Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 2’ ಹಾಗೂ ‘ಬೀಸ್ಟ್​’ ಚಿತ್ರಗಳಿಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಇಲ್ಲಿದೆ ವಿವರ

‘ಕೆಜಿಎಫ್​ 2’ನಲ್ಲಿ ಯಶ್ ನಟಿಸಿದರೆ, ‘ಬೀಸ್ಟ್’ ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹೈಪ್​ ಪಡೆದುಕೊಂಡಿವೆ.

‘ಕೆಜಿಎಫ್​ 2’ ಹಾಗೂ ‘ಬೀಸ್ಟ್​’ ಚಿತ್ರಗಳಿಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಇಲ್ಲಿದೆ ವಿವರ
ವಿಜಯ್-ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 08, 2022 | 4:07 PM

ಯಶ್ (Yash)​ ನಟನೆಯ ‘ಕೆಜಿಎಫ್​ ಚಾಪ್ಟರ್​ 2’  (KGF Chapter 2) ಹಾಗೂ ‘ದಳಪತಿ’ ವಿಜಯ್​ ನಟನೆಯ ‘ಬೀಸ್ಟ್’ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿವೆ. ಏಪ್ರಿಲ್​ 13ರಂದು ‘ಬೀಸ್ಟ್’​ ರಿಲೀಸ್​ ಆದರೆ, ‘ಕೆಜಿಎಫ್​ ಚಾಪ್ಟರ್​ 2’ ಏಪ್ರಿಲ್​ 14ರಂದು ಬಿಡುಗಡೆ ಆಗುತ್ತಿದೆ. ‘ಕೆಜಿಎಫ್​’ ಬಳಿಕ ಕನ್ನಡದ ಚಿತ್ರವೊಂದು ತಮಿಳುನಾಡಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು. ಹಾಗಾದರೆ, ತಮಿಳುನಾಡಿನಲ್ಲಿ ‘ಕೆಜಿಎಫ್​ 2’ಗೆ ಎಷ್ಟು ಥಿಯೇಟರ್​ಗಳು ಸಿಗುತ್ತಿವೆ? ಬೀಸ್ಟ್​ಗೆ (Beast Movie) ಎಷ್ಟು ಚಿತ್ರಮಂದಿರಗಳು ಸಿಗುತ್ತಿವೆ ಎನ್ನುವ ಬಗ್ಗೆ ಈಗ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

‘ಕೆಜಿಎಫ್​’ ಸಿನಿಮಾ ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಿತ್ತು. ಈಗ ‘ಕೆಜಿಎಫ್​ 2’ ಕೂಡ ಸಖತ್ ಹೈಪ್​ ಪಡೆದುಕೊಂಡೇ ಬಿಡುಗಡೆ ಆಗುತ್ತಿದೆ. ‘ಕೆಜಿಎಫ್​ 2’ನಲ್ಲಿ ಯಶ್ ನಟಿಸಿದರೆ, ‘ಬೀಸ್ಟ್’ ಚಿತ್ರದಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹೈಪ್​ ಪಡೆದುಕೊಂಡಿವೆ. ಎರಡೂ ಸಿನಿಮಾಗಳು ದೊಡ್ಡ ಬಜೆಟ್​ನಲ್ಲೇ ಸಿದ್ಧಗೊಂಡಿವೆ. ‘ಎರಡೂ ಚಿತ್ರಗಳ ನಡುವೆ ಸ್ಪರ್ಧೆ ಎನ್ನುವ ಮಾತಿಲ್ಲ’ ಎಂದು ಚಿತ್ರತಂಡದವರೇ ಹೇಳಿಕೊಂಡಿದ್ದಾರೆ. ಆದಾಗ್ಯೂ, ಯಾವ ಚಿತ್ರಕ್ಕೆ ಎಷ್ಟು ಥಿಯೇಟರ್ ಸಿಕ್ಕಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ತಮಿಳುನಾಡು ಚಲನಚಿತ್ರ ವಿತರಕರ ಒಕ್ಕೂಟದ ಮಾಹಿತಿ ಪ್ರಕಾರ ಸದ್ಯದ ಮಟ್ಟಿಗೆ, ‘ಬೀಸ್ಟ್​’ ಸಿನಿಮಾ ತಮಿಳುನಾಡಿನಲ್ಲಿ 800 ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ದಳಪತಿ ವಿಜಯ್​ಗೆ ತಮಿಳುನಾಡಿಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಕಾರಣಕ್ಕೆ ಚಿತ್ರಕ್ಕೆ ಹೆಚ್ಚು ಥಿಯೇಟರ್​ ಸಿಕ್ಕಿದೆ. ‘ಕೆಜಿಎಫ್​ 2’ ತಮಿಳುನಾಡಿನಲ್ಲಿ 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಇದರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಶಾರುಖ್​ ಖಾನ್​ಗೆ ಹೋಲಿಸಬೇಡಿ ಎಂದ ಯಶ್

ಯಶ್ ಅವರನ್ನು ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಯಶ್ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ ಯಶ್​. ಅಷ್ಟೇ ಅಲ್ಲ, ಈ ರೀತಿಯ ಹೋಲಿಕೆ ಮಾಡಬೇಡಿ ಎಂದು ಕೂಡ ಯಶ್ ಕೋರಿದ್ದಾರೆ. ಅವರು ಈ ರೀತಿ ಹೇಳುವುದಕ್ಕೂ ಒಂದು ಮಹತ್ವದ ಕಾರಣವಿದೆ. ಯಶ್ ಸಿನಿಮಾ ರಂಗಕ್ಕೆ ಬರುವ ಸಂದರ್ಭದಲ್ಲಿ ಸಲ್ಮಾನ್​ ಹಾಗೂ ಶಾರುಖ್​ ಸಾಕಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು. ಈಗ ಇವರಿಗೆ ತಮ್ಮನ್ನು ಹೋಲಿಕೆ ಮಾಡಿದರೆ ಅದು ಸ್ಟಾರ್ ನಟರಿಗೆ ಅಗೌರವ ತೋರಿದಂತೆ ಅನ್ನೋದು ಯಶ್ ಅಭಿಪ್ರಾಯ.

‘ನಾನು ಸಿನಿಮಾ ಮಗು. ಅವರ ಸಿನಿಮಾ ನೋಡುತ್ತಾ ಬೆಳೆದವನು ನಾನು. ಇಲ್ಲಿ ಯಾವುದೂ ಶಾಶ್ವತವಲ್ಲ. ಅವರು ಸೂಪರ್‌ಸ್ಟಾರ್‌ಗಳು. ಅವರನ್ನು ಅಗೌರವಿಸುವುದು ಮತ್ತು ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ತಪ್ಪು. ನಾನು ನಟನಾಗಲು ಇವರಿಬ್ಬರೇ ಸ್ಫೂರ್ತಿ. ಇವರಿಬ್ಬರೂ ಇಂಡಸ್ಟ್ರಿಯ ಆಧಾರ ಸ್ತಂಭ’ ಎಂದು ಬಾಯ್ತುಂಬ ಹೊಗಳಿದ್ದಾರೆ ಯಶ್. ಈ ಮೂಲಕ ಈ ಸ್ಟಾರ್​ ನಟರಿಗೆ ತಮ್ಮನ್ನು ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್​ 2’ ಸಿನಿಮಾದಲ್ಲಿ ಇರಲಿದೆ ಬಿಗ್​ ಸರ್​ಪ್ರೈಸ್​; ಚಿತ್ರತಂಡದಿಂದ ದೊಡ್ಡ ಪ್ಲ್ಯಾನ್​

‘ಕೆಜಿಎಫ್​ 2’ ಟಿಕೆಟ್ ಬುಕಿಂಗ್ ಓಪನ್​ ಆದ 12 ಗಂಟೆಯಲ್ಲಿ 1 ಲಕ್ಷ ಟಿಕೆಟ್​ ಸೋಲ್ಡ್​ಔಟ್​; ಉತ್ತರ ಭಾರತದಲ್ಲಿ ಯಶ್ ಹವಾ

ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ