‘ಕೆಜಿಎಫ್​ 2’ ಸಿನಿಮಾದಲ್ಲಿ ಇರಲಿದೆ ಬಿಗ್​ ಸರ್​ಪ್ರೈಸ್​; ಚಿತ್ರತಂಡದಿಂದ ದೊಡ್ಡ ಪ್ಲ್ಯಾನ್​

‘ಕೆಜಿಎಫ್​ 2’ ಸಿನಿಮಾದಲ್ಲಿ ಇರಲಿದೆ ಬಿಗ್​ ಸರ್​ಪ್ರೈಸ್​; ಚಿತ್ರತಂಡದಿಂದ ದೊಡ್ಡ ಪ್ಲ್ಯಾನ್​
ಯಶ್​-ಪ್ರಭಾಸ್

‘ಸಲಾರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದೆ. ಆದರೆ, ಚಿತ್ರದ ಬಗ್ಗೆ ಅಷ್ಟಾಗಿ ಅಪ್ಡೇಟ್​ ಸಿಕ್ಕಿಲ್ಲ. ಈ ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ.

TV9kannada Web Team

| Edited By: Rajesh Duggumane

Apr 07, 2022 | 5:18 PM

‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ (KGF Chapter 2) ಏಪ್ರಿಲ್​ 14ರಂದು ತೆರೆಗೆ ಬರುತ್ತಿದ್ದು, ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾ ಬಗ್ಗೆ ನಿತ್ಯ ಒಂದೊಂದು ಅಪ್​​ಡೇಟ್​ ಸಿಗುತ್ತಿದೆ. ಕೆಲ ಹಿಂದಿ ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಈ ಸಿನಿಮಾದಲ್ಲಿ ಒಂದು ದೊಡ್ಡ ಸರ್​ಪ್ರೈಸ್​ ಇರಲಿದೆ! ಪ್ರಭಾಸ್ (Prabhas) ನಟನೆಯ ‘ಸಲಾರ್’ ಚಿತ್ರದ ಟೀಸರ್​ ‘ಕೆಜಿಎಫ್​ 2’ ಸಿನಿಮಾಗೆ ಅಟ್ಯಾಚ್​ ಆಗಿರಲಿದೆ. ಈ ವಿಚಾರ ಕೇಳಿ ಯಶ್​ (Yash) ಅಭಿಮಾನಿಗಳ ಜತೆಗೆ ಪ್ರಭಾಸ್​ ಫ್ಯಾನ್ಸ್ ಕೂಡ​ ಖುಷಿಪಟ್ಟಿದ್ದಾರೆ.

ದೊಡ್ಡದೊಡ್ಡ ಚಿತ್ರಗಳು ರಿಲೀಸ್​ ಆಗುವಾಗ ಮುಂಬರುವ ಸಿನಿಮಾಗಳ ಟ್ರೇಲರ್ ಅಥವಾ ಟೀಸರ್​ಗಳನ್ನು ಇದೇ ರೀತಿ ಅಟ್ಯಾಟ್​ ಮಾಡಿ ರಿಲೀಸ್ ಮಾಡುವ ಪದ್ಧತಿ ನಡೆದುಕೊಂಡುಬಂದೇ ಇದೆ. ಮಾರ್ಚ್​ 17ರಂದು ತೆರೆಗೆ ಬಂದ ‘ಜೇಮ್ಸ್’ ಸಿನಿಮಾದ ಜತೆಗೆ ‘ಬೈರಾಗಿ’ ಸಿನಿಮಾದ ಟೀಸರ್​ ಪ್ರಸಾರಗೊಂಡಿತ್ತು. ಅದೇ ರೀತಿ ‘ಕೆಜಿಎಫ್​ 2’ ಜತೆಗೆ ‘ಸಲಾರ್​’ ಟೀಸರ್​ ಪ್ರದರ್ಶನ ಕಾಣಲಿದೆ.

‘ಕೆಜಿಎಫ್​ 2’ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್​​’ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದೆ. ವಿಶೇಷ ಎಂದರೆ, ‘ಸಲಾರ್​’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ‘ಸಲಾರ್’ಗೆ ಮತ್ತಷ್ಟು ಪ್ರಚಾರ ನೀಡಬೇಕು ಎನ್ನುವ ಉದ್ದೇಶದಿಂದ ‘ಕೆಜಿಎಫ್​ 2’ ಟೀಸರ್​ಅನ್ನು ‘ಕೆಜಿಎಫ್ 2’ ಸಿನಿಮಾ ಜತೆಗೆ ಅಟ್ಯಾಚ್ ಮಾಡಲಾಗಿದೆ.

‘ಸಲಾರ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದೆ. ಆದರೆ, ಚಿತ್ರದ ಬಗ್ಗೆ ಅಷ್ಟಾಗಿ ಅಪ್ಡೇಟ್​ ಸಿಕ್ಕಿಲ್ಲ. ಈ ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ. ಈಗ ರಿಲೀಸ್ ಆಗಲಿರುವ ಟೀಸರ್​ನಿಂದ​ ಸಿನಿಮಾ ಹೇಗಿರಲಿದೆ ಎಂಬುದರ ಚಿಕ್ಕ ಗ್ಲಿಂಪ್ಸ್ ಸಿಗಲಿದೆ.

‘ಬಾಹುಬಲಿ 2’ (2017) ಚಿತ್ರದ ಜತೆಗೆ ‘ಸಾಹೋ’ ಸಿನಿಮಾದ (2019) ಟೀಸರ್ ರಿಲೀಸ್ ಆಗಿತ್ತು.  ಈಗ ಇದೇ ಮಾದರಿಯಲ್ಲಿ ‘ಸಲಾರ್’ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಈ ಮೂಲಕ ‘ಕೆಜಿಎಫ್ 2’ ಚಿತ್ರದಲ್ಲಿ ‘ಸಲಾರ್’ ಬಗ್ಗೆಯೂ ಅಪ್​ಡೇಟ್​ ಸಿಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಬೇಕಿದೆ.

‘ಕೆಜಿಎಫ್​ 2’ ಚಿತ್ರ ಏಪ್ರಿಲ್​ 14ರಂದು ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ. ಸಿನಿಮಾದಲ್ಲಿ ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್​, ರವೀನಾ ಟಂಡನ್ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಪರಭಾಷೆಯಲ್ಲಿ ಚಿತ್ರದ ಬುಕ್ಕಿಂಗ್ ಶುರುವಾಗಿದೆ.

ಇದನ್ನೂ ಓದಿ: KGF Chapter 2: ಮುಂಬೈನಲ್ಲಿ ‘ಕೆಜಿಎಫ್ 2’ ಚಿತ್ರತಂಡ; ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್- ಇಲ್ಲಿವೆ ಫೋಟೋಗಳು

KGF 2: ಕರ್ನಾಟಕದಲ್ಲಿ ‘ಕೆಜಿಎಫ್ 2’ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

Follow us on

Related Stories

Most Read Stories

Click on your DTH Provider to Add TV9 Kannada