್​ ಸೀರೀಸ್​ನಲ್ಲಿ ನಟಿಸುತ್ತಿದ್ದಾರೆ. ಇಂಗ್ಲೀಷ್ ಚಿತ್ರವೊಂದರಲ್ಲೂ ನಟಿ ಬಣ್ಣಹಚ್ಚಲಿದ್ದಾರೆ.

ಇತ್ತ ನಾಗ ಚೈತನ್ಯ ಬಾಲಿವುಡ್ ಪ್ರವೇಶಕ್ಕೆ ಅಣಿಯಾಗಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಮೂಲಕ ಅವರಿಗೆ ಬಿಟೌನ್​ನಲ್ಲಿ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುವ ನಿರೀಕ್ಷೆಗಳಿವೆ. ಟಾಲಿವುಡ್​ನಲ್ಲೂ ನಾಗ ಚೈತನ್ಯ ಸಖತ್ ಬ್ಯುಸಿಯಾಗಿದ್ದಾರೆ.

ಸಮಂತಾ- ನಾಗ ಚೈತನ್ಯ ಹೊಸ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಾರಾ?

ಈ ನಡುವೆ ಸಮಂತಾ ಹಾಗೂ ನಾಗ ಚೈತನ್ಯ ಮತ್ತೆ ಜತೆಯಾಗಿ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಟಾಲಿವುಡ್​ನಲ್ಲಿ ನಂದಿನಿ ರೆಡ್ಡಿ ಜನಪ್ರಿಯ ನಿರ್ದೇಶಕಿಯರಲ್ಲೊಬ್ಬರು. ಸಮಂತಾ ಹಾಗೂ ನಾಗ ಚೈತನ್ಯಗೆ ಅವರು ಆಪ್ತರು. ಈ ಹಿಂದೆ ನಂದಿನಿ ರೆಡ್ಡಿ ನಿರ್ದೇಶಿಸಿದ್ದ ‘ಓಹ್ ಬೇಬಿ’ ದೊಡ್ಡ ಹಿಟ್ ಆಗಿತ್ತು. ಅದರಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಆ ಚಿತ್ರದ ಸಂದರ್ಭದಲ್ಲೇ ನಾಗ ಚೈತನ್ಯ ಹಾಗೂ ಸಮಂತಾಗೆ ಕತೆಯೊಂದನ್ನು ನಂದಿನಿ ಹೇಳಿದ್ದರಂತೆ. ಹೊಸ ಕತೆಗೆ ಸಂಬಂಧಪಟ್ಟಂತೆ ಸಮಂತಾ ಹಾಗೂ ನಾಗ ಚೈತನ್ಯರನ್ನು ತೆರೆಯತ ಮೇಲೆ ಒಂದಾಗಿಸಲು ನಂದಿನಿ ರೆಡ್ಡಿ ಪ್ರಯತ್ನಿಸುತ್ತಿದ್ದಾರೆ ಎಂದು ಹಲವು ವರದಿಗಳು ಹೇಳಿದ್ದವು.

ಆದರೆ ಈ ವರದಿಗಳ ಅಸಲಿಯತ್ತೇನು ಎಂಬುದು ಚರ್ಚೆಯಾಗುತ್ತಿದೆ. ಕಾರಣ, ಸ್ಯಾಮ್​ಗೆ ಆಪ್ತರಾಗಿರುವ ನಂದಿನಿ ರೆಡ್ಡಿ ಮತ್ತೆ ಸಮಂತಾ ಹಾಗೂ ನಾಗ ಚೈತನ್ಯರನ್ನು ತೆರೆಯ ಮೇಲೆ ತರುವುದು ಅನುಮಾನ. ಕಾರಣ, ಸಮಂತಾಗೆ ಮುಜುಗರ ಉಂಟಾಗುವ ಯಾವ ಸಂದರ್ಭಗಳಿಗೂ ನಂದಿನಿ ರೆಡ್ಡಿ ಕಾರಣರಾಗುವುದಿಲ್ಲ. ಹೀಗಾಗಿ ಹೊಸ ಕತೆಗೆ ನಾಗ ಚೈತನ್ಯರಿಗೆ ಹೊಸ ನಾಯಕಿಯನ್ನು ನಂದಿನಿ ಹುಡುಕಬಹುದು. ಈಗಾಗಲೇ ಅವರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಂದಿನಿ ರೆಡ್ಡಿ ಹೊಸ ಚಿತ್ರದ ಬಗ್ಗೆ ಹಾಗೂ ಪಾತ್ರದ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಗಳು ಆಗಬೇಕಿದೆ. ಹೀಗಾಗಿ ಸದ್ಯಕ್ಕಂತೂ ಸ್ಯಾಮ್ ಹಾಗೂ ನಾಗ ಚೈತನ್ಯ ತೆರೆಯ ಮೇಲೆ ಒಂದಾಗುವುದು ಕಷ್ಟ ಎನ್ನುತ್ತಿವೆ ವರದಿಗಳು.

ಇದನ್ನೂ ಓದಿ: Rashmika Mandanna: ಪಡ್ಡೆ ಹುಡುಗರ ನಿದ್ದೆಗೆಡಿಸುವ ರಶ್ಮಿಕಾ ಮಂದಣ್ಣ; ಇಲ್ಲಿವೆ ನಟಿಯ ಬೋಲ್ಡ್ ಫೋಟೋಗಳು

Shriya Saran: ಸಾಂಪ್ರದಾಯಿಕ ಗೆಟಪ್​ನಲ್ಲಿ ‘ಕಬ್ಜ’ ಬೆಡಗಿ ಶ್ರಿಯಾ ಶರಣ್; ಇಲ್ಲಿದೆ ಫೋಟೋ ಆಲ್ಬಂ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?