AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿ ಸೋನಂ ಕಪೂರ್​ ಮನೆಯಲ್ಲಿ ಕಳ್ಳತನ; ನಟಿಯ ಕುಟುಂಬದವರು ಕಳೆದುಕೊಂಡಿದ್ದೆಷ್ಟು?

ದೆಹಲಿ ಮನೆಯಲ್ಲಿ 25 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆ. ಹೊರಗಿನಿಂದ ಬೇರೆಯವರು ಬಂದು ಕಳ್ಳತನ ಮಾಡಲು ಸಾಧ್ಯವಿಲ್ಲ ಅನ್ನೋದು ಪೊಲೀಸರು ಅಭಿಪ್ರಾಯ. ಹೀಗಾಗಿ, ಮನೆಯ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.

ಗರ್ಭಿಣಿ ಸೋನಂ ಕಪೂರ್​ ಮನೆಯಲ್ಲಿ ಕಳ್ಳತನ; ನಟಿಯ ಕುಟುಂಬದವರು ಕಳೆದುಕೊಂಡಿದ್ದೆಷ್ಟು?
ಸೋನಂ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Apr 09, 2022 | 3:24 PM

Share

ಸೋನಂ ಕಪೂರ್ ಹಾಗೂ ಆನಂದ್ ಅಹುಜಾ (Anand Ahuja) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ. ಈ ಕಾರಣಕ್ಕೆ ಸೋನಂ​ (Sonam Kapoor) ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರಿಗೆ ಶಾಕ್​ ನೀಡುವಂತಹ ಘಟನೆ ಒಂದು ನಡೆದಿದೆ. ಸೋನಂ ಹಾಗೂ ಆನಂದ್ ಅವರು ಮುಂಬೈ ಮಾತ್ರವಲ್ಲದೆ, ನಾನಾ ನಗರಗಳಲ್ಲಿ ಮನೆ ಹೊಂದಿದ್ದಾರೆ. ಆ ಪೈಕಿ ದೆಹಲಿ ನಿವಾಸದಲ್ಲಿ ಕಳ್ಳತನವಾಗಿದೆ. ಅತ್ಯಮೂಲ್ಯ ವಸ್ತುಗಳು ಹಾಗೂ ನಗದನ್ನು ಕದ್ದೊಯ್ಯಲಾಗಿದೆ (Robbery). ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.

ದೆಹಲಿ ಮನೆಯಲ್ಲಿ ಸೋನಂ ವಾಸ ಮಾಡುತ್ತಿಲ್ಲ. ಆದರೆ, ಅವರ ಮಾವ ಹರೀಶ್ ಅಹುಜಾ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ವಾಸವಾಗಿದ್ದಾರೆ. ಇವರ ಜತೆಗೆ ಆನಂದ್​ ಅವರ ಅಜ್ಜಿ ಸರಳಾ ಅಹುಜಾ ಕೂಡ ಇವರ ಜತೆಗೇ ಇದ್ದಾರೆ. ಇತ್ತೀಚೆಗೆ ಪ್ರಿಯಾ ಅವರು ಕಬೋರ್ಡ್​ ತೆಗೆದು ನೋಡಿದ್ದರು. ಈ ವೇಳೆ ಜ್ಯುವೆಲರಿ ಹಾಗೂ ನಗದು ಕಾಣೆ ಆಗಿರುವುದು ಗಮನಕ್ಕೆ ಬಂದಿದೆ.  ಕಳೆದ ಎರಡು ವರ್ಷಗಳಿಂದ ಕೊವಿಡ್ ಇದ್ದ ಕಾರಣ ಪ್ರಿಯಾ ಹೆಚ್ಚು ಸುತ್ತಾಟ ನಡೆಸಿಲ್ಲ. ಈ ಕಾರಣಕ್ಕೆ ಅವರು ಜ್ಯುವೆಲರಿ ಬಳಕೆ ಮಾಡಿಲ್ಲ. ಜ್ಯುವೆಲರಿ ಇರುವ ಕಬೋರ್ಡ್​ ಕೊನೆಯ ಬಾರಿ ತಾವು ​ಪರಿಶೀಲಿಸಿದ್ದು ಎರಡು ವರ್ಷಗಳ ಹಿಂದೆ ಎಂದು ಅವರು ಹೇಳಿಕೊಂಡಿದ್ದಾರೆ.

ದೆಹಲಿ ಮನೆಯಲ್ಲಿ 25 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆ. ಹೊರಗಿನಿಂದ ಬೇರೆಯವರು ಬಂದು ಕಳ್ಳತನ ಮಾಡಲು ಸಾಧ್ಯವಿಲ್ಲ ಅನ್ನೋದು ಪೊಲೀಸರು ಅಭಿಪ್ರಾಯ. ಹೀಗಾಗಿ, ಮನೆಯ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಕಳೆದುಕೊಂಡಿದ್ದೆಷ್ಟು?

ಮನೆಯಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ದೂರಿನಲ್ಲಿ ಹೇಳಿದ ಪ್ರಕಾರ ಕಳೆದುಕೊಂಡಿರುವ ನಗದು ಮತ್ತು ಆಭರಣಗಳ ಮೌಲ್ಯವನ್ನು ಲೆಕ್ಕ ಹಾಕಿದರೆ 2.41 ಕೋಟಿ ರೂಪಾಯಿ ಆಗಲಿದೆ. ಈ ಕಾರಣಕ್ಕೆ ಕುಟುಂಬದವರಿಗೆ ಸಹಜವಾಗಿಯೇ ಚಿಂತೆಗೆ ಒಳಗಾಗಿದ್ದಾರೆ.

ಈ ಮೊದಲು ಹೀಗೆಯೇ ಆಗಿತ್ತು..

ಹರೀಶ್ ಅಹುಜಾ ಅವರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಅವರು ವಂಚನೆಗೆ ಒಳಗಾಗಿದ್ದರು. ಆನಂದ್ ಅವರಿಗೆ 27 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿತ್ತು.

ಮಗುವಿನ ನಿರೀಕ್ಷೆಯಲ್ಲಿ ಸೋನಂ

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಗುತ್ತಿದೆ. ಪ್ರೆಗ್ನೆನ್ಸಿ​ ಫೋಟೋ ಹಂಚಿಕೊಂಡು ಸೋನಂ​ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!

Sonam Kapoor: ತಾಯಿ ಆಗುತ್ತಿದ್ದಾರೆ ಸೋನಂ​ ಕಪೂರ್; ಪ್ರೆಗ್ನನ್ಸಿ ಫೋಟೋ ಹಂಚಿಕೊಂಡ ನಟಿ

Published On - 2:52 pm, Sat, 9 April 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ